Site icon Vistara News

Drowns in Lake: ಕೆರೆಯಲ್ಲಿ ಮುಳುಗಿ ಯುವಕ ಸಾವು; ಸಾಲ ಬಾಧೆ ತಾಳಲಾರದೆ ರೈತ ಆತ್ಮಹತ್ಯೆ

Drowns in Lake

ಧಾರವಾಡ: ಕೆರೆಯಲ್ಲಿ ಮುಳುಗಿ ಯುವಕ ಮೃತಪಟ್ಟಿರುವ ಘಟನೆ (Drowns in Lake) ಜಿಲ್ಲೆಯ ನವಲಗುಂದ ತಾಲೂಕಿನ ಹಾಲಕುಸುಗಲ್ ಗ್ರಾಮದಲ್ಲಿ ನಡೆದಿದೆ. ಕೆರೆಯಲ್ಲಿ ಈಜಲು ಹೋಗಿದ್ದ ವೇಳೆ ದುರ್ಘಟನೆ ನಡೆದಿದೆ.

ಮುನ್ನಾ ಮಕ್ತುಮ್ ಸಾಬ್ ಹೆಬಸೂರ(22) ಮೃತ ಯುವಕ. ನೆನ್ನೆ ಸಂಜೆ ಕೆರೆಯಲ್ಲಿ ಯುವಕ ನಾಪತ್ತೆಯಾಗಿದ್ದ. ಅಗ್ನಿ ಶಾಮಕ ದಳದಿಂದ ಮೃತ ಯುವಕನ ಶವಕ್ಕಾಗಿ ಶೋಧ ನಡೆಸಲಾಗುತ್ತಿದೆ.

ಸಾಲ ಬಾಧೆ ತಾಳಲಾರದೆ ಯುವ ರೈತ ಆತ್ಮಹತ್ಯೆ

ಯಾದಗಿರಿ: ಸಾಲ ಬಾಧೆ ತಾಳಲಾರದೆ ಯುವ ರೈತ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಯಾದಗಿರಿಯ ತಾಲೂಕಿನ ಸಂಗವಾರ ಗ್ರಾಮದಲ್ಲಿ ನಡೆದಿದೆ. ನಂಜುಂಡ ನಾಗಣ್ಣೋರ್ (26) ಆತ್ಮಹತ್ಯೆ ಮಾಡಿಕೊಂಡ ರೈತ. ಬ್ಯಾಂಕ್ ಹಾಗೂ ವೈಯಕ್ತಿಕವಾಗಿ ಸೇರಿ 5 ಲಕ್ಷ ಸಾಲ ರೈತ ಮಾಡಿದ್ದರು. 2.5 ಎಕರೆ ಜಮೀನಿನಲ್ಲಿ ಉಳುಮೆ ಮಾಡಿಕೊಂಡಿದ್ದ ರೈತ, ಕಳೆದ ವರ್ಷ ಬರಗಾಲಕ್ಕೆ ಸಿಕ್ಕಿ ಸಾಲ ತೀರಿಸಲಾಗದೇ ನೊಂದಿದೆ. ಹೀಗಾಗಿ ನೇಣಿಗೆ ಶರಣಾಗಿದ್ದಾರೆ. ಸೈದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮೈಸೂರಲ್ಲಿ ಗೃಹ ಪ್ರವೇಶದ ಊಟ ತಿಂದ ವೃದ್ಧೆ ಸಾವು; 20ಕ್ಕೂ ಹೆಚ್ಚು ಮಂದಿ ಅಸ್ವಸ್ಥ

ಮೈಸೂರು: ಗೃಹ ಪ್ರವೇಶದಲ್ಲಿ ಊಟ ತಿಂದ ವೃದ್ಧೆಯೊಬ್ಬರು ತೀವ್ರ ಅಸ್ವಸ್ಥಗೊಂಡು (Food Poisoning) ಮೃತಪಟ್ಟಿದ್ದಾರೆ. ಶಿವಮ್ಮ (65) ಮೃತ ದುರ್ದೈವಿ. ಮೈಸೂರಿನ ಮಾರ್ಬಳ್ಳಿಯಲ್ಲಿ ಘಟನೆ ನಡೆದಿದೆ.

ಮಾರ್ಬಳ್ಳಿಯಲ್ಲಿ ನಿನ್ನೆ ಭಾನುವಾರ ಮನೆಯೊಂದರ ಗೃಹ ಪ್ರವೇಶ ಕಾರ್ಯಕ್ರಮವಿತ್ತು. ಈ ಗೃಹ ಪ್ರವೇಶ ಕಾರ್ಯದಲ್ಲಿ ಗ್ರಾಮಸ್ಥರು ಊಟ ಸೇವಿಸಿದ್ದರು. ಊಟದ ಬಳಿಕ ಸುಮಾರು ಮಕ್ಕಳು ಸೇರಿ 20ಕ್ಕೂ ಹೆಚ್ಚು ಮಂದಿಗೆ ವಾಂತಿ, ಭೇದಿ ಶುರುವಾಗಿತ್ತು.

ಇತ್ತ ತೀವ್ರ ಅಸ್ವಸ್ಥಗೊಂಡವರನ್ನು ಮೈಸೂರು ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಹಲವರಿಗೆ ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲೇ ಚಿಕಿತ್ಸೆ ಕೊಡಲಾಗಿದೆ. ಗ್ರಾಮಕ್ಕೆ ಆರೋಗ್ಯಾಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಇದನ್ನೂ ಓದಿ: Karnataka Rain : ಸಿಡಿಲಿಗೆ ಆಕಳು ಬಲಿ; ಹಲವೆಡೆ ಮಳೆ ಅವಾಂತರಕ್ಕೆ ಜನರು ತತ್ತರ

ಬರ್ತ್‌ ಡೇ ಪಾರ್ಟಿಯಲ್ಲಿ ಭಾರೀ ಶೂಟೌಟ್‌-27 ಮಂದಿಗೆ ಗುಂಡೇಟು

ಅಕ್ರಾನ್‌ : ಕೆಲವೊಮ್ಮೆ ಸಣ್ಣ ಪುಟ್ಟ ಗಲಾಟೆ ಜಗಳ, ಕೋಪ, ಎಡವಟ್ಟಿನಿಂದಾಗಿ ಅದೆಂಥಾ ದೊಡ್ಡ ಸಂಭ್ರಮಾಚರಣೆ ಆಗಿದ್ದರೂ ಅದನ್ನು ಒಂದು ಕ್ಷಣದಲ್ಲಿ ಸ್ಮಶಾನವನ್ನಾಗಿಸಿ ಬಿಡುತ್ತದೆ. ಅಂತಹದ್ದೇ ಒಂದು ಘಟನೆ ಅಮೆರಿಕದ ಓಹಿಯೋ ರಾಜ್ಯದಲ್ಲಿ ನಡೆದಿದೆ. ಸಂಭ್ರಮದಿಂದ ನಡೆಯುತ್ತಿದ್ದ ಬರ್ತ್‌ ಡೇ ಪಾರ್ಟಿ(Birthday Party) ದುರಂತ ಅಂತ್ಯ ಕಂಡಿದೆ. ಏಕಾಏಕಿ ಶೂಟೌಟ್‌(Shootout) ನಡೆದಿದ್ದು, ಬರೋಬ್ಬರಿ 27 ಮಂದಿಗೆ ಗುಂಡೇಟು ಬಿದ್ದಿದೆ. ಇನ್ನು ಈ ಭೀಕರ ದೃಶ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ರೆಕಾರ್ಡ್‌ ಆಗಿದ್ದು, ಸಾಮಾಜಿಕ ಜಾಲತಾಣದಲ್ಲಿ ವೈರಲ್‌(Viral Video) ಆಗಿದೆ.

ಘಟನೆ ವಿವರ:

ಓಹಿಯೋ ರಾಜ್ಯದ ಅಕ್ರಾನ್‌ನಲ್ಲಿ ಈ ದುರ್ಘಟನೆ ಸಂಭವಿಸಿದೆ. ಇಲ್ಲಿನ ಕೆಲ್ಲಿ ರಸ್ತೆಯಲ್ಲಿರುವ ಮನೆಯೊಂದರಲ್ಲಿ ರಾತ್ರಿ 10 ಗಂಟೆಗೆ ಬರ್ತ್‌ ಡೇ ಪಾರ್ಟಿವೊಂದನ್ನು ಆಯೋಜಿಸಲಾಗಿತ್ತು. ಹೀಗಾಗಿ ಸುಮಾರು 200ಕ್ಕೂ ಅಧಿಕ ಮಂದಿ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ಮನೆಯ ಎದುರುಗಡೆ ಇರುವ ರಸ್ತೆಯಲ್ಲಿ ಜನ ಕಿಕ್ಕಿರಿದಿದ್ದ ಹಿನ್ನೆಲೆ ಟ್ರಾಫಿಕ್‌ ಸಮಸ್ಯೆಯೂ ಉಂಟಾಗಿತ್ತು ಹೀಗಾಗಿ ಸ್ಥಳಕ್ಕೆ ದೌಡಾಯಿಸಿದ ಪೊಲೀಸರು ರಸ್ತೆ ಕ್ಲಿಯರ್‌ ಮಾಡುವಂತೆ ಸೂಚಿಸಿದ್ದರು. ಇದಾದ ಬಳಿಕ ಅವರು ಅಲ್ಲಿಂದ ತೆರಳಿದ್ದರು. ಇದಾದ ಕೆಲವೇ ಹೊತ್ತಲ್ಲಿ ಸ್ಥಳದಲ್ಲಿ ಗುಂಡಿನ ದಾಳಿ ನಡೆದಿರುವ ಬಗ್ಗೆ ಪೊಲೀಸರಿಗೆ ಬ್ಯಾಕ್‌ ಟು ಬ್ಯಾಕ್‌ ಕರೆಗಳು ಹೋಗಿವೆ. ಸ್ಥಳಕ್ಕೆ ಬಂದು ನೋಡಿದಾಗ 25ಜನ ಗುಂಡೇಟು ತಗುಲಿ ಗಂಭಿರವಾಗಿ ಗಾಯಗೊಂಡು ಸ್ಥಳದಲ್ಲೇ ಜೀವನ್ಮರಣದ ನಡುವೆ ಹೋರಾಡುತ್ತಿದ್ದರು.

ಇನ್ನು ಘಟನೆಯಲ್ಲಿ 27ವರ್ಷದ ಒಬ್ಬ ಯುವಕ ಮೃತಪಟ್ಟಿದ್ದು, ನಾಲ್ವರ ಸ್ಥಿತಿ ಬಹಳ ಗಂಭೀರವಾಗಿದೆ. ಇನ್ನು ಎಲ್ಲಾ ಗಾಯಾಳುಗಳನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಘಟನಾ ಸ್ಥಳದಲ್ಲಿ, ರೈಫಲ್‌ನಿಂದ ಕೇಸಿಂಗ್‌ಗಳು ಸೇರಿದಂತೆ ಎರಡು ಬಂದೂಕುಗಳು ಮತ್ತು ಅನೇಕ ರೀತಿಯ ಶೆಲ್ ಕೇಸಿಂಗ್‌ಗಳು ಪತ್ತೆಯಾಗಿವೆ ಎಂದು ಪೊಲೀಸರು ತಿಳಿಸಿದ್ದಾರೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version