Site icon Vistara News

Drink and Drive!: ಎರಡು ಪೆಗ್‌ ಹಾಕಿ ಡ್ರೈವ್‌ ಮಾಡಲು ಅವಕಾಶ ಕೊಡಿ ಪ್ಲೀಸ್‌; ಲಿಕ್ಕರ್‌ ಅಸೋಸಿಯೇಷನ್‌ ಮನವಿ!

drink and drive

ಬೆಂಗಳೂರು: ದಯವಿಟ್ಟು ಎರಡು ಪೆಗ್ ಎಣ್ಣೆ (Two peg liquor) ಹಾಕಿ ವಾಹನ ಚಲಾಯಿಸಲು (Drink and Drive) ಅವಕಾಶ ಕೊಡಿ ಪ್ಲೀಸ್‌!: ಹೀಗೊಂದು ಮನವಿ ಬಂದಿದೆ. ಬೆಂಗಳೂರು ಪೊಲೀಸ್‌ ಕಮೀಷನರ್‌ (Bangalore Police Commissioner) ಅವರ ಮುಂದೆ ಲಿಕ್ಕರ್ ಅಸೋಸಿಯೇಷನ್ (Liquor Association) ಈ ಮನವಿ ಮಾಡಿದೆ.

ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆಗಳ ಒಕ್ಕೂಟದಲ್ಲಿ (FKCCI) ಶನಿವಾರ ಪೊಲೀಸ್‌ ಕಮೀಷನರ್‌ ದಯಾನಂದ್‌ ಅವರ ಜತೆಗಿನ ಸಂವಾದದಲ್ಲಿ ಈ ವಿಚಾರದ ಚರ್ಚೆ ನಡೆಯಿತು. ಹಲವಾರು ಗಂಭೀರ ವಿಚಾರಗಳು ಈ ಸಂವಾದದಲ್ಲಿ ಚರ್ಚೆಗೆ ಬಂದವು. ಅದರ ನಡುವೆ ಕೆಲವರ ಪಾಲಿಗೆ ತೀರಾ ಗಂಭೀರವಾಗಿರುವ ಡ್ರಂಕ್‌ ಆ್ಯಂಡ್‌ ಡ್ರೈವ್‌ (Drunk and drive) ಪ್ರಕರಣದ ಪ್ರಸ್ತಾಪವೂ ಆಯಿತು.

ʻʻಬೆಂಗಳೂರು ಅಂತರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಂಡಿದೆ.. ಇಲ್ಲಿ ರಾತ್ರಿ ಇಡೀ ಜೀವನ ವ್ಯವಹಾರ ನಡೆಯಬೇಕು ಎಂಬ ಒತ್ತಡವಿದೆ. ಅದಕ್ಕಾಗಿಯೂ ಇದು ಹೆಸರಾಗಿದೆ. ಇಂಥ ಸಂದರ್ಭದಲ್ಲಿ ಡ್ರಂಕ್‌ ಆ್ಯಂಡ್‌ ಡ್ರೈವ್‌ ಪ್ರಕರಣ ಇಲ್ಲಿನ ನಿರಾಳ ಬದುಕಿಗೆ ಅಡ್ಡಿ ಮಾಡಿದೆʼʼ ಎಂಬ ಅಭಿಪ್ರಾಯ ವ್ಯಕ್ತವಾಯಿತು.

ಅದಕ್ಕಿಂತಲೂ ಮುಖ್ಯವಾಗಿದೆ ಸರ್ಕಾರಕ್ಕೆ ಕಮರ್ಷಿಯಲ್ ಟ್ಯಾಕ್ಸ್ ಬಿಟ್ಟರೆ ಅತಿ ಹೆಚ್ಚು ವರಮಾನ ಬರುವುದು ಅಬಕಾರಿ‌ ಇಲಾಖೆಯಿಂದ. ಈ ಇಲಾಖೆ ಎಲ್ಲರಿಗೂ ಬೇಕು. ಆದರೆ, ಯಾರಿಗೂ ಬೇಡ ಎಂಬಂತಿದೆ. ಡ್ರಂಕ್‌ ಆ್ಯಂಡ್‌ ಡ್ರೈವ್‌ ಪ್ರಕರಣ ದಾಖಲಾಗುವುದರಿಂದ ಮದ್ಯ ಪ್ರಿಯರು ಸಂಕಷ್ಟದಲ್ಲಿದ್ದಾರೆ. ಕೇಸ್‌ ಹಾಕ್ತಾರೆ ಅಂತ ಕೆಲವರು ಬೇಕೆಂದರೂ ಕುಡಿಯುವುದಿಲ್ಲ. ಅವರ ಭಯದಿಂದಾಗಿ ಮದ್ಯ ಮಾರಾಟ ಸಾಕಷ್ಟು ಕುಂಠಿತವಾಗಿದೆ. ಆದ್ದರಿಂದ ಡ್ರಂಕ್ ಆ್ಯಂಡ್ ಡ್ರೈವ್ ಗೆ ಇರುವ ಒಂದು ಪೆಗ್ ಲಿಮಿಟ್‌ನ್ನು ಎರಡು ಪೆಗ್‌ಗೆ ಏರಿಸಬೇಕುʼʼ ಎಂದು ಮನವಿ ಮಾಡಿದರು ಲಿಕ್ಕರ್ ಅಸೋಸಿಯೇಷನ್ ಸದಸ್ಯ ವಾಸನ್ ಅವರು. ವಾಸನ್‌ ಅವರ ಈ ಬೇಡಿಕೆಯನ್ನು ಕಮಿಷನರ್‌ ದಯಾನಂದ್‌ ಅವರು ನಗುನಗುತ್ತಲೇ ತಳ್ಳಿ ಹಾಕಿದರು.

ಹಲವು ಸಮಸ್ಯೆಗಳನ್ನು ಹೇಳಿಕೊಂಡ ಉದ್ಯಮಿಗಳು

ಸಂವಾದದಲ್ಲಿ ಉದ್ಯಮಿಗಳು ತಾವು ಎದುರಿಸುತ್ತಿರುವ ಹಲವು ಸಮಸ್ಯೆಗಳನ್ನು ಹೇಳಿಕೊಂಡರು.

  1. ನಗರದ ಬ್ಯುಸಿನೆಸ್ ಏರಿಯಾಗಳಲ್ಲಿ ವಾಹನ ನಿಲ್ಲಿಸಲು ಅವಕಾಶವೇ ಇಲ್ಲದೆ ಸಂಕಷ್ಟ ಎದುರಾಗಿದೆ. ರಸ್ತೆ ಬದಿ ವಾಹನಗಳ ಪಾರ್ಕಿಂಗ್, ಆಟೋ ನಿಲ್ದಾಣಗಳು, ಫುಟ್ ಪಾತ್ ಅಂಗಡಿಗಳ ಕಿರಿಕಿರಿಯಿಂದಾಗಿ ಜನರು ಶಾಪ್‌ಗಳಿಗೆ ಬರುವುದೇ ಕಷ್ಟವಾಗುತ್ತಿದೆ. ನಮ್ಮ ಶಾಪ್‌ಗಳಿಗೆ ಬರಬೇಕು ಎಂದರೆ ಗ್ರಾಹಕರು ತಮ್ಮ ಕಾರುಗಳನ್ನು ಎಲ್ಲೋ ನಿಲ್ಲಿಸಿ ಬರಬೇಕು.
  2. ಪೊಲೀಸ್ ಠಾಣೆಗಳು ಸೆಟಲ್ ಮೆಂಟ್ ಅಡ್ಡಾಗಳಾಗುತ್ತಿವೆ.
  3. ಪೊಲೀಸ್‌ ಅಧಿಕಾರಿಗಳು ಜುವೆಲ್ಲರಿ ಶಾಪ್‌ಗೆ ರಿಕವರಿ ಹೆಸರಿನಲ್ಲಿ ದಾಳಿ ಮಾಡುತ್ತಾರೆ. ಆದರೆ, ಮಾರ್ಗದರ್ಶಿ ಸೂತ್ರಗಳನ್ನು ಪಾಲಿಸುವುದಿಲ್ಲ.
  4. ಚಿಕ್ಕ ಪೇಟೆ, ನಗರತ್ ಪೇಟೆ, ಕೆ ಆರ್ ಮಾರ್ಕೆಟ್ ಅಲ್ಲಿ ಬೀದಿ ಬದಿ ವ್ಯಾಪಾರಿಗಳ ಹಾವಳಿ ಹೆಚ್ಚಾಗಿದೆ.
  5. ರಾತ್ರಿ ಉದ್ಯಮಿಗಳು ಓಡಾಡುವಾಗ ದೋಚುವರ ಸಂಖ್ಯೆ ಹೆಚ್ಚಾಗಿದೆ. ಎನ್ ಪಿ ರಸ್ತೆ, ನಗರತ್ ಪೇಟೆ, ಚಿಕ್ಕಪೇಟೆ ಕೆ ಆರ್ ಮಾರ್ಕೆಟ್ ಅಲ್ಲಿ ರಾಬರಿ ಹೆಚ್ಚಾಗುತ್ತಿದೆ. ಹೀಗಾಗಿ ಬೀಟ್ ವ್ಯವಸ್ಥೆ ಹೆಚ್ಚು ಮಾಡಲು ಮನವಿ.
  6. 24 ಗಂಟೆ ರೆಸ್ಟೊರೆಂಟ್ ತೆರೆಯಲು ಅವಕಾಶ ನೀಡುವಂತೆ ಮನವಿ ಸಲ್ಲಿಕೆ
  7. ಮ್ಯೂಸಿಕ್ ಬಾರ್ ಅಂಡ್ ರೆಸ್ಟೊರೆಂಟ್ ನಿಯಮಗಳ ಸಡಿಲಿಕೆಗೆ ಮನವಿ.
  8. ನಗರದಲ್ಲಿ ವೀಲಿಂಗ್ ಮಾಡುವ ಸಂಖ್ಯೆ ಹೆಚ್ಚಾಗಿದೆ ಅದರ ಬಗ್ಗೆ ಗಮನ ಹರಿಸಲು ಕೋರಿಕೆ

ಕಮಿಷನರ್‌ ದಯಾನಂದ್‌ ಅವರು ನೀಡಿದ ಉತ್ತರವೇನು?

ಉದ್ಯಮಿಗಳ ಬೇಡಿಕೆ ಮತ್ತು ಮನವಿಗೆ ನಗರ ಪೊಲೀಸ್ ಆಯುಕ್ತ ದಯಾನಂದ್‌ ಉತ್ತರ ನೀಡಿದರು. ಉದ್ಯಮ ಸಂಸ್ಥೆಗಳಿಗೆ ಎಲ್ಲ ರೀತಿಯ ಸಹಕಾರದ ಭರವಸೆ ನೀಡಿದರು.

  1. ಈಗಾಗಲೇ ಪ್ರತಿ ತಿಂಗಳ ನಾಲ್ಕನೆ‌ ಶನಿವಾರ ಲಾ ಅಂಡ್ ಅರ್ಡರ್ ಠಾಣೆಯಲ್ಲಿ ಸಾರ್ವಜನಿಕ ಸಭೆ ಆರಂಭ ಆಗಿದೆ. ಪ್ರತಿ ತಿಂಗಳ ಎರಡನೇ ಶನಿವಾರ ಟ್ರಾಫಿಮ್ ಠಾಣೆಗಳಲ್ಲಿ ಸಭೆ ನಡೆಯುತ್ತಿದೆ. ಈ ಸಭೆಗಳಲ್ಲಿ ಮುಕ್ತವಾಗಿ ಭಾಗಿಯಾಗಿ, ಸಲಹೆ ಪಡೆಯಿರಿ, ಸಲಹೆ ಕೊಡಿ.
  2. ಬ್ಯುಸಿನೆಸ್ ಪ್ರದೇಶಗಳಲ್ಲಿ ಬೀಟ್ ವ್ಯವಸ್ಥೆ ಹೆಚ್ಚಿಗೆ ಮಾಡುವ ಭರವಸೆ ನೀಡಿದರು.
  3. ಎಲ್ಲಾ ಶಾಪ್ ಗಳಲ್ಲಿ ಬ್ಯುಸಿನೆಸ್ ಏರಿಯಾದಲ್ಲಿ ಮುಂಜಾಗೃತ ಕ್ರಮ ವಹಿಸುವಂತೆ ಕಮಿಷನರ್‌ ಸಲಹೆ
  4. ಸಿಸಿ ಕ್ಯಾಮರಾ ಅಳವಡಿಸಿ, ಭದ್ರತಾ ಸಿಬ್ಬಂದಿ ನೇಮಕ ಮಾಡಿಕೊಳ್ಳಿ, ಸಿಬ್ಬಂದಿಗಳ ಹಿನ್ನೆಲೆ ಬಗ್ಗೆ ಪರಿಶೀಲನೆ ಮಾಡಿಕೊಳ್ಳಿ ಎಂದು ಸೂಚಿಸಿದರು.
  5. ರಸ್ತೆ ಬದಿ ವ್ಯಾಪಾರಿಗಳನ್ನ ರಿಕ್ಲೈಮ್‌ ಫುಟ್ಪಾತ್ ಹೆಸರಿನಲ್ಲಿ ತೆರವು ಮಾಡುತ್ತಿರುವುದಾಗಿ ತಿಳಿಸಿದರು.
  6. ಟೆಕ್ನಾಲಜಿ ಬಳಸಿ ಟ್ರಾಫಿಕ್ ಕಿರಿಕಿರಿ ತಪ್ಪಿಸಲು ಸತತವಾಗಿ ಪ್ರಯತ್ನ ನಡೆಯುತ್ತಿದೆ. ಇದರಲ್ಲಿ‌ ಕೆಲವು ಕಡೆ ಈಗಾಗಲೇ ಕಾರ್ಯರೂಪಕ್ಕೆ ತಂದಿದ್ದೇವೆ.
  7. ಪಾರ್ಕಿಂಗ್ ಮತ್ತು ಇತರೆ ಸಮಸ್ಯೆ ಬಗೆಹರಿಸಲು ಸಾರ್ವಜನಿಕ ಸಭೆಗೆ ಇತರೆ ಇಲಾಖೆ ಬಿಬಿಎಂಪಿ, BWSSB , ಬೆಸ್ಕಾಂ ಅವರನ್ನು ಕರೆಸುತ್ತಿದ್ದೇವೆ.
  8. ಸೇಫ್‌ ಸಿಟಿ ಪ್ರಾಜೆಕ್ಟ್ ಅಲ್ಲಿ‌ 4.5 ಕ್ಯಾಮರಾ ಅಳವಡಿಕೆ ಅಗಿದೆ. ಇನ್ನು ಮೂರು ಸಾವಿರ ಕ್ಯಾಮೆರಾ ಅಳವಡಿಕೆ ಆಗುತ್ತಿದೆ.
  9. ಹಣಕಾಸು ವ್ಯವಹಾರದಲ್ಲಿ ಪೊಲೀಸರನ್ನು ರಾಜಿ ಪಂಚಾಯಿತಿಕೆಗೆ ಕರೆಯಬೇಡಿ. ನಾವು ಮನಿ ರಿಕವರಿ ಏಜೆಂಟ್‌ಗಳಲ್ಲ.

ಇದನ್ನೂ ಓದಿ: Liquor Consumption: ಬಡವನ ಕುಡಿತದ ವಾರ್ಷಿಕ ಲೆಕ್ಕಾಚಾರ ಇಲ್ಲಿದೆ! ದಿನಕ್ಕೆ ಆತನ ಸರಾಸರಿ ಖರ್ಚೆಷ್ಟು?

ಬೆಂಗಳೂರು: ದಯವಿಟ್ಟು ಎರಡು ಪೆಗ್ ಎಣ್ಣೆ (Two peg liquor) ಹಾಕಿ ವಾಹನ ಚಲಾಯಿಸಲು (Drink and Drive!) ಅವಕಾಶ ಕೊಡಿ ಪ್ಲೀಸ್‌!: ಹೀಗೊಂದು ಮನವಿ ಬಂದಿದೆ. ಬೆಂಗಳೂರು ಪೊಲೀಸ್‌ ಕಮೀಷನರ್‌ (Bangalore Police Commissioner) ಅವರ ಮುಂದೆ ಲಿಕ್ಕರ್ ಅಸೋಸಿಯೇಷನ್ (Liquor Association) ಈ ಮನವಿ ಮಾಡಿದೆ.

ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆಗಳ ಒಕ್ಕೂಟದಲ್ಲಿ (FKCCI) ಶನಿವಾರ ಪೊಲೀಸ್‌ ಕಮೀಷನರ್‌

Exit mobile version