Site icon Vistara News

School Timings: ಶಾಲೆಗಳ ಸಮಯ ಬದಲಾವಣೆ; ಅ.5ಕ್ಕೆ ಸಭೆ ಕರೆದ ಶಿಕ್ಷಣ ಇಲಾಖೆ

Students on the road

ಬೆಂಗಳೂರು: ನಗರದ ಸಂಚಾರ ದಟ್ಟಣೆ ಹಿನ್ನೆಲೆಯಲ್ಲಿ ಶಾಲೆಗಳ ಸಮಯ ಪರಿಷ್ಕರಣೆ ಮಾಡಲು ಹೈಕೋರ್ಟ್‌ ನಿರ್ದೇಶನ ನೀಡಿದ ಹಿನ್ನೆಲೆಯಲ್ಲಿ ಶಾಲಾ ಸಮಯ ಬದಲಾವಣೆ (School Timings) ಬಗ್ಗೆ ಚರ್ಚಿಸಲು ಅ.5ರಂದು ಬೆಳಗ್ಗೆ 11 ಗಂಟೆಗೆ ಶಿಕ್ಷಣ ಇಲಾಖೆ ಮಹತ್ವದ ಸಭೆ ಕರೆದಿದೆ.

ಸಮಗ್ರ ಶಿಕ್ಷಣ ಕರ್ನಾಟಕ ಕಚೇರಿಯಲ್ಲಿ ಸರ್ಕಾರದ ಪ್ರಧಾನ ಕಾರ್ಯದರ್ಶಿಗಳು, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ನೇತೃತ್ವದಲ್ಲಿ ಸಭೆ ನಡೆಯಲಿದೆ. ಸಭೆಯಲ್ಲಿ ಸರ್ಕಾರಿ, ಅನುದಾನಿತ ಮತ್ತು ಖಾಸಗಿ ಶಾಲೆಗಳ ಹಾಗೂ ಪೋಷಕರ ಸಂಘ ಸಂಸ್ಥೆಗಳ ಪ್ರತಿನಿಧಿಗಳು, ಟ್ರಾಫಿಕ್ ಪೊಲೀಸ್ ಹಾಗೂ ಶಾಲಾ ವಾಹನ ಚಾಲಕರ ಸಂಘಟನೆಗಳ ಪ್ರತಿನಿಧಿಗಳು ಭಾಗಿಯಾಗಲು ಸೂಚಿಸಲಾಗಿದೆ.

ಶಾಲಾ ವಾಹನಗಳು, ವಿದ್ಯಾರ್ಥಿಗಳ ಸಂಚಾರದಿಂದ ಬೆಳಗಿನ ವೇಳೆ ಸಂಚಾರ ದಟ್ಟಣೆ ಹೆಚ್ಚಾಗಿರುತ್ತದೆ. ಇದರಿಂದ ಸಮಯಕ್ಕೆ ಸರಿಯಾಗಿ ಶಾಲೆಗಳಿಗೆ ಹೋಗಲು ಮಕ್ಕಳಿಗೂ ತೊಂದರೆಯಾಗುತ್ತದೆ. ಹೀಗಾಗಿ ಶಾಲಾ ಅವಧಿ ಪರಿಷ್ಕರಣೆ ಮಾಡಲು ಹೈಕೋರ್ಟ್ ಸರ್ಕಾರಕ್ಕೆ ಸೂಚನೆ ನೀಡಿತ್ತು. ಶಾಲೆಯ ಆಡಳಿತ ಮಂಡಳಿ, ಪೋಷಕರು ಸೇರಿ ಸಂಬಂಧ ಪಟ್ಟವರ ಜತೆ ಚರ್ಚೆ ಮಾಡಿ ಸಯ ಬದಲಾವಣೆ ಬಗ್ಗೆ ನಿರ್ಧರಿಸಲು ಕೋರ್ಟ್‌ ಸೂಚಿಸಿತ್ತು. ಹೀಗಾಗಿ ಶಿಕ್ಷಣ ಇಲಾಖೆ ಸಭೆ ಏರ್ಪಡಿಸಿದೆ.

ಇದನ್ನೂ ಓದಿ | Caste Census Report : ಮೋದಿ ಅಸಮಾಧಾನದ ಮಧ್ಯೆ ರಾಜ್ಯದಲ್ಲಿ ಮಂಡನೆಯಾಗುತ್ತಾ ಜಾತಿಗಣತಿ ವರದಿ?

ಯಾವ ಸಮಯ ನಿಗದಿಯಾಗಲಿದೆ?

ಸದ್ಯ ನಗರದ ಬಹುತೇಕ ಶಾಲೆಗಳ ಸಮಯ ಬೆಳಗ್ಗೆ 9.30 ರಿಂದ ಸಂಜೆ 4.30ಕ್ಕೆ ಇದೆ. ಇದನ್ನು ಅರ್ಧ ಗಂಟೆ ಅಥವಾ ಒಂದು ಗಂಟೆ ಮುಂಚೆ ಪ್ರಾರಂಭ ಮಾಡುವ ಪ್ರಸ್ತಾವನೆ ಶಿಕ್ಷಣ ಇಲಾಖೆ ಮುಂದೆ ಇದೆ. ಬೆಳಗ್ಗೆ 8.30 ರಿಂದ 3.30 ಅಥವಾ ಬೆಳಗ್ಗೆ 9 ರಿಂದ ಸಂಜೆ 3.30ವರೆಗೆ ಶಾಲೆ ತೆರೆಯೋ ಪ್ರಸ್ತಾಪ ಇದ್ದು, ಯಾವ ಸಮಯ ನಿಗದಿ ಮಾಡಬೇಕು ಎಂಬುವುದರ ಬಗ್ಗೆ ಸಭೆಯಲ್ಲಿ ತೀರ್ಮಾನವಾಗಲಿದೆ.

Exit mobile version