Site icon Vistara News

Drought Situation: 161 ತಾಲೂಕು ಬರಪೀಡಿತ; ರಾಜ್ಯ ಸರ್ಕಾರ ಘೋಷಣೆ

drought situation

ಬೆಂಗಳೂರು: ರಾಜ್ಯದ 161 ತಾಲೂಕುಗಳನ್ನು ಬರಪೀಡಿತ (Drought Situation) ತಾಲೂಕುಗಳು ಎಂದು ಘೋಷಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.

ಜಿಲ್ಲಾಧಿಕಾರಿಗಳಿಂದ ಬೆಳೆಹಾನಿ ಸಮೀಕ್ಷೆ (Ground Truthing) ಮಾಡಿಸಲಾಗಿದ್ದು, ಅವರ ವರದಿಗಳನ್ನು ಪಡೆದುಕೊಂಡು ಅವುಗಳ ಹಿನ್ನೆಲೆಯಲ್ಲಿ ಈ ಘೋಷಣೆ ಮಾಡಲಾಗಿದೆ. ರಾಜ್ಯದ 31 ಜಿಲ್ಲೆಗಳ 236 ತಾಲೂಕುಗಳ ಪೈಕಿ 195 ತಾಲೂಕುಗಳಲ್ಲಿ ಬರ ಪರಿಸ್ಥಿತಿ ಕಂಡು ಬಂದಿದೆ. ಈ ಪೈಕಿ 161 ತಾಲೂಕುಗಳನ್ನು ಬರಪೀಡಿತ, 34 ತಾಲೂಕುಗಳನ್ನು ಸಾಧಾರಣ ಬರಪೀಡಿತ ತಾಲೂಕು (Drought hit taluk) ಎಂದು ಘೋಷಣೆ ಮಾಡಲಾಗಿದೆ.

ಜೂನ್‌ ತಿಂಗಳಲ್ಲಿ ಶೇ.56 ಮಳೆ ಕೊರತೆ ಉಂಟಾಗಿದೆ. ಜುಲೈಯಲ್ಲಿ ಶೇ.29 ಹೆಚ್ಚು ಮಳೆಯಾಗಿದ್ದರೂ ಅದು ಒಂದು ವಾರದಲ್ಲಿ ಕೇಂದ್ರೀಕೃತಗೊಂಡಿದೆ. ಆಗಸ್ಟ್‌ನಲ್ಲಿ ವಾಡಿಕೆಗಿಂತ ಶೇ.73 ಮಳೆ ಕೊರತೆಯಾಗಿದ್ದು, ಕಳೆದ 125 ವರ್ಷಗಳಲ್ಲಿ ಅತಿ ಕಡಿಮೆ ಮಳೆ ದಾಖಲಾಗಿದೆ ಎಂದು ಸರ್ಕಾರ ಗಮನಿಸಿದೆ.

ಜಿಲ್ಲಾಧಿಕಾರಿಗಳು ಬರ ನಿರ್ವಹಣೆಯ ಕಾರ್ಯಕ್ರಮಗಳನ್ನು ಕೈಗೊಳ್ಳಲು ಸರ್ಕಾರ ಸೂಚಿಸಿದೆ. ಕಾಲಕಾಲಕ್ಕೆ SDRF/NDRF ನಿಯಮಗಳನ್ವಯ ಮಾರ್ಗಸೂಚಿ ನೀಡುವುದಾಗಿ ತಿಳಿಸಿದೆ.

ಇದನ್ನೂ ಓದಿ: Drought Situation : ರಾಜ್ಯದ 195 ತಾಲೂಕುಗಳು ಬರಪೀಡಿತ; ಕಂದಾಯ ಸಚಿವ ಕೃಷ್ಣಬೈರೇಗೌಡ ಘೋಷಣೆ, ಕೇಂದ್ರಕ್ಕೆ ವರದಿ

Exit mobile version