Site icon Vistara News

Earthquake In Karnataka | ರಾಮನಗರದಲ್ಲಿ ಸರಣಿ ಭೂ ಕಂಪನ; ಮನೆಯಿಂದ ಹೊರ ಓಡಿದ ಜನ

Earthquake In Karnataka

ರಾಮನಗರ: ಇಲ್ಲಿನ ಬೆಜ್ಜರಹಳ್ಳಿ ಕಟ್ಟೆ, ಪಾದರಹಳ್ಳಿ, ತಿಮ್ಮಸಂದ್ರ ಭಾಗದಲ್ಲಿ ಭೂಮಿ ಕಂಪಿಸಿದ (Earthquake In Karnataka) ಅನುಭವ ಉಂಟಾಗಿದೆ. ಶನಿವಾರ ಬೆಳಗ್ಗಿನ ಜಾವ 5:30ರ ಸುಮಾರಿಗೆ ಭೂಮಿ ಕಂಪಿಸಿದ್ದು, ಭಾರಿ ಶಬ್ಧದಿಂದಾಗಿ ನಿದ್ದೆ ಮಂಪರಿನಲ್ಲಿ ಇದ್ದ ಜನರು ಗಾಬರಿಗೊಂಡಿದ್ದಾರೆ. ಆತಂಕಕ್ಕೆ ಒಳಗಾದ ಜನರು ಮನೆಯಿಂದ ಓಡಿ ಬಂದಿದ್ದಾರೆ.

ರಾಮನಗರದ ಹಲವು ಭಾಗಗಳಲ್ಲಿ ಮೂರು ಭಾರಿ ಭೂಮಿ ಕಂಪಿಸಿದ ಅನುಭವವಾಗಿದ್ದು, ಯಾವುದೇ ರೀತಿಯ ಹಾನಿ ಸಂಭವಿಸಿಲ್ಲ. ಇತ್ತೀಚೆಗೆ ರಾಜ್ಯದ ವಿವಿಧ ಜಿಲ್ಲೆಗಳಲ್ಲಿಯೂ ಭೂಕಂಪನ ಸಂಭವಿಸುತ್ತಿರುವುದರಿಂದ ಜನರು ಆತಂಕಗೊಂಡಿದ್ದಾರೆ.

ಸ್ಥಳಕ್ಕೆ ಭೂವಿಜ್ಞಾನಿಗಳು ಆಗಮಿಸಿ ಪರಿಶೀಲಿಸುವಂತೆ ಸ್ಥಳೀಯರು ಒತ್ತಾಯಿಸಿದ್ದಾರೆ. ಭೂಕಂಪನ ಬಗ್ಗೆ ಹಾಗೂ ಮುಂಜಾಗ್ರತಾ ಕ್ರಮಗಳ ಬಗ್ಗೆ ತಜ್ಞ ಅಧಿಕಾರಿಗಳು ಜಾಗೃತಿ ಮೂಡಿಸುವ ಕೆಲಸ ಮಾಡಬೇಕು. ಜತೆಗೆ ಸಿಸ್ಮೋ ಮೀಟರ್ ಅಳವಡಿಸಬೇಕು. ಇನ್ನೂ ಹೆಚ್ಚಿನ ಅವಘಡ ಸಂಭವಿಸುವ ಮೊದಲು ಇದಕ್ಕೆ ಕಾರಣ ಹಾಗೂ ಪರಿಹಾರಗಳನ್ನು ಕಂಡುಕೊಳ್ಳಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.

ಎಲ್ಲೆಲ್ಲಿ ಭೂಕಂಪನ?

ವಿಜಯಪುರ, ಬಸವನಬಾಗೇವಾಡಿ, ಸಿಂದಗಿ, ಇಂಡಿ, ಜಮಖಂಡಿ, ಬಾಗಲಕೋಟೆ, ಸೊಲ್ಲಾಪುರ ಸೇರಿದಂತೆ ಮಡಿಕೇರಿ ಮತ್ತು ಸುಳ್ಯ, ಕೊಡಗು, ಚಿಕ್ಕಬಳ್ಳಾಪುರ ಬಳಿಕ ಈಗ ರಾಮನಗರದಲ್ಲಿ ಭೂಕಂಪನದ ಅನುಭವವಾಗಿದೆ.

ಇನ್ನೂ ಭೇಟಿ ನೀಡದ ಭೂವಿಜ್ಞಾನಿಗಳು

ಸ್ಥಳಕ್ಕೆ ಇನ್ನೂ ಭೂ ವಿಜ್ಞಾನಿಗಳು ಭೇಟಿ ನೀಡಿಲ್ಲ. ಅವರು ಭೇಟಿ ನೀಡಿ ಅಧ್ಯಯನ ಮಾಡಿದರೆ ನಿಖರ ಕಾರಣ ತಿಳಿದುಬರಲಿದೆ. ಆದರೆ, ಇನ್ನೂ ಬಾರದೇ ಇರುವುದು ಏಕೆ ಎಂಬ ಕಾರಣ ತಿಳಿಯುತ್ತಿಲ್ಲ ಎಂದು ಸ್ಥಳೀಯರು ಆತಂಕವನ್ನು ಹೊರಹಾಕಿದ್ದಾರೆ.

ಇದನ್ನೂ ಓದಿ | ಚಿಂಚೋಳಿ ತಾಲೂಕಿನಲ್ಲಿ ಭೂಕಂಪನ, ಭಾರಿ ಶಬ್ದ

Exit mobile version