ವಿಜಯನಗರ: ಹರಪನಹಳ್ಳಿ ತಾಲೂಕಿನ ಚನ್ನಹಳ್ಳಿ ತಾಂಡಾದಲ್ಲಿರುವ ಕೆರೆಯಲ್ಲಿ ತಮ್ಮ ಈಜಲು ಹೋಗಿದ್ದಾನೆ. ಆಗ ನೀರಿನಲ್ಲಿ ಆತ ನೀರಿನಲ್ಲಿ ಮುಳುಗುವುದನ್ನು (Drowned) ಕಂಡ ಮೂವರು ಅಕ್ಕಂದಿರು ರಕ್ಷಿಸಲು ಹೋಗಿ ಅವರೂ ನೀರುಪಾಲಾಗಿದ್ದಾರೆ. ಹೀಗಾಗಿ ಒಂದೇ ಕುಟುಂಬದ ನಾಲ್ವರು ಮೃತಪಟ್ಟಂತಾಗಿದೆ.
ಅಭಿ ವೀರ್ಯಾ ನಾಯ್ಕ (೧೩), ಅಶ್ವಿನಿ (೧೪), ಕಾವೇರಿ (೧೮), ಅಪೂರ್ವ (೧೮) ಮೃತ ದುರ್ದೈವಿಗಳು. ಇತ್ತೀಚೆಗೆ ನಿರಂತರ ಮಳೆಯಿಂದಾಗಿ ಕೆರೆ, ಹಳ್ಳ ಹಾಗೂ ಹೊಂಡಗಳು ತುಂಬಿದ್ದವು. ಈ ಹಿನ್ನೆಲೆಯಲ್ಲಿ ಅಭಿ ನೀರಿನಲ್ಲಿ ಈಜಲು ಹೋಗಿದ್ದಾನೆ. ಆಗ ಆತನಿಗೆ ದಣಿವಾಗಿ ನೀರಿನಲ್ಲಿ ಮುಳುಗಲು ಪ್ರಾರಂಭಿಸಿದ್ದಾನೆ. ಇದನ್ನು ಕಂಡ ಅಶ್ವಿನಿ, ಕಾವೇರಿ ಹಾಗೂ ಅಪೂರ್ವ ರಕ್ಷಣೆಗೆ ದಾವಿಸಿದ್ದಾರೆ. ಆದರೆ, ಅಭಿ ನೀರಿನ ಸೆಳೆತಕ್ಕೆ ಸಿಲುಕಿದ್ದು, ರಕ್ಷಣೆ ಮಾಡಲು ಕಷ್ಟವಾಗಿದೆ. ನೀರಿನಲ್ಲಿ ಇವರೂ ಮುಂದಕ್ಕೆ ಹೋಗಿದ್ದರಿಂದ ಒಬ್ಬರಾದ ಮೇಲೆ ಒಬ್ಬರಂತೆ ನೀರಿನಲ್ಲಿ ಮುಳುಗಿದ್ದು, ಉಸಿರುಗಟ್ಟಿ ಮೃತಪಟ್ಟಿದ್ದಾರೆ.
ಸದ್ಯ ಅಭಿ, ಅಶ್ವಿನಿ, ಕಾವೇರಿ ಅವರ ಮೃತದೇಹಗಳು ಪತ್ತೆಯಾಗಿದ್ದು, ಅಪೂರ್ವಾ ಶವಕ್ಕಾಗಿ ಹುಡುಕಾಟ ನಡೆದಿದೆ. ಹರಪನಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದ್ದು, ಪೊಲೀಸರು ಸ್ಥಳಕ್ಕೆ ಭೇಟಿ ನೀಡಿದ್ದಾರೆ.
ಇದನ್ನೂ ಓದಿ | ರಾಜ್ಯೋತ್ಸವ ಪ್ರಶಸ್ತಿಗೆ ಆಯ್ಕೆಯಾದ ಮಾರಣಕಟ್ಟೆ ಕೃಷ್ಣಮೂರ್ತಿ ಕಾರು ಅಪಘಾತ; ಅಪಾಯದಿಂದ ಪಾರು