Site icon Vistara News

Drowns in Farm Pond: ಕೃಷಿ ಹೊಂಡದಲ್ಲಿ ಮುಳುಗಿ ಇಬ್ಬರು ಬಾಲಕರ ಸಾವು

Drown in pond

ವಿಜಯಪುರ: ಕೃಷಿ ಹೊಂಡದಲ್ಲಿ ಮುಳುಗಿ ಇಬ್ಬರು ಬಾಲಕರು ಮೃತಪಟ್ಟ ಘಟನೆ (Drowns in Farm Pond) ಜಿಲ್ಲೆಯ ಇಂಡಿ ಪಟ್ಟಣದ ದೇಶಪಾಂಡೆ ತಾಂಡಾದಲ್ಲಿ ನಡೆದಿದೆ. ಕೃಷಿ ಹೊಂಡದಲ್ಲಿ ಈಜಲು ಹೋದಾಗ ಬಾಲಕರು ನೀರಿನಲ್ಲಿ ಮುಳುಗಿ ದುರ್ಘಟನೆ ಸಂಭವಿಸಿದೆ. ಅಮಿತ್ ರಾಠೋಡ (12), ಸುದೀಪ್ ಜಾಧವ್ (13) ಮೃತರು. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಇದನ್ನೂ ಓದಿ | Actress Murder: ‘ಭಜರಂಗಿ’ ಸಿನಿಮಾ ನಟಿ ಗಂಡನಿಂದಲೇ ಭೀಕರ ಕೊಲೆ!

ಒಂದೇ ಕುಟುಂಬದ ಮೂವರು ನಿಗೂಢ ನಾಪತ್ತೆ

ದಾವಣಗೆರೆ: ಒಂದೇ ಕುಟುಂಬದ ಮೂವರು ನಿಗೂಢವಾಗಿ ನಾಪತ್ತೆಯಾದ (family missing Case) ಘಟನೆ ದಾವಣೆಗೆರೆಯಲ್ಲಿ (Davanagere crime news) ನಡೆದಿದೆ. ನಾಪತ್ತೆಯಾದವರು ದಾವಣಗೆರೆಯ ವಿನೋಬಾ ನಗರದ 7ನೇ ಕ್ರಾಸ್‌ನಲ್ಲಿರುವ ಮನೆಯ ನಿವಾಸಿಗಳಾಗಿದ್ದು, ಇವರ ಪತ್ತೆಗಾಗಿ ಕುಟುಂಬಸ್ಥರು ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ.

ಪತಿ, ಪತ್ನಿ, ಮಗಳು ನಾಪತ್ತೆಯಾದವರು. ಅಂಜನ್ ಬಾಬು (34) ನಾಗವೇಣಿ (24) ಹಾಗೂ ನಕ್ಷತ್ರ (1) ಏಪ್ರಿಲ್ 12ರಂದು ಮನೆಯಿಂದ ಹೋದವರು ಇದುವರೆಗೂ ಮನೆಗೆ ವಾಪಸ್ ಬಂದಿಲ್ಲ. ಯಾವ ಕಾರಣಕ್ಕೆ ಮನೆ ಬಿಟ್ಟು ಹೋಗಿದ್ದಾರೆ ಎನ್ನುವ ನಿಖರ ಕಾರಣ ತಿಳಿದು ಬಂದಿಲ್ಲ. ಬಂಧು ಬಾಂಧವರಿಗೆ ಯಾವುದೇ ಸೂಚನೆ, ಮಾಹಿತಿ ನೀಡಿಲ್ಲ. ಯಾವುದೇ ಪತ್ರ ಬರೆದಿಟ್ಟಿಲ್ಲ. ಹೀಗಾಗಿ ಇವರು ನಿಗೂಡವಾಗಿ ನಾಪತ್ತೆಯಾಗಿರುವ ಪ್ರಕರಣ ಕುತೂಹಲ ಕೆರಳಿಸಿದೆ. ನಾಪತ್ತೆ ಬಗ್ಗೆ ಬಡಾವಣೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಸಾಲ ವಸೂಲಿಗೆ ಹೆಂಡತಿ- ಮಗನಿಗೆ ಗೃಹಬಂಧನ, ಅವಮಾನದಿಂದ ರೈತ ಆತ್ಮಹತ್ಯೆ, ಎಂಥ ರಾಕ್ಷಸಿ ಇವಳು!

ಬೆಳಗಾವಿ: ರೈತರೊಬ್ಬರು ಮಾಡಿದ ಸಾಲ ಕಟ್ಟಲಿಲ್ಲ (farmer loan) ಎಂದು ಸಾಲ ನೀಡಿದ ಮಹಿಳೆ ಆ ರೈತನ ಪತ್ನಿ ಹಾಗೂ ಪುತ್ರನಿಗೆ ಅನ್ನ ನೀರು ಕೊಡದೆ ಗೃಹಬಂಧನದಲ್ಲಿಟ್ಟ, ಇದರಿಂದ ನೊಂದ ರೈತ ಆತ್ಮಹತ್ಯೆ (farmer suicide, farmer self harming) ಮಾಡಿಕೊಂಡ ಮನ ಕಲಕುವ ಘಟನೆ ಬೆಳಗಾವಿ (belagavi news) ಜಿಲ್ಲೆಯ ಹುಕ್ಕೇರಿ ತಾಲೂಕಿನ ಇಸ್ಲಾಂಪುರ ಗ್ರಾಮದಲ್ಲಿ ನಡೆದಿದೆ.

ಸಚಿವ ಸತೀಶ್ ಜಾರಕಿಹೊಳಿ ಪ್ರತಿನಿಧಿಸುವ ಯಮಕನಮರಡಿ ಕ್ಷೇತ್ರದಲ್ಲಿ ಈ ಅಮಾನವೀಯ ಕೃತ್ಯ ನಡೆದಿದೆ. ಭೀಕರ ಬರಕ್ಕೆ ಕೈಕೊಟ್ಟ ಬೆಳೆಗಳಿಂದಾಗಿ ಉಪಜೀವನಕ್ಕೆ ರೈತ ಸಾಲದ ಮೊರೆ ಹೋಗಿದ್ದರು. ಸಾಲ ಮರುಪಾವತಿ ವಿಳಂಬವಾಗಿದ್ದಕ್ಕೆ ರೈತನ ಪತ್ನಿ, ಪುತ್ರನಿಗೆ ಗೃಹಬಂಧನದ ಶಿಕ್ಷೆಯನ್ನು ಸಾಲ ನೀಡಿದ ಮಹಿಳೆ ವಿಧಿಸಿದ್ದಳು. ಇದರಿಂದ ಮನನೊಂದ ರೈತ ರಾಜು ಖೋತಗಿ ವಿಷಸೇವಿಸಿ ಆತ್ಮಹತ್ಯೆಗೆ ಶರಣಾಗಿದ್ದಾರೆ.

ಇಸ್ಲಾಂಪುರ ಗ್ರಾಮದ ಸಿದ್ದವ್ವ ಬಯ್ಯನವರ ಎಂಬ ಹೆಸರಿನ ವಿಕೃತ ಮಹಿಳೆಯಿಂದ ಈ ಕೃತ್ಯ ನಡೆದಿದೆ. ರಾಜು ಖೋತಗಿ ತಮ್ಮ ಜೀವನ ‌ನಿರ್ವಹಣೆಗೆ ಸಿದ್ದವ್ವ ಬಳಿ ಐದು ತಿಂಗಳ ಹಿಂದೆ ಒಂದೂವರೆ ಲಕ್ಷ ರೂ. ಸಾಲ ಪಡೆದಿದ್ದರು. ಪಡೆದಿದ್ದ ಸಾಲಕ್ಕೆ ಪ್ರತಿ ತಿಂಗಳು ಶೇ. 10ರಷ್ಟು ಬಡ್ಡಿ ಸಹ ತುಂಬುತ್ತಿದ್ದರು. ಎರಡು ದಿನಗಳ ಹಿಂದೆ ಏಕಾಏಕಿ ಮನೆಗೆ ಕರೆದು ಕೊಟ್ಟ ಸಾಲ ಮರಳಿಸುವಂತೆ ಸಿದ್ದವ್ವ ತಾಕೀತು ಮಾಡಿದ್ದಾಳೆ. ರಾಜು ಸಾಲ ಮರಳಿಸಲು ಒಂದೆರಡು ದಿನ ಕಾಲಾವಕಾಶ ಕೇಳಿದ್ದರು.

ಇದಕ್ಕೆ ಒಪ್ಪದೇ, ಸಾಲ ಮರಳಿಸುವವರೆಗೂ ಪುತ್ರ ಬಸವರಾಜ ಖೋತಗಿಯನ್ನು ತನ್ನ ಮನೆಯಲ್ಲಿ ಬಿಟ್ಟು ಹೋಗುವಂತೆ ಸಿದ್ದವ್ವ ತಾಕೀತು ಮಾಡಿದ್ದಳು. ಎರಡು ದಿನವಾದರೂ ಪುತ್ರನನ್ನು ಬಿಡದಾಗ ಸಿದ್ದವ್ವಳ ಮನೆಗೆ ಕೇಳಲು ರಾಜು-ದುರ್ಗವ್ವ ಹೋಗಿದ್ದರು. ಈ ವೇಳೆ ಬಸವರಾಜ್‌ನನ್ನು ಬಿಟ್ಟು ರಾಜು ಖೋತಗಿ, ಪತ್ನಿ ದುರ್ಗವ್ವರನ್ನು ಮನೆಯಲ್ಲಿ ಕೂರಿಸಿ ಶಿಕ್ಷೆ ವಿಧಿಸಿದ್ದಾಳೆ. ಮೂವರನ್ನೂ ಹನಿ ನೀರು, ತುತ್ತು ಅನ್ನ ನೀಡದೇ 2 ದಿನ ಗೃಹಬಂಧನದಲ್ಲಿಟ್ಟಿದ್ದಾಳೆ.

ಇದನ್ನೂ ಓದಿ | Road Accident : ತಾಯಿ-ಮಗನ ಬಲಿ ಪಡೆದ ಕಂಟೇನರ್‌; ಆಟೋ ಪ್ರಯಾಣಿಕ ಸೇರಿ ಸವಾರರಿಬ್ಬರ ಪ್ರಾಣ ಕಸಿದ ಬೈಕ್‌

ಇದರಿಂದ ಮನನೊಂದು ಮನೆಗೆ ಬಂದ ರಾಜು ಖೋತಗಿ ವಿಷಸೇವಿಸಿ ಆತ್ಮಹತ್ಯೆಗೆ ಶರಣಾಗಿದ್ದಾರೆ. ದೂರು ನೀಡಲು ಹೋದರೆ, ಸಿದ್ದವ್ವಳ ಅನ್ಯಾಯದ ವಿರುದ್ಧ ಪೊಲೀಸರು ದೂರು ದಾಖಲಿಸಿಕೊಳ್ಳದೇ ಸತಾಯಿಸಿದ್ದಾರೆ. ಬೆಳಗ್ಗೆಯಿಂದ ಠಾಣೆಯಲ್ಲಿ ಕೂರಿಸಿಕೊಂಡು ರಾತ್ರಿ ವೇಳೆ ದುರ್ಬಲ ಸೆಕ್ಷನ್‌ನಡಿ ದೂರು ದಾಖಲಿಸಿಕೊಂಡಿದ್ದಾರೆ ಎಂದು ಯಮಕನಮರಡಿ ಠಾಣೆ ಪೊಲೀಸರ ವಿರುದ್ಧ ಪತಿ ಕಳೆದುಕೊಂಡ ದುರ್ಗವ್ವ, ಪೋಷಕರು ಆರೋಪಿಸಿದ್ದಾರೆ.

Exit mobile version