ಬಾಗಲಕೋಟೆ: ರಬಕವಿ ಬನಹಟ್ಟಿ ತಾಲೂಕಿನ ಚಿಮ್ಮಡ ಗ್ರಾಮದಲ್ಲಿ ಹಾದು ಹೋಗು ಘಟಪ್ರಭಾ ನದಿ ಕಾಲುವೆಯಲ್ಲಿ ಕಾಲು ಜಾರಿ ಯುವಕನೊಬ್ಬ ಬಿದ್ದಿದ್ದು, ನೀರಿನಲ್ಲಿ ಮುಳುಗಿ (Drowned in canal) ಮೃತಪಟ್ಟಿದ್ದಾನೆ.
ಚಿಮ್ಮಡ ಬಳಿಯಿರುವ ಘಟಪ್ರಭಾ ಎಡದಂಡೆಯ ಕಾಲುವೆ ತುಂಬಿ ಹರಿಯುತ್ತಿದ್ದು, ಕಾಲು ತೊಳೆದುಕೊಳ್ಳಲು ಹೋಗಿ ಕಾಲು ಜಾರಿ ಯುವಕ ಕಾಲುವೆಯಲ್ಲಿ ಮುಳುಗಿ ಹೋಗಿದ್ದ.
ಗ್ರಾಮದ 29 ವರ್ಷದ ಚೇತನ್ ಆರೂಟಗಿ ನೀರಿನಲ್ಲಿ ಕೊಚ್ಚಿ ಹೋದ ಯುವಕ ಎಂದು ಗುರುತಿಸಲಾಗಿದೆ. ಸುದ್ದಿ ತಿಳಿದು ಸ್ಥಳಕ್ಕೆ ಆಗಮಿಸಿದ ಪೊಲೀಸರು ಹಾಗೂ ಅಗ್ನಿಶಾಮಕ ದಳದವರು ಮಧ್ಯಾಹ್ನದವರೆಗೂ ಕಾರ್ಯಾಚರಣೆ ನಡೆಸಿದರು.
ಇದನ್ನೂ ಓದಿ: Fire Accident: ದೇವರಾಯನದುರ್ಗ ಬೆಟ್ಟದಲ್ಲಿ ಕಾಣಿಸಿಕೊಂಡ ಬೆಂಕಿ; ಅಗ್ನಿಜ್ವಾಲೆಗೆ ಸಿಲುಕಿ ಬಾಲಕಿ ಸಾವು, ಮತ್ತಿಬ್ಬರಿಗೆ ಗಾಯ
ಮಧ್ಯಾಹ್ನದ ಬಳಿಕ ಚೇತನ ಪ್ರಭು ಶವವಾಗಿ ಪತ್ತೆಯಾಗಿದ್ದಾನೆ. ಮೃತ ಚೇತನ್ ಚಿಮ್ಮಡ ಗ್ರಾಮದವನೇ ಆಗಿದ್ದು, ಬನಹಟ್ಟಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸ್ಥಳದಲ್ಲಿ ಪೋಷಕರ ಆಕ್ರಂದನ ಮುಗಿಲು ಮುಟ್ಟಿದೆ.