Site icon Vistara News

Heart attack | ರಾಜ್ಯಪಾಲರ ಕರೆದೊಯ್ಯಲು ಏರ್‌ಪೋರ್ಟ್‌ಗೆ ಹೋಗಿದ್ದ ಕಾರು ಚಾಲಕ ಅಲ್ಲೇ ಹೃದಯಾಘಾತದಿಂದ ನಿಧನ

heart attack

ಬೆಂಗಳೂರು: ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರನ್ನು ಕರೆದೊಯ್ಯಲು ವಿಮಾನ ನಿಲ್ದಾಣಕ್ಕೆ ಬಂದಿದ್ದ ಕಾರು ಚಾಲಕ ವಿಮಾನ ನಿಲ್ದಾಣದಲ್ಲೇ ಹೃದಯಾಘಾತಕ್ಕೆ (Heart attack) ಒಳಗಾಗಿ ನಿಧನರಾಗಿದ್ದಾರೆ. ಶನಿವಾರ ತಡರಾತ್ರಿ ಈ ಘಟನೆ ನಡೆದಿದೆ.

ರವಿಕುಮಾರ್ ಎಸ್. ಕಾಳೆ ಮೃತಪಟ್ಟ ದುರ್ದೈವಿ ಚಾಲಕ. ರಾಜ್ಯಪಾಲರು ಶನಿವಾರ ರಾಜ್ಯದ ಬೇರೆ ಬೇರೆ ಭಾಗಗಳಲ್ಲಿ ನಡೆದ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಅವರು ಮಧ್ಯರಾತ್ರಿ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬರುವವರಿದ್ದರು. ಅವರನ್ನು ರಾಜಭವನಕ್ಕೆ ಕರೆದೊಯ್ಯುವ ಜವಾಬ್ದಾರಿ ರವಿಕುಮಾರ್‌ ಅವರಿಗೆ ಇತ್ತು.

ಅಂತೆಯೇ ರವಿ ಕುಮಾರ್‌ ಅವರು ರಾಜ್ಯಪಾಲರನ್ನು ಕಾರಿನಲ್ಲಿ ಕರೆದೊಯ್ಯಲು ವಿಮಾನ ನಿಲ್ದಾಣಕ್ಕೆ ಬಂದಿದ್ದರು. ಈ ನಡುವೆ ಅವರಿಗೆ ಎದೆ ನೋವು ಕಾಣಿಸಿಕೊಂಡಿದೆ. ಈ ವೇಳೆ ಹೃದಯಾಘಾತವೂ ಆಗಿದೆ. ಕೂಡಲೇ ಅವರನ್ನು ಆ್ಯಂಬುಲೆನ್ಸ್ ನಲ್ಲಿ ಆಸ್ಪತ್ರೆಗೆ ಕರೆದೊಯ್ಯುವ ಪ್ರಯತ್ನಗಳು ನಡೆಸಲಾಗಿತ್ತು. ಆದರೆ, ಅಷ್ಟರಲ್ಲಾಗಲೇ ಕೊನೆಯುಸಿರೆಳೆದರು ಎನ್ನಲಾಗಿದೆ.

ಘಟನೆಯ ಬಳಿಕ ರಾಜ್ಯಪಾಲರು ಹೆಚ್ಚುವರಿ ವಾಹನ ಬಳಸಿಕೊಂಡು ರಾಜ್ಯಭವನಕ್ಕೆ ತೆರಳಿದರು. ಒಂದೊಮ್ಮೆ ರಾಜ್ಯಪಾಲರು ನಿಗದಿತ ಸಮಯಕ್ಕಿಂತ ಬೇಗ ಆಗಮಿಸಿದ್ದರೆ, ರವಿಕುಮಾರ್ ಅವರೇ ಕಾರಿನಲ್ಲಿ ಕರೆದುಕೊಂಡು ಹೋಗಿದ್ದರೆ, ಮಧ್ಯೆ ಏನಾದರೂ ಆಗಿದ್ದರೆ ದೊಡ್ಡ ಅನಾಹುತವೇ ಆಗುತ್ತಿತ್ತು.

ಇದನ್ನೂ ಓದಿ | Children heart attack | 13 ವರ್ಷದ ಬಾಲಕ ಹೃದಯಾಘಾತದಿಂದ ನಿಧನ, ಶಾಲೆಯಲ್ಲೇ ಕುಸಿದುಬಿದ್ದು ಉಸಿರು ಚೆಲ್ಲಿದ!

Exit mobile version