Site icon Vistara News

Drowned in pond: ಬಹಿರ್ದೆಸೆಗೆ ಹೋಗಿದ್ದ ಒಂದೇ ಕುಟುಂಬದ ಇಬ್ಬರು ಮಕ್ಕಳು ನೀರು ಪಾಲು

Drowned in pond Two children of the same family who went out in the open share the water

ಬಳ್ಳಾರಿ: ಶೌಚಾಲಯಕ್ಕೆ ತೆರಳಿದ್ದ ಇಬ್ಬರು ಮಕ್ಕಳು ಹಳ್ಳದಲ್ಲಿ (Drowned in pond) ಮುಳುಗಿ ಮೃತಪಟ್ಟಿರುವ ಘಟನೆ ಕುರುಗೋಡು ತಾಲೂಕಿನ ಗುತ್ತಿಗನೂರು ಗ್ರಾಮದಲ್ಲಿ ನಡೆದಿದೆ‌.

ಗುತ್ತಿಗನೂರು ಗ್ರಾಮದ ಚೌಡಿಕಿ ಕುಟುಂಬಕ್ಕೆ ಸೇರಿದ ಮಣಿಕಂಠ (14), ಹರ್ಷವರ್ಧನ (9) ಮೃತ ಪಟ್ಟ ಬಾಲಕರು. ಒಂದೇ ಕುಟುಂಬಕ್ಕೆ ಸೇರಿದ ಸಹೋದರರು ಇವರಾಗಿದ್ದಾರೆ. ಒಬ್ಬ ಬೈಲೂರಿನಲ್ಲಿ, ಮತ್ತೊಬ್ಬ ಬಳ್ಳಾರಿಯಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದ. ಗ್ರಾಮದಲ್ಲಿ ನಡೆದ ಅಂಬಾದೇವಿ ಜಾತ್ರೆಗೆ ಈ ಬಾಲಕರು ಬಂದಿದ್ದರು.

ಈ ಕುಟುಂಬದಲ್ಲಿ ಒಟ್ಟು ಮೂವರು ಸಹೋದರರಿದ್ದು, ಮೂವರೂ ಸೇರಿ ಬಹಿರ್ದೆಸೆಗೆ ತೆರಳಿದ್ದರು. ಮೊದಲ ಮಗ ಮಣಿಕಂಠ ಮತ್ತು ಮೂರನೇ ಮಗ ಹರ್ಷವರ್ಧನ್ ಹಳ್ಳದಲ್ಲಿ ಮುಳುಗಿ ಮೃತಪಟ್ಟಿದ್ದರೆ, ಮಧ್ಯದ ಹುಡುಗ ಬದುಕುಳಿದ್ದಿದ್ದಾನೆ. ಘಟನೆಯು ಕುರುಗೋಡು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ‌. ಪೋಷಕರ ಆಕ್ರಂದನ ಮುಗಿಲು ಮುಟ್ಟಿತ್ತು.

ಬಟ್ಟೆ ತೊಳೆಯಲು ಕಾಲುವೆಗೆ ಇಳಿದ ಯುವಕ, ಬಾಲಕ ನೀರುಪಾಲು

ಬಾಗಲಕೋಟೆ: ಬಟ್ಟೆ ತೊಳೆಯಲೆಂದು ಕಾಲುವೆಗೆ ಇಳಿದಿದ್ದ ಇಬ್ಬರು ಯುವಕರು ನೀರುಪಾಲಾಗಿದ್ದಾರೆ (Drowned in channel water). ಮುದ್ದೇಬಿಹಾಳ ತಾಲೂಕಿನ ಹಡಲಗೇರಿ ಬಳಿ ಕೆಬಿಜೆಎನ್ಎಲ್ ಕಾಲುವೆಯಲ್ಲಿ ಘಟನೆ ನಡೆದಿದ್ದು, ರಸೂಲ್ ಮಾಲದಾರ (೨೫) ಹಾಗೂ ಸಮಿವುಲ್ಲಾ ಗೊಳಸಂಗಿ (೧೦) ಮೃತ ದುರ್ದೈವಿಗಳಾಗಿದ್ದಾರೆ.

ಇದನ್ನೂ ಓದಿ: Prajadhwani : ಜಂಟಿ ಯಾತ್ರೆ ಮುಗಿಯಿತು, ಇನ್ನು ಒಂಟಿ ಯಾತ್ರೆ: ಶುಕ್ರವಾರದಿಂದ ಸಿದ್ದು-ಡಿಕೆಶಿ ಶಕ್ತಿ ಪ್ರದರ್ಶನ ಆರಂಭ

ಬಾಗಲಕೋಟೆ ಜಿಲ್ಲೆ ರಬಕವಿ-ಬನಹಟ್ಟಿ ತಾಲೂಕಿನ ಚಿಮ್ಮಡ ಗ್ರಾಮದವರಾದ ರಸೂಲ್‌ ಮತ್ತು ಸಮಿವುಲ್ಲಾ ಕೂಲಿ ಕಾರ್ಮಿಕರಾಗಿದ್ದು, ಮುದ್ದೇಬಿಹಾಳದ ಚಿಕನ್ ಸೆಂಟರ್‌ನಲ್ಲಿ ಕೆಲಸ ಮಾಡುತ್ತಿದ್ದರು. ಅವರು ತಮ್ಮ ಬಟ್ಟೆ ಒಗೆಯಲೆಂದು ಕಾಲುವೆಗೆ ಹೋಗಿದ್ದರು. ಬಟ್ಟೆ ತೊಳೆಯುತ್ತಿದ್ದಾಗ ಒಬ್ಬ ಕಾಲು ಜಾರಿ ಕಾಲುವೆಗೆ ಬಿದ್ದಿದ್ದು, ಇನ್ನೊಬ್ಬ ಅವನ ರಕ್ಷಣೆಗೆಂದು ಹೋಗಿರುವ ಸಾಧ್ಯತೆ ಇದೆ ಎಂದು ಭಾವಿಸಲಾಗಿದೆ. ಅಗ್ನಿಶಾಮಕ ದಳದ ಸಿಬ್ಬಂದಿ, ಪೊಲೀಸರು ಹಾಗೂ ಸ್ಥಳೀಯರು ಸೇರಿ ಕಾಲುವೆಯಿಂದ ಶವವನ್ನು ಹೊರಕ್ಕೆ ತೆಗೆದಿದ್ದಾರೆ. ಮುದ್ದೇಬಿಹಾಳ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು ಪ್ರಕರಣ ದಾಖಲಾಗಿದೆ.

Exit mobile version