Site icon Vistara News

Drowned in sea : ಸಮುದ್ರ ವಿಹಾರಕ್ಕೆ ಬಂದ ಡಾಕ್ಟರ್‌ ರುದ್ರಪಾದೆ ಮೇಲಿಂದ ಬಿದ್ದು ಮೃತ್ಯು; ಮಿತ್ರನ ರಕ್ಷಣೆಗೆ ಹೋಗಿ ನೀರುಪಾಲು

Doctor drowned in sea

ಮಂಗಳೂರು: ಸಮುದ್ರ ವಿಹಾರಕ್ಕೆ ಬಂದ ವೈದ್ಯರೊಬ್ಬರು ಮಂಗಳೂರಿನ ಸೋಮೇಶ್ವರದ (Someshwara Beach in Mangalore) ರುದ್ರಪಾದೆಯಿಂದ ಕೆಳಗೆ ಬಿದ್ದು (Drowned in sea) ಮೃತಪಟ್ಟಿದ್ದಾರೆ. ಡಾ. ಆಶೀಕ್ ಗೌಡ (30) ಎಂಬವರೇ ಸಮುದ್ರಪಾಲಾದ ವೈದ್ಯರು (Doctor drowned). ಇವರು ಸ್ನೇಹಿತನನ್ನು ರಕ್ಷಣೆ ಮಾಡಲು ಹೋಗಿ ತಾನೇ ಸಮುದ್ರಪಾಲಾಗಿದ್ದಾರೆ.

ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಇಂಟರ್ನ್‌ಷಿಪ್‌ ಮಾಡುತ್ತಿರುವ ಡಾ. ಅಶೋಕ್‌ ಗೌಡ ಅವರು ಭಾನುವಾರ ರಜೆ ಇದ್ದುದರಿಂದ ಸೋಮೇಶ್ವರದ ಕಡಲ ತೀರಕ್ಕೆ ಹೋಗಿದ್ದರು. ಅಲ್ಲಿ ಸೋಮೇಶ್ವರ ದೇವಸ್ಥಾನ ಮತ್ತಿತರ ಜಾಗಗಳನ್ನು ವೀಕ್ಷಿಸಿ ಸಮುದ್ರ ತೀರಕ್ಕೆ ತೆರಳಿದಿದ್ದಾರೆ. ಅವರ ಜತೆಗೆ ಒಬ್ಬ ಸ್ನೇಹಿತರೂ ಇದ್ದರು.

ಸಮುದ್ರ ತೀರಕ್ಕೆ ಹೋದ ಅಶೋಕ್‌ ಗೌಡ ಮತ್ತು ಸ್ನೇಹಿತರು ಅಲ್ಲಿನ ಅಪಾಯಕಾರಿ ರುದ್ರಪಾದೆಯನ್ನು ಹತ್ತಿದ್ದರು. ಈ ವೇಳೆ ಅವರ ಜತೆಗಿದ್ದ ಡಾ. ಪ್ರದೀಪ್‌ ಎಂಬವರು ಒಮ್ಮೆಗೇ ಬಂಡೆಯ ಮೇಲಿಂದ ಬಿದ್ದಿದ್ದರು. ಪ್ರದೀಪ್‌ ಅವರು ಕೆಳಗಿನಿಂದ ಬಂಡೆಯನ್ನು ಹಿಡಿದುಕೊಂಡು ಸಹಾಯ ಯಾಚಿಸಿದರು. ಆಗಾಗ ರಕ್ಕಸ ಅಲೆಗಳು ಬಂದು ಅವರನ್ನು ಬಡಿಯುತ್ತಿದ್ದವು.

ಈ ಸಂದರ್ಭದಲ್ಲಿ ಡಾ. ಆಶೀಕ್‌ ಗೌಡ ಅವರು ಏನು ಮಾಡುವುದು ಎಂದು ಯೋಚಿಸಿ ರುದ್ರಪಾದೆಯ ಮೇಲಿಂದಲೇ ಗೆಳೆಯನ ರಕ್ಷಣೆಗೆ ಕೈ ನೀಡಿದರು. ಪ್ರದೀಪ್‌ ಅವರನ್ನು ಮೇಲೆತ್ತಬೇಕು ಎನ್ನುವಷ್ಟರಲ್ಲಿ ಆಶೀಕ್‌ ಅವರೇ ಕೆಳಗೆ ಉರುಳಿಬಿದ್ದು ನೀರುಪಾಲಾದರು.

ಈ ನಡುವೆ ಪ್ರದೀಪ್‌ ಗೌಡ ಅವರು ಆಶೀಕ್‌ ಅವರ ರಕ್ಷಣೆಗೆ ಯತ್ನಿಸಿದರೂ ಪ್ರಯತ್ನ ಫಲ ನೀಡಲಿಲ್ಲ. ಕೊನೆಗೆ ಅವರು ಹೇಗೋ ಕಲ್ಲುಗಳನ್ನು ಹತ್ತಿ ಮೇಲೆ ಬಂದರು. ಅಲ್ಲಿಂದಲೇ ಪೊಲೀಸರಿಗೆ ಕರೆ ಮಾಡಿದರು.

ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿ ಪೊಲೀಸರು ಭಾರಿ ಹುಡುಕಾಟ ನಡೆಸಿದರೂ ಸಿಗಲಿಲ್ಲ. ಡಾ. ಆಶೀಕ್‌ ಅವರ ಮೃತದೇಹ ಸೋಮವಾರ ಬೆಳಗ್ಗೆ ಪತ್ತೆಯಾಗಿದೆ. ಆಶೀಕ್‌ ಗೌಡ ಅವರು ಹೊರ ಜಿಲ್ಲೆಯವರಾಗಿದ್ದು, ಅವರ ಕುಟುಂಬಿಕರು ಆಗಮಿಸಿದ್ದಾರೆ. ವೈದ್ಯನಾಗಿ ಇನ್ನೇನು ಹೆಸರು ಮಾಡುತ್ತಾರೆ ಎನ್ನುವ ಹಂತದಲ್ಲಿದ್ದ ಮಗನನ್ನು ಕಳೆದುಕೊಂಡ ಹೆತ್ತವರ ಸಂಕಟ ನೋಡಲು ಸಾಧ್ಯವಾಗುತ್ತಿಲ್ಲ.

ಬೆಳಗಾವಿ: ಈಜಲು ಹೋದ ಬಾಲಕ ನೀರಲ್ಲಿ ಮುಳುಗಿ ಸಾವು

ಬೆಳಗಾವಿ ಜಿಲ್ಲೆಯಲ್ಲಿ ನೀರಿನಲ್ಲಿ ಈಜಲು ಕೆರೆಗೆ ಹೋಗಿ ದ್ದ ಬಾಲಕನೊಬ್ಬ ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾನೆ. ಈ ಘಟನೆಯಲ್ಲಿ ಇನ್ನೊಬ್ಬ ಬಾಲಕನೂ ನೀರಿಗೆ ಬಿದ್ದಿದ್ದು, ಆತನನ್ನು ಚಿಂತಾಜನಕ ಸ್ಥಿತಿಯಲ್ಲಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಮೃತಪಟ್ಟ ಬಾಲಕ ಅಸದ್‌ ಅಗಸಿಮನಿ ಮತ್ತು ರಕ್ಷಿಸಲ್ಪಟ್ಟ ಸ್ವಯಂಪಾಗಾದ್‌

ಬೆಳಗಾವಿ ಜಿಲ್ಲೆಯ ಕಿತ್ತೂರು ತಾಲೂಕಿನ ಬಸರಖೋಡ ಗ್ರಾಮದಲ್ಲಿ ಘಟನೆ ನಡೆದಿದೆ ಅಸದ್ ಅಗಸಿಮನಿ(10) ನೀರಲ್ಲಿ ಮುಳುಗಿ ಮೃತಪಟ್ಟ ಬಾಲಕನಾದರೆ ಸ್ವಯಂ ಪಾಗಾದ್ (10) ಸ್ಥಳೀಯರಿಂದ ರಕ್ಷಿಸಲ್ಪಟ್ಟ ಹುಡುಗ.

ಈ ಹತ್ತು ವರ್ಷದ ಬಾಲಕರಿಬ್ಬರೂ ಅಕ್ಕಪಕ್ಕದ ಮನೆಯವರಾಗಿದ್ದು, ಗೆಳೆಯರು. ಸೋಮವಾರ ಮುಂಜಾನೆ ಅವರಿಬ್ಬರೂ ಬಸರಖೋಡರ ಕೆರೆಗೆ ಈಜಲು ತೆರಳಿದ್ದರು. ಈ ವೇಳೆ ಇಬ್ಬರೂ ನೀರುಪಾಲಾಗಿದ್ದಾರೆ. ಒಬ್ಬ ಹೇಗೋ ನೀರಿನಿಂದ ಮೇಲೆದ್ದು ಬಂದಿದ್ದಾನೆ.

ಸ್ವಯಂ ಪಾಗಾದಿ ಎಂಬ ಬಾಲಕನಿಗೆ ಬೆಳಗಾವಿಯ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಘಟನೆಯಿಂದ ಬಸರಖೋಡ ಗ್ರಾಮದಲ್ಲಿ ಶೋಕ ಮಡುಗಟ್ಟಿದ ವಾತಾವರಣ ಕಂಡುಬಂದಿದೆ. ಕಿತ್ತೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಘಟನೆ ಇದಾಗಿದೆ.

Exit mobile version