Site icon Vistara News

Drowned In Water : ಮೀನು ಹಿಡಿಯಲು ಹೋಗಿ ನೀರುಪಾಲಾದ ಯುವಕ ಶವವಾಗಿ ಪತ್ತೆ

Young man drowns while fishing

ಕಾರವಾರ: ಮೀನು ಹಿಡಿಯಲು ಹೋಗಿ ನದಿಯಲ್ಲಿ ಮುಳುಗಿದ್ದ ಯುವಕ ಶವವಾಗಿ (Drowned In Water) ಪತ್ತೆಯಾಗಿದ್ದಾನೆ.ಉತ್ತರಕನ್ನಡದ ಕುಮಟಾದ ತಂಡ್ರಕುಳಿ ಬಳಿ ಅಘನಾಶಿನಿ ನದಿಯಲ್ಲಿ ಘಟನೆ ನಡೆದಿದೆ. ಮಣಿಕಂಠ ಅಂಬಿಗ (21) ಮೃತ ದುರ್ದೈವಿ.

ಕೋಡ್ಕಣಿ ಸಮೀಪ ಐಗಳಕುರ್ವೆ ಬಳಿ ಅಘನಾಶಿನಿ ನದಿಯಲ್ಲಿ ಶವ ಕಂಡ ಮೀನುಗಾರರು ದಡಕ್ಕೆ ಎಳೆದು ತಂದಿದ್ದಾರೆ. ಕುಮಟಾ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದೆ.

ಇದನ್ನೂ ಓದಿ: Actor Darshan: ನಾವು ದರ್ಶನ್‌ ಪರವೂ ಇಲ್ಲ, ವಿರುದ್ಧವೂ ಇಲ್ಲ ಎಂದ ಸಿಎಂ ಸಿದ್ದರಾಮಯ್ಯ

ವಿಷ ಸೇವಿಸಿ ರೈತ ಆತ್ಮಹತ್ಯೆ

ಸಾಲಬಾಧೆ ತಾಳಲಾರದೆ ವಿಷ ಸೇವಿಸಿ ರೈತ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಯಾದಗಿರಿಯ ಸುರಪುರ ತಾಲೂಕಿನ‌ ನಗನೂರ ಗ್ರಾಮದಲ್ಲಿ ಘಟನೆ ನಡೆದಿದೆ. ರೈತ ತಿಪ್ಪಣ್ಣ ಕಟ್ಟಿಮನಿ (45) ಆತ್ಮಹತ್ಯೆ ಮಾಡಿಕೊಂಡವರು. ಸಹಕಾರಿ ಬ್ಯಾಂಕ್‌, ಪಿಕೆಜೆಬಿ ಬ್ಯಾಂಕ್‌ ಹಾಗೂ ಕೈ ಸಾಲ ಸೇರಿ 8 ಲಕ್ಷ ರೂ. ಸಾಲ ಮಾಡಿಕೊಂಡಿದ್ದರು. ಆದರೆ ಸಾಲ ತೀರಿಸಲು ಆಗದೆ ಕಂಗಲಾಗಿದ್ದ ರೈತ ತಿಪ್ಪಣ ವಿಷ ಸೇವಿಸಿ ಜೀವ ಬಿಟ್ಟಿದ್ದಾರೆ. ಕೆಂಭಾವಿ ಪೋಲಿಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ಸೆಲ್ಫಿ ವಿಡಿಯೋ ಮಾಡಿ ಕೆರೆಗೆ ಬಿದ್ದು ವ್ಯಕ್ತಿ ಆತ್ಮಹತ್ಯೆ

ಸಾಲಬಾಧೆ ತಾಳಲಾರದೆ ವ್ಯಕ್ತಿಯೊಬ್ಬ ಸೆಲ್ಫಿ ವಿಡಿಯೋ ಮಾಡಿ ಕೆರೆಗೆ ಬಿದ್ದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಮೈಸೂರಿನ ಪಿರಿಯಾಪಟ್ಟಣ ತಾಲೂಕಿನ ಸುಂಡವಾಳು ಗ್ರಾಮದಲ್ಲಿ ಘಟನೆ ನಡೆದಿದೆ. ಕೃಷ್ಣಾಚಾರಿ (28) ಮೃತ ದುರ್ದೈವಿ. ಕೃಷ್ಣಾಚಾರಿ ಖಾಸಗಿ ಸಂಸ್ಥೆ ಹಾಗೂ ಕೈ ಸಾಲ ಮಾಡಿಕೊಂಡಿದ್ದ. ಸಾಲಗಾರರ ಒತ್ತಡದಿಂದ, ಸಾಲ ತೀರಿಸಲಾಗದೆ ಮನನೊಂದಿದ್ದ ಕೃಷ್ಣಾಚಾರಿ ಇದರಿಂದ ಬೇಸತ್ತು ಹೋಗಿದ್ದ. ಹೀಗಾಗಿ ಎಗ್ಗೆರೆ ಕೆರೆ ಮುಂದೆ ನಿಂತು ಸೆಲ್ಫಿ ವಿಡಿಯೋ ಮಾಡಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಕೆರೆ ಬಳಿ ಕೃಷ್ಣಾಚಾರಿಯ ಮೊಬೈಲ್ ಹಾಗೂ ಚಪ್ಪಲಿ ದೊರೆತಿದೆ. ತಾನು ಸಾಯುತ್ತಿರುವುದಾಗಿ ಪೊಲೀಸ್ ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಸ್ನೇಹಿತರೊಬ್ಬರಿಗೂ ಸಹ ಮೊಬೈಲ್‌ನಲ್ಲಿ ತಿಳಿಸಿದ್ದಾರೆಂದು ಹೇಳಲಾಗಿದೆ. ಒಟ್ಟು 20 ಲಕ್ಷ ರೂ. ಸಾಲ ಇತ್ತು ಎನ್ನಲಾಗಿದೆ. ಪಿರಿಯಾಪಟ್ಟಣ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version