Site icon Vistara News

Drowned in canal: ಆಲಮಟ್ಟಿ ಎಡದಂಡೆ ಕಾಲುವೆಯಲ್ಲಿ ಎರಡು ಶವ ಪತ್ತೆ

Drowned in canal Two bodies found in Alamatti yadadande nale

ವಿಜಯಪುರ: ನಿಡಗುಂದಿ ಪಟ್ಟಣದ ಹೊರವಲಯದಲ್ಲಿರುವ ಆಲಮಟ್ಟಿ ಎಡದಂಡೆ ಕಾಲುವೆ (ಎಎಲ್‌ಬಿಸಿ) ವ್ಯಾಪ್ತಿಯಲ್ಲಿ ಎರಡು ಶವಗಳು ಪತ್ತೆಯಾಗಿದೆ. ಒಬ್ಬರು ಕುಡಿದ ಮತ್ತಿನಲ್ಲಿ ಬಿದ್ದು ಮುಳುಗಿ (Drowned in canal) ಮೃತಪಟ್ಟಿದ್ದರೆ, ಮತ್ತೊಬ್ಬರು ಬಟ್ಟೆ ತೊಳೆಯಲು ಹೋದಾಗ ಕಾಲು ಜಾರಿ ಬಿದ್ದು ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ.

ನಿಡಗುಂದಿ ನಿವಾಸಿಗಳಾದ ಯಲ್ಲಪ್ಪ ಗುಡದಪ್ಪಗೋಳ (30), ರಾಜಾಸಾಬ ಕಲಾಲ್ (35) ಎಂಬುವವರ ಶವ ಪತ್ತೆಯಾಗಿದೆ. ಇವರು ಮೂರು ದಿನಗಳ ಹಿಂದೆ ನಾಪತ್ತೆಯಾಗಿದ್ದರು ಎಂದು ತಿಳಿದು ಬಂದಿದೆ.

ಇದನ್ನೂ ಓದಿ: ‌PM Modi: ಮಾ.12ರಂದು ಬೆಂಗಳೂರು-ಮೈಸೂರು ಹೆದ್ದಾರಿ ಸಂಚಾರ ಸಂಪೂರ್ಣ ರದ್ದು; ಇದು ಮೋದಿ ಭೇಟಿ ಎಫೆಕ್ಟ್

ಇವರ ಬಗ್ಗೆ ಎಷ್ಟೇ ಹುಡುಕಿದರೂ ಸುಳಿವು ಸಿಕ್ಕಿರಲಿಲ್ಲ. ಕುಡಿದ ಮತ್ತಿನಲ್ಲಿ ಮೂರು ದಿನಗಳ ಹಿಂದೆ ಕಾಲುವೆಗೆ ಯಲ್ಲಪ್ಪ ಬಿದ್ದಿದ್ದ ಎನ್ನಲಾಗಿದ್ದರೆ, ರಾಜಾಸಾಬ್ ಮಂಗಳವಾರ (ಮಾ. 7) ಬಟ್ಟೆ ತೊಳೆಯಲು ಹೋಗಿ ಕಾಲುವೆಯಲ್ಲಿ ಬಿದ್ದಿದ್ದ ಎಂದು ತಿಳಿದುಬಂದಿದೆ. ಅಣತಿ ದೂರದಲ್ಲಿ ಇಬ್ಬರ ಶವಗಳು ಬುಧವಾರ (ಮಾ. 8) ಪತ್ತೆಯಾಗಿವೆ. ನಿಡಗುಂದಿ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿದ್ದು, ಪ್ರಕರಣ ದಾಖಲು ಮಾಡಿಕೊಂಡಿದ್ದಾರೆ. ಅಲ್ಲದೆ, ಮುಂದಿನ ಕ್ರಮ ಕೈಗೊಂಡಿದ್ದಾರೆ.

Exit mobile version