Site icon Vistara News

ವಿಶ್ವೇಶ್ವರಯ್ಯ ತಾಂತ್ರಿಕ ವಿವಿ ನೂತನ ಕುಲಪತಿಯಾಗಿ ಡಾ. ವಿದ್ಯಾಶಂಕರ್‌ ನೇಮಕ

Dr. vidyashankar VTU

ಬೆಳಗಾವಿ: ಬೆಳಗಾವಿಯ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವ ವಿದ್ಯಾಲಯದ ನೂತನ ಕುಲಪತಿಗಳಾಗಿ ಡಾ. ವಿದ್ಯಾಶಂಕರ್‌ ಎಸ್. ಅವರನ್ನು ನೇಮಕ ಮಾಡಲಾಗಿದೆ. ರಾಜ್ಯಪಾಲ ಥಾವರಚಂದ್‌ ಗೆಹ್ಲೋಟ್ ಆದೇಶದ ಮೇರೆಗೆ ಡಾ. ವಿದ್ಯಾಶಂಕರ್‌ ಅವರ ನೇಮಕವಾಗಿದ್ದು, ಮುಂದಿನ ಮೂರು ವರ್ಷ ಅವರು ಈ ಹುದ್ದೆಯಲ್ಲಿ ಇರಲಿದ್ದಾರೆ.

ಪ್ರಸಕ್ತ ಕರ್ನಾಟಕ ರಾಜ್ಯ ಮುಕ್ತ ವಿವಿಯ ಕುಲಪತಿ ಆಗಿರುವ ಡಾ. ವಿದ್ಯಾಶಂಕರ ಎಸ್. ಅವರು ಸೆಪ್ಟೆಂಬರ್‌ ೩೦ರಂದು ಹೊಸ ಜವಾಬ್ದಾರಿಯನ್ನು ವಹಿಸಿಕೊಳ್ಳಲಿದ್ದಾರೆ.

ವಿಟಿಯುನ ಹಾಲಿ ಕುಲಪತಿಗಳಾಗಿರುವ ಪ್ರೊ. ಕರಿಸಿದ್ದಪ್ಪ ಅವರು 2016 ಸೆ. 24ರಿಂದ ಅಧಿಕಾರದಲ್ಲಿದ್ದಾರೆ. ಎರಡು ಅವಧಿಗೆ ವಿಟಿಯು ಕುಲಪತಿ ಆಗಿದ್ದ ಪ್ರೊ. ಕರಿಸಿದ್ದಪ್ಪ ಅವರು ಸೆ. 30ರಂದು ಸೇವಾ ನಿವೃತ್ತಿ ಹೊಂದಲಿದ್ದಾರೆ. ಈ ಕಾರಣದಿಂದ ಡಾ. ವಿದ್ಯಾಶಂಕರ್‌ ಅವರನ್ನು ಈ ಹುದ್ದೆಗೆ ನೇಮಿಸಲಾಗಿದೆ.

Exit mobile version