Site icon Vistara News

Bangalore Traffic‌ : ರಾಂಗ್‌ ಲೈನ್‌ನಲ್ಲಿ ಹೋಗಿ ಜಾಮ್ ಮಾಡಿದ;‌ ಮನೆಗೇ ಬಂದು ಫೈನ್‌ ಹಾಕಿದ ಪೊಲೀಸರು!

Car Traffic jam

ಬೆಂಗಳೂರು: ಬೆಂಗಳೂರು ಎಂದರೆ ಟ್ರಾಫಿಕ್‌ ಕಿರಿಕಿರಿ (Bangalore Traffic‌) ಮೊದಲು ನೆನಪಿಗೆ ಬರುವಂತೆ ಆಗಿಬಿಟ್ಟಿದೆ. ಅಷ್ಟರ ಮಟ್ಟಿಗೆ ರಾಜಧಾನಿಯ ಟ್ರಾಫಿಕ್‌ ಜಗಜ್ಜಾಹೀರಾಗಿದೆ. ಇದರ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಈಗಾಗಲೇ ಡಿಸಿಎಂ ಡಿ.ಕೆ. ಶಿವಕುಮಾರ್‌ (DCM DK Shivakumar) ಅವರು ಕೇಂದ್ರ ಸಾರಿಗೆ ಸಚಿವರ ಜತೆ ಮೂರು ದಿನದ ಹಿಂದಷ್ಟೇ ಚರ್ಚೆ ಮಾಡಿದ್ದರು. ಈಗ ವಿಷಯ ಅದಲ್ಲ. ಯಾರಿಗೂ ಒಂದು ದಾರಿಯಾದರೆ ಎಡವಟ್ಟಿಗೇ ಇನ್ನೊಂದು ದಾರಿ ಎಂಬ ಗಾಧೆ ಮಾತಿಗೆ ಈ ಪ್ರಸಂಗ ಅನ್ವಯ ಆಗುತ್ತದೆ. ಅದೊಂದು ಚಿಕ್ಕ ರಸ್ತೆ ಎಲ್ಲ ಕಾರುಗಳೂ ಸಾಲಾಗಿ ಹೋಗುತ್ತಿವೆ. ಆದರೆ, ಅಲ್ಲೊಬ್ಬ ತನ್ನ ಕಾರನ್ನು ರಾಂಗ್‌ ಲೈನ್‌ನಲ್ಲಿ (Wrong Route) ಚಾಲನೆ ಮಾಡಿ ಟ್ರಾಫಿಕ್‌ ಜಾಮ್‌ಗೆ ಕಾರಣವಾಗಿದ್ದಾನೆ. ಈ ವಿಡಿಯೊ ಈಗ ವೈರಲ್‌ (Video Viral) ಆಗಿದ್ದು, ಪೊಲೀಸರು ಆತನ ಮನೆಗೇ ಹೋಗಿ ಫೈನ್‌ ಕಟ್ಟಿಸಿಕೊಳ್ಳುವ ಮೂಲಕ ಪೈಸಾ ವಸೂಲ್‌ ಮಾಡಿದ್ದಾರೆ!

ಈ ಘಟನೆ ನಡೆದಿದ್ದು ಯಾವಾಗ? ಎಂಬುದು ಗೊತ್ತಾಗಿಲ್ಲ ಆದರೆ, ಬೆಂಗಳೂರಿನ ಹೊರವಲಯದ ವರ್ತೂರು ಭಾಗದ ಬಳಿ ಎಂಬುದು ಮಾತ್ರ ತಿಳಿದುಬಂದಿದೆ. ಈ ಪ್ರಸಂಗದ ವಿಡಿಯೊವನ್ನು ಮಹಿಟ್ವೀಟ್ಸ್ (@mahitwietshere) ಎಂಬ ಖಾತೆಯಿಂದ ಅಪ್ಲೋಡ್‌ ಮಾಡಲಾಗಿದೆ.

Car Traffic jam fine from traffic police

ನಿಜವಾಗಿಯೂ ಆಗಿದ್ದೇನು?

ಬೆಂಗಳೂರಿನ ವರ್ತೂರು ಬಳಿಯ ಏರಿಯಾವೊಂದರಲ್ಲಿ ಕಿರಿದಾದ ರಸ್ತೆಯೊಂದರಲ್ಲಿ ವಾಹನಗಳು ಸಾಗುತ್ತಿದ್ದವು. ಅದು ಸಣ್ಣ ರಸ್ತೆಯಾಗಿದ್ದರಿಂದ ಆ ರಸ್ತೆಯಲ್ಲಿ ಒಮ್ಮೆಲೆಗೆ ಎರಡೂ ಬದಿಗೆ ಒಂದೊಂದು ವಾಹನಗಳು ಸಾಗಬಹುದು. ಹೆಚ್ಚಿನ ವಾಹನಗಳು ಇದ್ದರೆ ಸಾಲಾಗಿ ಹೋಗಬೇಕೇ ವಿನಃ ಏಕಮುಖ ಮಾರ್ಗದಲ್ಲಿ ಎರಡು ವಾಹನಗಳು ಅಕ್ಕ ಪಕ್ಕದಲ್ಲಿ ಹೋಗಲು ಸಾಧ್ಯವಿಲ್ಲ. ಆದರೆ, ಇಲ್ಲೊಬ್ಬ ವ್ಯಕ್ತಿ ಅಲ್ಲಿರುವ ಸಾಲುಗಳನ್ನು ಲೆಕ್ಕಿಸದೆ ಓವರ್‌ ಟೇಕ್‌ ಮಾಡಿಕೊಂಡು ರಾಂಗ್‌ ರೂಟ್‌ನಲ್ಲಿ ಗಾಡಿ ಓಡಿಸಿದ್ದಾನೆ. ಇದರಿಂದ ವಿರುದ್ಧ ದಿಕ್ಕಿನಿಂದ ಬರುತ್ತಿದ್ದ ವಾಹನಗಳಿಗೆ ಅಡ್ಡ ಬಂದು ಟ್ರಾಫಿಕ್‌ ಜಾಮ್‌ ಉಂಟಾಗಿದೆ. ಕೊನೆಗೆ ಅನಿವಾರ್ಯವಾಗಿ ಆ ಕಾರನ್ನು ಹಿಮ್ಮುಖವಾಗಿ ವಾಪಸ್‌ ತರಬೇಕಾಯಿತು. ಎದುರಿಗೆ ಶಾಲಾ ವಾಹನವೊಂದು ಬರುತ್ತಿದ್ದರೆ, ಈ ಕಾರಿನವನು ಹಿಂದೆ ಹಿಂದೆ ರಿವರ್ಸ್‌ ತೆಗೆದುಕೊಂಡು ಬರುತ್ತಿದ್ದ. ಇದನ್ನು ಹಿಂದೆ ಸಾಲಾಗಿ ನಿಂತು ಕಾಯುತ್ತಿದ್ದ ಕಾರಿನಲ್ಲಿದ್ದ ವ್ಯಕ್ತಿಯೊಬ್ಬರು ವಿಡಿಯೊ ಮಾಡಿಕೊಂಡಿದ್ದಾರೆ.

ಟ್ವಿಟರ್‌ನಲ್ಲಿ ವಿಡಿಯೊ ಅಪ್ಲೋಡ್‌

ಈ ವಿಡಿಯೊವನ್ನು @mahitwietshere ಎಂಬ ಟ್ವಿಟ್ಟರ್ ಖಾತೆಯಲ್ಲಿ ಅಪ್ಲೋಡ್‌ ಮಾಡಲಾಗಿದೆ. “ನಾವು ಸರತಿಯಲ್ಲಿ ಕಾಯುತ್ತಿರುವವರು ಮೂರ್ಖರು! ಈ ರೀತಿಯಲ್ಲಿ ಜನ ವಾಹನ ಚಲಾಯಿಸುವುದರಿಂದ ಹೆಚ್ಚಿನ ಜಾಮ್‌ಗಳು ಉಂಟಾಗುತ್ತವೆ!” ಎಂದು ಬರೆದುಕೊಳ್ಳಲಾಗಿದೆ. ಈ ವಿಡಿಯೊ ಸಖತ್‌ ವೈರಲ್‌ ಆಗಿದೆ.

ಮನೆಗೆ ಹೋಗಿ ಫೈನ್‌ ಹಾಕಿದ ಪೊಲೀಸರು

ಈ ಟ್ವೀಟ್‌ ವೈರಲ್‌ ಆಗುತ್ತಿದ್ದಂತೆ ಸಂಚಾರಿ ಪೊಲೀಸರು ಎಚ್ಚೆತ್ತಿದ್ದಾರೆ. ವಿಡಿಯೊದಲ್ಲಿ ಕಂಡ ಕಾರಿನ ನಂಬರ್‌ ಅನ್ನು ಟ್ರೇಸ್‌ ಮಾಡಿ ವಿಳಾಸವನ್ನು ಪತ್ತೆ ಹಚ್ಚಿದ್ದಾರೆ. ಕೊನೆಗೆ ಅವರ ಮನೆಗೇ ಹೋಗಿ ಅದೇ ಕಾರಿನ ಸಮ್ಮುಖದಲ್ಲಿ ದಂಡ ವಿಧಿಸಿ ಆ ರಶೀದಿಯನ್ನು ಕಾರು ಮಾಲೀಕನಿಗೆ ಕೊಟ್ಟಿದ್ದಲ್ಲದೆ, ಫೋಟೊ ತೆಗೆಸಿಕೊಂಡು ಜುಲೈ 31ರಂದು ವೈಟ್‌ವೀಲ್ಡ್‌ ಸಂಚಾರಿ ಪೊಲೀಸ್ ಠಾಣೆಯ ಟ್ವಿಟರ್‌ ಖಾತೆಯಲ್ಲಿ ಅಪ್ಲೋಡ್‌ ಮಾಡಲಾಗಿದೆ. ವಿಡಿಯೊ ಹಾಗೂ ಪೋಸ್ಟ್‌ಗಳು ಲಕ್ಷಕ್ಕೂ ಹೆಚ್ಚು ವೀಕ್ಷಣೆ ಕಂಡಿವೆ.

ಇದನ್ನೂ ಓದಿ: DK Shivakumar : ಅಣ್ಣ ಹೇಳಿದ್ದು ತಮ್ಮ ಕೇಳಬೇಕು; ಎಚ್‌ಡಿಕೆ ವಾಮ ಮಾರ್ಗ ಹೇಳಿಕೆಗೆ ಡಿಕೆಶಿ ತಿರುಗೇಟು!

ಇದಕ್ಕೆ ತರಹೇವಾರು ಕಮೆಂಟ್‌ಗಳು ಬಂದಿವೆ. ಬೆಂಗಳೂರಿನ ಆಟೋಗಳಿಂದಲೂ ಇದೇ ರೀತಿಯ ಸಮಸ್ಯೆಯಾಗುತ್ತದೆ ಎಂದು ಒಬ್ಬ ಹೇಳಿದರೆ, ಪೊಲೀಸರು ಒಳ್ಳೆಯ ಕಾರ್ಯವನ್ನು ಮಾಡಿದ್ದಾರೆ ಎಂದು ಹಲವರು ಶ್ಲಾಘಿಸಿದ್ದಾರೆ. ಇನ್ನೊಬ್ಬರು ಕರ್ನಾಟಕದವರದ್ದಾಗಿದ್ದರೆ ಮುಖ ಕಾಣುವಂತೆ ಫೋಟೊ ಹಾಕುತ್ತಿದ್ದಿರಿ. ಅದೇ ಉತ್ತರ ಭಾರತದವರಾಗಿದ್ದರೆ ಮುಖ ಕಾಣದಂತೆ ಬ್ಲರ್‌ ಮಾಡುತ್ತೀರಾ? ಎಂದು ಪ್ರಶ್ನೆ ಮಾಡ

Exit mobile version