ಬೆಂಗಳೂರು: ಒಂದು ಬಾರಿ ಡ್ರಗ್ಸ್ ಜಾಲಕ್ಕೆ ಬಿದ್ದರೆ ಅದರಿಂದ ಹೊರ ಬರಲು ದೊಡ್ಡ ಹೋರಾಟವನ್ನೇ ಮಾಡಬೇಕಾಗುತ್ತದೆ ಎಂಬ ವಿಷಯ ಮತ್ತೆ ಪ್ರೂವ್ ಆಗಿದೆ. ಬೆಂಗಳೂರಿನಲ್ಲಿ ಒಬ್ಬ ಸಿನಿಮಾ ನಟ, ಒಂದು ಕಂಪನಿಯ ಮ್ಯಾನೇಜರ್ ಹಾಗೂ ಒಬ್ಬ ಕಲಾವಿದ ಮಾದಕ ನಶೆಯ ಬಲೆಗೆ ಸಿಲುಕಿ ಈಗ ಅರೆಸ್ಟ್ ಆಗಿದ್ದಾರೆ.
ಬೆಂಗಳೂರಿನ ಎಚ್ ಎಸ್ ಆರ್ ಲೇಔಟ್‌ನಲ್ಲಿ ಈ ಮೂರು ಜನ ಡ್ರಗ್ ಸಂಬಂಧಿತ ಪ್ರಕರಣದಲ್ಲಿ ಸಿಕ್ಕಿಬಿದ್ದಿದ್ದಾರೆ. ಕೇರಳ ಮೂಲದ ಶಿಯಾಝ್, ಮಹಮ್ಮದ್ ಶಾಹಿದ್ ಹಾಗು ಮಂಗಲ್ ತೋಡ್ ಜಿತೀನ್ ಬಂಧಿತ ಆರೋಪಿಗಳು. ಖಚಿತ ಮಾಹಿತಿಯ ಮೇರೆಗೆ ನಡೆಸಿದಾಗ ಆರೋಪಿತರ ಬಳಿ 12.5 ಲಕ್ಷ ರೂ. ಮೌಲ್ಯದ 191 ಗ್ರಾಂ ಎಂಡಿಎಂಎ ಕ್ರಿಷ್ಟಲ್ ಮತ್ತು ಎರಡೂವರೆ ಕೇಜಿ ಗಾಂಜಾ ಸಿಕ್ಕಿದೆ.
ಡ್ರಗ್ಸ್ ಚಟಕ್ಕೆ ಬಿದ್ದಿದ್ದ ಕಿರುತೆರೆ ನಟ
ಇವರೆಲ್ಲರೂ ಕೇರಳ ನಿವಾಸಿಗಳು. ಆದರೆ ಬೆಂಗಳೂರಿನಲ್ಲಿ ಬಂದು ಜೀವನ ಮಾಡಿಕೊಂಡಿದ್ದವರು. ಮಂಗಲ್ ತೋಡ್ ಜಿತೀನ್ ಫ್ರೇಝರ್ ಟೌನ್‌ನ ಕಂಪನಿಯೊಂದರಲ್ಲಿ ಡೆಪ್ಯೂಟಿ ಮ್ಯಾನೇಜರ್ ಆಗಿ ಕೆಲಸ ಮಾಡಿಕೊಂಡಿದ್ದರೆ, ಮಹಮ್ಮದ್ ಶಾಹೀದ್ ಕಲಾವಿದನಾಗಿದ್ದು, ಮೊಬೈಲ್ ಅಂಗಡಿಯಲ್ಲಿ ಒಂದು ಕೆಲಸ ಮಾಡಿಕೊಂಡಿದ್ದ. ಇವರಿಬ್ಬರು ಪೊಲೀಸ್ ಬಲೆಗೆ ಬೀಳಲು ಕಾರಣ ಮಲೆಯಾಳಂ ಕಿರುತೆರೆಯಲ್ಲಿ ಸಹನಟನಾಗಿ ಕೆಲಸ ಮಾಡಿಕೊಂಡಿದ್ದ ಶಿಯಾಶ್ ಎಂಬ ಆರೋಪಿ.
ದುಡಿದ ಹಣ ಖರ್ಚಿಗೆ ಸಾಲುತ್ತಿಲ್ಲ ಎಂದು ಮಹಮ್ಮದ್ ಶಾಹೀದ್ ಹಾಗು ಜಿತಿನ್ ಡ್ರಗ್ಸ್ ದಂಧೆ ಮಾಡುತ್ತಿದ್ದರು. ಹಾಗೆ ಮಲೆಯಾಳಿಗಳೇ ಹೆಚ್ಚಿರುವ ಜಾಗದಲ್ಲಿ ಹೋಗಿ ಮಾರಾಟ ಮಾಡುತ್ತಿದ್ದರು. ಇವರಿಗೆ ಕಾಯಂ ಆಗಿ ಗಿರಾಕಿಯಾಗಿದ್ದವನು ಕಿರುತೆರೆ ನಟ ಶಿಯಾಸ್. ನಮ್ಮೂರವನಲ್ಲವೇ ಎಂಬ ಮಲಯಾಳಿ ಮೋಹದಿಂದ ಆತನಿಗೆ ನಿರಂತರವಾಗಿ ಡ್ರಗ್ಸ್ ಸಪ್ಲೈ ಮಾಡುತ್ತಿದ್ದರು. ಈತ ಮೊದಲಿಗೆ ಪೊಲೀಸರಿಗೆ ಸಿಕ್ಕಿ ಬಿದ್ದ ನಂತರ ಇವನನ್ನು ವಿಚಾರಣೆಗಳಪಡಿಸಿದಾಗ ಡ್ರಗ್ಸ್ ಮಾರಾಟ ಮಾಡುತ್ತಿದ್ದ ಆರೋಪಿಗಳ ಬಂಧನ ಮಾಡಲಾಗಿದೆ.
ಇದನ್ನೂ ಓದಿ | Drugs case | ಇನ್ಮುಂದೆ ಡ್ರಗ್ಸ್ ಪ್ರಕರಣದಲ್ಲಿ ಭಾಗಿಯಾದ್ರೆ ಪ್ರಾಪರ್ಟಿ ಸೀಜ್!