Site icon Vistara News

Drowned in lake: ಗಾಣಿಗರಹಳ್ಳಿ ಕೆರೆಯಲ್ಲಿ ಈಜಲು ಹೋಗಿದ್ದ ವಿದ್ಯಾರ್ಥಿ ನೀರುಪಾಲು; ಮತ್ತೊಬ್ಬ ಅಸ್ವಸ್ಥ

Drowned in Lake Student who had gone for a swim in Ganigarahalli lake drowned Another sick

ನೆಲಮಂಗಲ: ಬೆಂಗಳೂರು ಉತ್ತರ ತಾಲೂಕಿನ ಗಾಣಿಗರಹಳ್ಳಿ ಕೆರೆಯಲ್ಲಿ ಈಜಲು ಹೋಗಿದ್ದಾಗ ವಿದ್ಯಾರ್ಥಿಯೊಬ್ಬ ನೀರು (Drowned in lake) ಪಾಲಾಗಿದ್ದಾನೆ. ತೀವ್ರವಾಗಿ ಅಸ್ವಸ್ಥಗೊಂಡ ಮತ್ತೊಬ್ಬ ಆಸ್ಪತ್ರೆಗೆ ದಾಖಲಾಗಿದ್ದಾನೆ.

ಅಬ್ಬಿಗೆರೆ ನಿವಾಸಿ ಅಧಿತ್ (20) ಎಂಬ ವಿದ್ಯಾರ್ಥಿ ಮೃತಪಟ್ಟಿದ್ದಾನೆ. ಮತ್ತೊಬ್ಬ ವಿದ್ಯಾರ್ಥಿ ದರ್ಶನ್ (20) ತೀವ್ರವಾಗಿ ಅಸ್ವಸ್ಥಗೊಂಡಿದ್ದು, ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ಕೆರೆಯ ಬಳಿ ದನ ಮೇಯಿಸುತ್ತಿದ್ದವರಿಂದ ದರ್ಶನ್‌ನನ್ನು ರಕ್ಷಣೆ ಮಾಡಲಾಗಿದೆ.

ಇದನ್ನೂ ಓದಿ: Leopard Attack: ಫಾರಂಗೆ ನುಗ್ಗಿ 200 ಕೋಳಿಗಳನ್ನು ತಿಂದು ತೇಗಿದ ಚಿರತೆ!

ಮೃತ ಅಧಿತ್ ಶವ ಇನ್ನು ಪತ್ತೆಯಾಗಿಲ್ಲ. ಅಗ್ನಿಶಾಮಕ ಸಿಬ್ಬಂದಿಯಿಂದ ಶೋಧ ಕಾರ್ಯ ಮುಂದುವರಿದಿದೆ. ಸ್ನೇಹಿತರ ಮನೆಗೆ ಹೋಗಿಬರುವುದಾಗಿ ಹೇಳಿ ಹೋಗಿದ್ದ ಸಮಯದಲ್ಲಿ ಈ ಅವಘಡ ಸಂಭವಿಸಿದೆ. ಈ ಇಬ್ಬರು ವಿದ್ಯಾರ್ಥಿಗಳು ಡಿಪ್ಲೊಮಾ ವ್ಯಾಸಂಗ ಮಾಡುತ್ತಿದ್ದರು. ಸೋಲದೇವನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಹುಡುಗಿಗೆ ಬಣ್ಣದೋಕುಳಿ ಎರಚಿದ ಹುಡುಗನ ಕಿಡ್ನ್ಯಾಪ್‌ ಮಾಡಿ ಮಾರಣಾಂತಿಕ ಹಲ್ಲೆ

ಕೋಲಾರ: ಇಲ್ಲಿನ ವೇಮಗಲ್ ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿ ಕಾಲೇಜು ಹುಡುಗನೊಬ್ಬ ಹುಡುಗಿಗೆ ಹೋಳಿ ಬಣ್ಣ ಎರಚಿದ ಕಾರಣಕ್ಕೆ ಸಿಟ್ಟಿಗೆದ್ದ ಗುಂಪು ಆತನನ್ನು ಕಿಡ್ನ್ಯಾಪ್‌ (Assault Case) ಮಾಡಿ ಮಾರಣಾಂತಿಕವಾಗಿ ಹಲ್ಲೆ ನಡೆಸಿರುವ ಘಟನೆ ನಡೆದಿದೆ.

ಮಧು ಎಂಬುವವನು ಹಲ್ಲೆಗೊಳಗಾದ ವಿದ್ಯಾರ್ಥಿಯಾಗಿದ್ದಾನೆ. ಹುಡುಗಿಯ ಸೂಚನೆ ಮೇರೆಗೆ ದಾನಹಳ್ಳಿ ಗ್ರಾಮದ ಡಿಎನ್‌ಡಿ ಮಧು ಎಂಬಾತ ಹಲ್ಲೆ ನಡೆಸಿದ್ದಾನೆ ಎನ್ನಲಾಗಿದೆ. ಮಧು ಪೋಷಕರು ಈ ಸಂಬಂಧ ವೇಮಗಲ್‌ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲು ಮಾಡಿದ್ದಾರೆ.

ಹಲ್ಲೆಗೊಳಗಾದ ಮಧು ಸರ್ಕಾರಿ ಕಾನೂನು‌ ಕಾಲೇಜಿನಲ್ಲಿ‌ ವ್ಯಾಸಂಗ ಮಾಡುತ್ತಿದ್ದರೆ, ಅನುಪ್ರಿಯಾ ಎಂಬಾಕೆ ಕೋಲಾರದ ಎಂಜಿನಿಯರಿಂಗ್ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿದ್ದಳು. ಇವರಿಬ್ಬರು ಒಂದೇ ಗ್ರಾಮದವರಾಗಿದ್ದ ಕಾರಣ ನಿತ್ಯ ಒಂದೇ ಬಸ್‌ನಲ್ಲಿ ಸಂಚರಿಸುತ್ತಿದ್ದರು. ಹೋಳಿ ಹಬ್ಬ ಹಿನ್ನೆಲೆಯಲ್ಲಿ ಮಧು, ಅನುಪ್ರಿಯಾಗೆ ಬಣ್ಣವನ್ನು ಎರಚಿದ್ದಾನೆ.

ಇದನ್ನೂ ಓದಿ: Tippu sultan : ಉರಿ ಗೌಡ, ನಂಜೇಗೌಡರ ದಾಖಲೆ ಸಂಗ್ರಹಿಸಿ ಸ್ವಾಮೀಜಿಗಳ ಜತೆ ಮಾತಾಡ್ತೇನೆ ಎಂದ ಸಿ.ಟಿ ರವಿ

ಈ ಘಟನೆ‌ ನಡೆದು‌ ಎರಡು ದಿನಗಳ‌ ನಂತರ ಡಿಎನ್‌ಡಿ ಮಧು ಗ್ಯಾಂಗ್‌ ಸೇರಿ ಬಣ್ಣ ಎರಚಿತ ಮಧುವನ್ನು ಅಪಹರಣ ಮಾಡಿದ್ದಾರೆ. ಬಳಿಕ ಬಯಲು‌ ನರಸಾಪುರ ಗಿಡಾನ್‌ನಲ್ಲಿ ಮಧುವನ್ನು‌ ತಲೆ ಕೆಳಗಾಗಿ ಕಟ್ಟಿ ಮಾರಣಾಂತಿಕವಾಗಿ ಹಲ್ಲೆ ಮಾಡಿದ್ದಾರೆ. ಹಲ್ಲೆಗೊಳಗಾದ ಮಧುವಿಗೂ ದಾನಗಳ್ಳಿ ಗ್ರಾಮದ ಡಿಎನ್‌ಡಿ ಮಧುವಿಗೂ ಯಾವುದೇ ಸಂಬಂಧವಿಲ್ಲ. ಆದರೆ, ಅನುಪ್ರಿಯಾ ಸೂಚನೆಯಂತೆ ಹಲ್ಲೆ ಮಾಡಿದ್ದಾರೆ. ಬಳಿಕ ಗಾಯಾಳು ಮಧುವನ್ನು ಕೋಲಾರದ ಖಾಸಗಿ ಆಸ್ಪತ್ರೆಯಲ್ಲಿ ದಾಖಲಿಸಿ ಪರಾರಿ ಆಗಿದ್ದಾರೆ.

ಶಾಲೆ ಮುಂಭಾಗವೇ ಚೂರಿ ಇರಿದ ಗೆಳೆಯ

ರಾಯಚೂರಿನ ಜಯರಾಭಾದ್ ಶಾಲೆ ಮುಂಭಾಗ ತಡರಾತ್ರಿ ಬಾಲಕರಿಬ್ಬರು ಗಲಾಟೆ (Raichur News) ಮಾಡಿಕೊಂಡಿದ್ದಾರೆ. ಗಲಾಟೆಯಲ್ಲಿ ಬಾಲಕನೊಬ್ಬ ಮತ್ತೊಬ್ಬನಿಗೆ ಚೂರಿಯಿಂದ ಇರಿದಿದ್ದಾನೆ. ಕ್ಷುಲ್ಲಕ ಕಾರಣಕ್ಕೆ ಬಾಲಕರಿಬ್ಬರ ನಡುವೆ ತಡರಾತ್ರಿ ಗಲಾಟೆ ನಡೆದಿದೆ. ಈ ವೇಳೆ ಬಾಲಕ ಚೂರಿ ಇರಿದು ಕ್ರೌರ್ಯ ಮೆರೆದಿದ್ದಾನೆ. ಗಾಯಗೊಳಗಾದ ಬಾಲಕ ಹಾಗೂ ಚೂರಿ ಇರಿದ ಬಾಲಕರಿಬ್ಬರೂ ಗೆಳೆಯರು ಎಂದು ತಿಳಿದು ಬಂದಿದೆ. ಗೆಳೆಯರಿಬ್ಬರು ಶಾಲೆ ಬಿಟ್ಟು ಓಡಾಡಿಕೊಂಡಿದ್ದರು ಎನ್ನಲಾಗಿದೆ.

ಇದನ್ನೂ ಓದಿ: Karnataka Election: ಯುಗಾದಿ ದಿನದಂದೇ ಅಧಿಕೃತವಾಗಿ ಪ್ರಚಾರ ಆರಂಭಿಸಿದ ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್

ಗಾಯಾಳು ಬಾಲಕರನ್ನು ರಾಯಚೂರಿನ ರಿಮ್ಸ್ ಆಸ್ಪತ್ರೆಗೆ ದಾಖಲು ಮಾಡಲಾಗಿದ್ದು, ಬಾಲಕನ ಕಿವಿಯ ಭಾಗಕ್ಕೆ ಚೂರಿ ಇರಿಯಲಾಗಿದೆ. ಆ ಚೂರಿಯನ್ನು ತೆಗೆಯಲು ವೈದ್ಯರು ಹರಸಾಹಸ ಪಡಬೇಕಾಯಿತು. ಹೀಗಾಗಿ ರಿಮ್ಸ್‌ನಿಂದ ಬಳ್ಳಾರಿಯ ವಿಮ್ಸ್ ಆಸ್ಪತ್ರೆಗೆ ರವಾನಿಸಲಾಗಿದೆ. ಸದರ್ ಬಜಾರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Exit mobile version