Site icon Vistara News

Karnataka Election 2023: ಡಾ. ಕ್ರಾಂತಿಕಿರಣ ಭರ್ಜರಿ ರೋಡ್‌ ಶೋ, ಮನೆ ಮನೆ ಪ್ರಚಾರ; ಒಲವು ತೋರಿದ ಮತದಾರ

Dr Krantikiran a grand roadshow and door to door campaigning Karnataka Election 2023 updates

ಹುಬ್ಬಳ್ಳಿ: ವಿಧಾನಸಭಾ ಚುನಾವಣೆಗೆ (Karnataka Election 2023) ಇನ್ನು ಮೂರೇ ದಿನ ಬಾಕಿ ಇದೆ. ರಾಜಕೀಯ ಪಕ್ಷಗಳಲ್ಲಿ ಪ್ರಚಾರದ ಭರಾಟೆ ಜೋರಾಗಿದೆ. ಅಲ್ಲದೆ, ಅಭ್ಯರ್ಥಿಗಳು ಬಿರುಸಿನ ಪ್ರಚಾರವನ್ನು ಕೈಗೊಂಡಿದ್ದಾರೆ. ಇದೇ ವೇಳೆ ಹುಬ್ಬಳ್ಳಿ- ಧಾರವಾಡ ಪೂರ್ವ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಡಾ. ಕ್ರಾಂತಿಕಿರಣ ಅವರು ಭರ್ಜರಿ ರೋಡ್‌ ಶೋ ನಡೆಸಿದ್ದಾರೆ. ಜತೆಗೆ ಮನೆ ಮನೆಗೆ ತೆರಳಿ ಪ್ರಚಾರವನ್ನೂ ನಡೆಸುತ್ತಿದ್ದಾರೆ.

ಮಂಟೂರು ರಸ್ತೆ, ಅಯೋಧ್ಯಾ ನಗರದಲ್ಲಿ ಪಾದಯಾತ್ರೆ ಮೂಲಕ ಮತಯಾಚನೆ ಮಾಡಿರುವ ಡಾ. ಕ್ರಾಂತಿಕಿರಣ ಅವರು, ತಮ್ಮ ಈ ಬಾರಿಯ ಕನಸುಗಳೇನು? ಬಿಜೆಪಿಗೆ ಮತ ಹಾಕಿದರೆ ಜನರಿಗೆ ಯಾವ ರೀತಿ ಅಭಿವೃದ್ಧಿಯನ್ನು ಮಾಡುತ್ತೇನೆ? ಕ್ಷೇತ್ರವನ್ನು ಹೇಗೆ ಮಾದರಿಯನ್ನಾಗಿ ಮಾಡುತ್ತೇನೆ ಎಂಬಿತ್ಯಾದಿ ಅಂಶಗಳನ್ನು ಇಟ್ಟುಕೊಂಡು ಮತ ಕೇಳುತ್ತಿದ್ದಾರೆ. ಅಲ್ಲದೆ, ಇದಕ್ಕೆ ಮತದಾರರಿಂದಲೂ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ.

ಮತಯಾಚನೆಯಲ್ಲಿ ನಿರತರಾಗಿರುವ ಡಾ. ಕ್ರಾಂತಿಕಿರಣ ಅವರು ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿದರು.

ಇದನ್ನೂ ಓದಿ: Modi In Karnataka: ಹೂಮಳೆ, ಉದ್ಘೋಷದೊಂದಿಗೆ ಮೋದಿ ರೋಡ್‌ ಶೋ ಸಂಪನ್ನ, ಇಲ್ಲಿವೆ ಫೋಟೊಗಳು

ಮೆರವಣಿಗೆ ವೇಳೆ ಪುಷ್ಪವೃಷ್ಟಿ

ಇದಲ್ಲದೆ, ಪ್ರಮುಖ ರಸ್ತೆಗಳಲ್ಲಿ ಮೆರವಣಿಗೆಯನ್ನೂ ನಡೆಸಿರುವ ಡಾ. ಕ್ರಾಂತಿಕಿರಣ ಅವರಿಗೆ ಜನರಿಂದ ಉತ್ತಮ ಪ್ರತಿಕ್ರಿಯೆ ಸಿಕ್ಕಿದ್ದು, ಪುಷ್ಪವೃಷ್ಟಿ ಸುರಿಸಿದ್ದಾರೆ. ಜಾಂಜ್ ಮೇಳದೊಂದಿಗೆ ಪೂರ್ವ ಕ್ಷೇತ್ರದಲ್ಲಿ ಬಿಜೆಪಿ ಕಾರ್ಯಕರ್ತರೊಂದಿಗೆ ಮೆರವಣಿಗೆ ನಡೆಸಿದ್ದಾರೆ. ರಸ್ತೆಯುದ್ದಕ್ಕೂ ಕೇಸರಿ ಬಾವುಟಗಳು ರಾರಾಜಿಸುತ್ತಿದ್ದವು. ಬಿಜೆಪಿ, ಡಾ. ಕ್ರಾಂತಿಕಿರಣ ಹಾಗೂ ಪ್ರಧಾನಿ ನರೇಂದ್ರ ಮೋದಿ ಪರ ಜಯಘೋಷಗಳು ಈ ಸಂದರ್ಭದಲ್ಲಿ ಮೊಳಗಿದವು.

ಸುಸಜ್ಜಿತ ಆಸ್ಪತ್ರೆ ಸೇರಿ ಅಭಿವೃದ್ಧಿ ಮಾಡುವೆ

ಈ ಬಗ್ಗೆ ವಿಸ್ತಾರ ನ್ಯೂಸ್‌ ಜತೆ ಮಾತನಾಡಿದ ಹುಬ್ಬಳ್ಳಿ- ಧಾರವಾಡ ಪೂರ್ವ ಮೀಸಲು ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಡಾ. ಕ್ರಾಂತಿಕಿರಣ, ಹುಬ್ಬಳ್ಳಿ ಜನರಿಂದ ಪ್ರೀತಿಯ ಸ್ವಾಗತ ಸಿಗುತ್ತಿದ್ದು, ಉತ್ತಮ ಸ್ಪಂದನೆ ದೊರೆತಿದೆ. ಅಲ್ಲದೆ, ಬಿಸಿಲಿನಲ್ಲೂ ಮತದಾರರು ಅತ್ಯುತ್ಸಾಹದಿಂದ ನಮ್ಮನ್ನು ಬರಮಾಡಿಕೊಂಡು ಬೆಂಬಲ ಸೂಚಿಸುತ್ತಿದ್ದಾರೆ. ಕೊರೊನಾ ಸಮಯದಲ್ಲಿ ಮಾಡಿದ ಉಚಿತ ವೈದ್ಯಕೀಯ ಸೇವೆಯನ್ನು ಜನರು ಸ್ಮರಿಸುತ್ತಿದ್ದಾರೆ. ಕಷ್ಟಕಾಲದಲ್ಲಿ ಸ್ಪಂದಿಸಿದ್ದೀರಿ, ನಿಮಗೆ ನಮ್ಮ ಮತ ಎನ್ನುತ್ತಿದ್ದಾರೆ. ಬೃಹತ್‌ ಅಂತರದಿಂದ ಗೆಲ್ಲುವ ವಿಶ್ವಾಸ ಮೂಡುತ್ತಿದೆ. ಹತ್ತು ವರ್ಷಗಳಿಂದ ಕ್ಷೇತ್ರದಲ್ಲಿ ಅಭಿವೃದ್ಧಿ ಕೆಲಸಗಳೇ ಆಗಿಲ್ಲ ಎಂದು ಡಾ. ಕ್ರಾಂತಿಕಿರಣ ಹೇಳಿದರು.

ಇದನ್ನೂ ಓದಿ: Karnataka Election 2023: ಹುಬ್ಬಳ್ಳಿ-ಧಾರವಾಡ ಪೂರ್ವ ಕ್ಷೇತ್ರ: ಜನಮನ ಗೆಲ್ಲುತ್ತಿದ್ದಾರೆ ಬಿಜೆಪಿ ಅಭ್ಯರ್ಥಿ ಡಾ. ಕ್ರಾಂತಿಕಿರಣ

ಕ್ಷೇತ್ರದ ಮಹಿಳೆಯರು ಕಣ್ಣೀರು ಹಾಕುತ್ತಾ ಸಮಸ್ಯೆಯನ್ನು ವಿವರಿಸುತ್ತಿದ್ದಾರೆ. ಗುಣಮಟ್ಟದ ಶಿಕ್ಷಣಕ್ಕೆ ಪೂರ್ವ ಕ್ಷೇತ್ರದಲ್ಲಿ ಕಾಲೇಜುಗಳು ಬರಬೇಕಿದೆ. ಉತ್ತಮ ವೈದ್ಯಕೀಯ ಸೇವೆ ಕೊಡಲು ಸುಸಜ್ಜಿತ ಆಸ್ಪತ್ರೆ ಮಾಡಬೇಕಿದೆ. ರಾಜ್ಯದಲ್ಲಿ ಬಿಜೆಪಿ ಸರ್ಕಾರ ಮತ್ತೊಮ್ಮೆ ಬರಲಿದ್ದು, ಜನರ ಸಂಕಷ್ಟಗಳಿಗೆ ಪರಿಹಾರವನ್ನು ಕಲ್ಪಿಸುತ್ತೇವೆ. ಸ್ಥಳೀಯ ಕಾಂಗ್ರೆಸ್ ಶಾಸಕರ ಬಗ್ಗೆ ಜನರಲ್ಲಿ ತೀವ್ರ ಆಕ್ರೋಶವಿದೆ ಎಂದು ಡಾ. ಕ್ರಾಂತಿಕಿರಣ ಹೇಳಿದರು.

Exit mobile version