Site icon Vistara News

Drugs case: ಹೊಂಗೆ ಮರದಡಿ ಗಾಂಜಾ ಬಚ್ಚಿಟ್ಟು ವಿದ್ಯಾರ್ಥಿಗಳಿಗೆ ಮಾರಾಟ ಮಾಡುತ್ತಿದ್ದನ ಬಂಧನ

#image_title

ಬೆಂಗಳೂರು/ವಿಜಯಪುರ: ಡ್ರಗ್ಸ್ ಪ್ರಕರಣದಲ್ಲಿ (Drugs case) ಜೈಲಿಗೆ ಹೋಗಿ ಹೊರ ಬಂದವನು ಹಳೆ ಚಾಳಿಯನ್ನೇ ಮುಂದುವರಿಸಿದ್ದು, ಅಕ್ರಮವಾಗಿ ಗಾಂಜಾ ಮಾರಾಟ ಮಾಡುತ್ತಿದ್ದ ಆರೋಪಿಯನ್ನು ಕೆಂಗೇರಿ ಪೊಲೀಸರು (Kengeri police) ಬಂಧಿಸಿದ್ದಾರೆ.

ಶ್ರೀನಿವಾಸ್ ಅಲಿಯಾಸ್ ಚಿನ್ನಿ ಎಂಬಾತ ಉಲ್ಲಾಳ ಬಳಿ ಇರುವ ದಿ ಪಬ್ ಹೌಸ್ ಪಕ್ಕದಲ್ಲಿರುವ ಹೊಂಗೆ ಮರದ ಕೆಳಗೆ ಗಾಂಜಾ ಇಟ್ಟುಕೊಂಡು ಮಾರಾಟ ಮಾಡುತ್ತಿದ್ದ. ಪರಿಚಿತರಿಗೆ ಹಾಗು ಕಾಲೇಜು ವಿದ್ಯಾರ್ಥಿಗಳೇ ಈತನ ಗ್ರಾಹಕರಾಗಿದ್ದರು.

ಸಣ್ಣ ಸಣ್ಣ ಪೊಟ್ಟಣದಲ್ಲಿ ಕೆಲ ಗ್ರಾಂನಷ್ಟು ಗಾಂಜಾವನ್ನು 2-3ಸಾವಿರಕ್ಕೆ ಮಾರಾಟ ಮಾಡುತ್ತಿದ್ದ ಎಂದು ತಿಳಿದು ಬಂದಿದೆ. ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದಾಗ ಆರೋಪಿ ಸಿಕ್ಕಿಬಿದ್ದಿದ್ದಾನೆ. ಸದ್ಯ ಕೆಂಗೇರಿ ಪೊಲೀಸರು ಆರೋಪಿಯನ್ನು ಬಂಧಿಸಿ ಮತ್ತೆ ಜೈಲಿಗಟ್ಟಿದ್ದಾರೆ.

ಆರೋಪಿ ಇಮ್ರಾನ್‌ ಪಾಷಾ

ಗೋವಿಂದರಾಜನಗರ ಪೊಲೀಸರ ಕಾರ್ಯಾಚರಣೆ

ಎನ್‌ಡಿಪಿಎಸ್ ಆಕ್ಟ್ ನಡಿ ಮತ್ತೊಂದು ಕೇಸ್ ದಾಖಲಾಗಿದ್ದು ಇಮ್ರಾನ್ ಪಾಷಾ ಎಂಬಾತನನ್ನು ಗೋವಿಂದರಾಜನಗರ ಪೊಲೀಸರು ಬಂಧಿಸಿದ್ದಾರೆ. ಆರೋಪಿಯಿಂದ 6 ಕೆಜಿ ಗಾಂಜಾ ,ಒಂದು ಮೊಬೈಲ್ ಫೋನ್ ಜತೆಗೆ ಗಾಂಜಾವನ್ನು ಮಾರಾಟ ಮಾಡಲು ಬಳಸುವ ಸಣ್ಣ ಸಣ್ಣ ಪ್ಯಾಕೇಟ್‌ಗಳನ್ನು ವಶಕ್ಕೆ ಪಡೆದಿದ್ದಾರೆ. ಇನ್ನು ಆರೋಪಿ ಕೆ.ಜಿ.ಹಳ್ಳಿ ಮೂಲದವನಾಗಿದ್ದು, ನಗರದ ವಿವಿಧೆಡೆ ಗಾಂಜಾ ಸಪ್ಲೈ ಮಾಡುತ್ತಿದ್ದ ಎಂದು ತಿಳಿದು ಬಂದಿದೆ. ಮತ್ತೊಬ್ಬ ಆರೋಪಿಗಳಿಗಾಗಿ ಗೋವಿಂದರಾಜನಗರ ಪೊಲೀಸರು ಬಲೆ ಬೀಸಿದ್ದಾರೆ.

ವಿಜಯಪುರದಲ್ಲಿ ಪೊಲೀಸರ ದಾಳಿ

ಅಕ್ರಮವಾಗಿ ಗಾಂಜಾ ಮಾರಾಟ ಮಾಡುವಾಗ ಪೊಲೀಸರು ದಾಳಿ ನಡೆಸಿದ ಘಟನೆ ವಿಜಯಪುರ ಜಿಲ್ಲೆಯ ಇಂಡಿ ತಾಲೂಕಿನ ಸೋನಕನಹಳ್ಳಿ ಬಳಿ ನಡೆದಿದೆ. ಮುಕ್ತಿಯಾರ ಅಹ್ಮದ್ ಕೂಡ್ಲೆ, ಸದ್ದಾಂ ಮುಲ್ಲಾ ಬಂಧಿತ ಆರೋಪಿಗಳಾಗಿದ್ದಾರೆ. ಬಂಧಿತರಿಂದ 5 ಲಕ್ಷ ಮೌಲ್ಯದ 70 ಕೆಜಿ ಗಾಂಜಾ ಹಾಗೂ 5 ಲಕ್ಷ ಮೌಲ್ಯದ ಒಂದು ಕಾರು ಜಪ್ತಿ ಮಾಡಲಾಗಿದೆ. ವಿಜಯಪುರ ಸಿಇಎನ್ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಸಾಲಿಗ್ರಾಮ ಕಲ್ಲು ಕೊಟ್ಟು ವಂಚನೆ

ವಿಷ್ಟುವಿನ ಪ್ರತಿರೂಪ ಎಂದು ಯಾಮಾರಿಸಿ ಸಾಲಿಗ್ರಾಮ ಕಲ್ಲು ಕೊಟ್ಟು ವಂಚನೆ ಮಾಡಲು ಯತ್ನಿಸಿದ ಆರೋಪಿಗಳನ್ನು ಸಿಸಿಬಿ ಪೊಲೀಸರ ಕಾರ್ಯಚರಣೆ ನಡೆಸಿ ಬಂಧಿಸಿದ್ದಾರೆ. ಮನೋಜ್ ಹಾಗು ಆದಿತ್ಯ ಎಂಬುವವರು ಸಾಲಿಗ್ರಾಮ ಕಲ್ಲನ್ನು ಸುಮಾರು 2 ಕೋಟಿ ರೂ.ಗೆ ಮಾರಾಟ ಮಾಡಲು ಮುಂದಾಗಿದ್ದರು. ರಾಜಾಜಿನಗರದ ಖಾಸಗಿ ಹೋಟೆಲ್‌ನಲ್ಲಿ ಮಾರಾಟ ಮಾಡಲು ಯತ್ನಿಸಿದಾಗ ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿ ಸೆರೆಹಿಡಿದಿದ್ದಾರೆ.

ಚಿನ್ನಾಭರಣ ವಶಕ್ಕೆ

ಕುಖ್ಯಾತ ಕಳ್ಳರ ಬಂಧನ

ಹೊಸಕೋಟೆ ಪೊಲೀಸರು ಕಾರ್ಯಾಚರಣೆ ನಡೆಸಿ ಮೂವರು ಅಂತರಾಜ್ಯ ಕುಖ್ಯಾತ ಕಳ್ಳರನ್ನು ಬಂಧಿಸಿದ್ದಾರೆ. ಬಂಧಿತರಿಂದ 32 ಲಕ್ಷ ಮೌಲ್ಯದ 502 ಗ್ರಾಂ ಚಿನ್ನಾಭರಣ ವಶಕ್ಕೆ ಪಡೆಯಲಾಗಿದೆ. ಸೈಯದ್ ಆಲಿ, ಭರತ್ ಕುಮಾರ್ ಮತ್ತು ಆನಂದ್ ಬಂಧಿತ ಆರೋಪಿಗಳಾಗಿದ್ದಾರೆ.

ಮೂವರು ಕುಖ್ಯಾತ ಕಳ್ಳರ ಬಂಧನ

ಫಕೀರನ ವೇಷ ಹಾಕಿಕೊಂಡು ಮತ್ತು ಚಿನ್ನಾಭರಣಗಳನ್ನು ಪಾಲಿಶ್ ಮಾಡುವ ನೆಪದಲ್ಲಿ ಖದೀಮರು ಬರುತ್ತಿದ್ದರು. ಮಹಿಳೆಯರ ಗಮನ ಬೆರೆಡೆ ಸೆಳೆದು ಚಿನ್ನಾಭರಣ ದೋಚಿ ಪರಾರಿ ಆಗುತ್ತಿದ್ದರು. ಬೆಂಗಳೂರು, ಆಂಧ್ರಪ್ರದೇಶ ಮತ್ತು ತಮಿಳುನಾಡಿನಲ್ಲಿ ಕೃತ್ಯಗಳನ್ನು ಎಸಗಿದ್ದಾರೆ.

ಇದನ್ನೂ ಓದಿ: Road accident : ಕೋಲಾರ ಬಳಿ ಭೀಕರ ಅಪಘಾತ: ಕಾರು ರಸ್ತೆಯಿಂದ ಹೊಂಡಕ್ಕೆ ಉರುಳಿ ದಂಪತಿ ಮೃತ್ಯು

ಶ್ರೀಗಂಧದ ಮರ ಕಳ್ಳತನ

ಶ್ರೀಗಂಧ ಮರ ಕಳ್ಳತನ

ಸರ್ಕಾರಿ ಕಚೇರಿಯಲ್ಲಿನ ಶ್ರೀಗಂಧ ಮರವನ್ನು ಕತ್ತರಿಸಿ ಕಳ್ಳತನ ಮಾಡಿ ಪರಾರಿ ಆಗಿರುವ ಘಟನೆ ವಿಜಯಪುರ ಜಿಲ್ಲೆಯ ಬಸವನಬಾಗೇವಾಡಿ ಪಟ್ಟಣದ ಪ್ರವಾಸಿ ಮಂದಿರದಲ್ಲಿ ನಡೆದಿದೆ. ಕಚೇರಿಯ ಆವರಣದಲ್ಲಿ ಬೆಳೆದಿದ್ದ 15 ಲಕ್ಷ ಮೌಲ್ಯದ ಶ್ರೀಗಂಧವನ್ನು ಕಳ್ಳತನ ಮಾಡಿದ್ದಾರೆ. ಈ ಸಂಬಂಧ ಬಸವನಬಾಗೇಬಾಡಿ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ರಾಜ್ಯದ ಮತ್ತಷ್ಟು ತಾಜಾ ಸುದ್ದಿಗಾಗಿ ಈ ಲಿಂಕ್‌ ಕ್ಲಿಕ್‌ ಮಾಡಿ

Exit mobile version