ಬೆಂಗಳೂರು: ಅಂತರಾಜ್ಯ ಡ್ರಗ್ ಪೆಡ್ಲರ್‌ಗಳನ್ನು (Drugs case) ಬಂಧಿಸಬೇಕಾದರೆ ಕರ್ನಾಟಕ ಪೊಲೀಸರ ಸರ್ಕಸ್ ಅಷ್ಟಿಷ್ಟಲ್ಲ. ತಮ್ಮ ತಪ್ಪನ್ನು ಮುಚ್ಚಿಹಾಕಲು ಆರೋಪಿಗಳ ಕುಟುಂಬಸ್ಥರು ಪೊಲೀಸರನ್ನೇ ಕಿಡ್ನ್ಯಾಪರ್ಸ್ ಎಂದು ಬಿಂಬಿಸಿದ ಘಟನೆ ಮಹಾರಾಷ್ಟ್ರದಲ್ಲಿ ನಡೆದಿದೆ.
ಒಮ್ಮೊಮ್ಮೆ ಪರಿಸ್ಥಿತಿ ಹೇಗೆ ಬದಲಾಗಿ ಬಿಡುತ್ತದೆ ಎಂಬುದಕ್ಕೆ ಈ ಘಟನೆಯೇ ಸಾಕ್ಷಿ ಆಗಿದೆ. ಸಿಕ್ಕ ಆರೋಪಿಗಳನ್ನು ಬಂಧಿಸಲು ಹೋದ ಪೊಲೀಸರನ್ನೇ ಆರೋಪಿಗಳನ್ನಾಗಿ ಮಾಡಿದ್ದಾರೆ. ಅಮೂಲ್, ಆಕಾಶ್, ರಾಹುಲ್ ಈ ಮೂವರು ಸಹೋದರರನ್ನು ಬಂಧಿಸಿರುವ ಗಿರಿನಗರ ಪೊಲೀಸರು 50 ಲಕ್ಷ ಮೌಲ್ಯದ 79 ಕೆ.ಜಿ ಗಾಂಜಾವನ್ನು ವಶಕ್ಕೆ ಪಡೆದಿದ್ದಾರೆ. ಸದ್ಯ ಇವರ ಮೊಗದಲ್ಲಿ ಗೆದ್ದ ಸಂತೋಷವೇನೋ ಇದೆ. ಆದರೆ ಅವರನ್ನು ಬಂಧಿಸುವ ವೇಳೆ ನಡೆದ ಘಟನೆಗಳು ನಿಜಕ್ಕೂ ಪೊಲೀಸರಿಗೆ ತಲೆ ನೋವು ತಂದಿತ್ತು. ಮಹಾರಾಷ್ಟ್ರದಲ್ಲಿ ಬೆಂಗಳೂರಿನ ಗಿರಿನಗರ ಪೊಲೀಸರ ತಂಡ ನಿಜಕ್ಕೂ ಆರೋಪಿಗಳಾಗಿ ಬಿಟ್ಟಿದ್ದರು.
ಅಂದಹಾಗೇ, ಬೆಂಗಳೂರು ನಗರದಲ್ಲಿ ಸೈಯದ್ ಸಾಧಿಕ್ ಎಂಬಾತ ಡ್ರಗ್ ಪ್ರಕರಣದಲ್ಲಿ ಸಿಕ್ಕಿಬಿದ್ದಿದ್ದ. ಕನ್ಸ್ಯೂಮರ್ ಟು ಪೆಡ್ಲರ್ ಕಾನ್ಸೆಪ್ಟ್‌ನ ಅನ್ವಯ ಕಾರ್ಯ ನಿರ್ವಹಿಸಿದ ಪೊಲೀಸರು, ಸೈಯದ್‌ನನ್ನು ಬಂಧಿಸಿದ್ದರು. ಬಳಿಕ ಗಾಂಜಾ ಎಲ್ಲಿಂದ ತರುವುದು, ಎಲ್ಲೆಲ್ಲಿ ಮಾರಾಟ ಮಾಡುತ್ತೀರಿ ಎಂಬ ಮಾಹಿತಿಯನ್ನು ಕಲೆ ಹಾಕಿದ್ದರು.
ಮಫ್ತಿಯಲ್ಲಿ ಮಹಾರಾಷ್ಟ್ರಕ್ಕೆ ಹಾರಿದ ಪೊಲೀಸರು
ಸೈಯದ್ ಸಾಧಿಕ್ ನೀಡಿದ ಮಾಹಿತಿಯನ್ನು ಆಧಾರಿಸಿ ಗಿರಿನಗರ ಪೊಲೀಸರು ನೇರವಾಗಿ ಮಹಾರಾಷ್ಟ್ರದ ಜಲಾನಕ್ಕೆ ಹೋಗಿದ್ದರು. ಗಾಂಜಾ ಮಾರಾಟ ಮಾಡಿ ಅಮೂಲ್, ಆಕಾಶ್, ರಾಹುಲ್ ಮಹಾರಾಷ್ಟ್ರದ ಜಲಾನದಲ್ಲಿ ಸ್ವಂತ ಗ್ಯಾರೇಜ್ ಓಪನ್ ಮಾಡಿಕೊಂಡಿದ್ದರು. ಮಫ್ತಿಯಲ್ಲಿದ್ದ ಗಿರಿನಗರ ಪೊಲೀಸರ ಕೈಗೆ ಈ ಮೂವರು ಸಿಕ್ಕಿಬಿದ್ದಿದ್ದರು.
ಕಿಡ್ನ್ಯಾಪ್ ಡ್ರಾಮಾ ಮಾಡಿದ ಕುಟುಂಬಸ್ಥರು
ಈ ಮೂವರನ್ನು ಬಂಧಿಸುವ ಮೊದಲು ಅವರ ಕುಟುಂಬಸ್ಥರಿಗೆ ಗಿರಿನಗರ ಪೊಲೀಸರು ಐಡಿ ಕಾರ್ಡನ್ನು ತೋರಿಸಿ ಗಾಂಜಾ ಕೇಸಲ್ಲಿ ಬಂಧಿಸುತ್ತಿರುವುದಾಗಿ ಹೇಳಿ, ಬೆಂಗಳೂರಿಗೆ ಹೊರಟಿದ್ದರು. ಆದರೆ ತಮ್ಮ ಮಕ್ಕಳನ್ನು ಉಳಿಸಿಕೊಳ್ಳಬೇಕು ಎಂಬ ಕಾರಣಕ್ಕೆ ಮಹಾರಾಷ್ಟ್ರ ಪೊಲೀಸರಿಗೆ ಕರೆ ಮಾಡಿ, ಮನೆಗೆ ನುಗ್ಗಿ ಮಕ್ಕಳನ್ನು ಯಾರೋ ಕಿಡ್ನ್ಯಾಪ್ ಮಾಡಿದ್ದಾರೆ ಕಾಪಾಡಿ ಎಂದು ಸುಳ್ಳು ಹೇಳಿದ್ದರು.
ಇದನ್ನೂ ಓದಿ: Suicide Case : ಎಸ್‌ಐ ಪತ್ನಿಯ ನಿಗೂಢ ಸಾವು; ಬಂಧನ ಆಗ್ರಹಿಸಿ ಠಾಣೆ ಮುಂದೆ ಪ್ರತಿಭಟನೆ
ಕೂಡಲೇ ಅಲರ್ಟ್ ಆದ ಮಹಾರಾಷ್ಟ್ರ ಪೊಲೀಸರು, ಮಫ್ತಿಯಲ್ಲಿದ್ದ ಪೊಲೀಸರನ್ನು ಚೇಸ್ ಮಾಡಿಕೊಂಡು ಬಂದಿದ್ದಾರೆ. ನಾಗ್ಪುರದ ಟೋಲ್ ಬಳಿ ಬರುತ್ತಿದ್ದಂತೆ ಮಹಾರಾಷ್ಟ್ರ ಪೊಲೀಸರು, ಮಫ್ತಿಯಲ್ಲಿದ್ದ ಕರ್ನಾಟಕ ಪೊಲೀಸರನ್ನು ಕವರ್ ಆಫ್ ಮಾಡಿದ್ದಾರೆ. ಈ ವೇಳೆ ತಮ್ಮ ಐಡಿ ಕಾರ್ಡ್ ತೋರಿಸಿ ಒಂದೆರಡು ಫೋನ್ ಕಾಲ್‌ಗಳನ್ನು ಮಾಡಿಸಿದಾಗ ಗಿರಿನಗರ ಪೊಲೀಸರನ್ನು ಕಳಿಸಿಕೊಟ್ಟಿದ್ದಾರೆ.
ರಾಜ್ಯದ ಇನ್ನಷ್ಟು ಸುದ್ದಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ