ಬೆಂಗಳೂರು: ಸದ್ಯ 8ನೇ ತರಗತಿವರೆಗೆ ನೀಡಲಾಗುತ್ತಿರುವ ಕೋಳಿ ಮೊಟ್ಟೆಯನ್ನು ಇನ್ನುಮುಂದೆ 9-10ನೇ ತರಗತಿ ಮಕ್ಕಳಿಗೂ ನೀಡಲು ರಾಜ್ಯ ಸರ್ಕಾರ ಚಿಂತನೆ ನಡೆಸಿದೆ. ಈ ಕುರಿತು ಶಿಕ್ಷಣ ಸಚಿವ ಮಧು ಬಂಗಾರಪ್ಪ ಪ್ರತಿಕ್ರಿಯೆ ನೀಡಿದ್ದಾರೆ.
ಈ ಹಿಂದೆ ವಾರಕ್ಕೆ ಎರಡು ಬಾರಿ ನೀಡುತ್ತಿದ್ದ ಮೊಟ್ಟೆಯನ್ನು ಈಗಿನ ಸರ್ಕಾರ ವಾರಕ್ಕೆ ಒಂದರಂತೆ ನೀಡುತ್ತಿರುವುದರ ಬಗ್ಗೆ ಮಾತನಾಡಿದ್ದಾರೆ. ಮುಂಚೆ ಇದ್ದ ಸರ್ಕಾರ ವರ್ಷಕ್ಕೆ 42 ಬಾರಿ ಮೊಟ್ಟೆ ಕೊಡಬೇಕು ಎಂದು ನೀಡುತ್ತಿತ್ತು. ಶೈಕ್ಷಣಿಕ ವರ್ಷ ಮುಗಿಯಲು 6 ತಿಂಗಳು ಮಾತ್ರ ಬಾಕಿಯಿತ್ತು. ಕೆಲ ಶಾಲೆಗಳಲ್ಲಿ ಪ್ರಾರಂಭದಲ್ಲಿ ಒಂದೆ ಮೊಟ್ಟೆ ಕೊಟ್ರು. ಆಮೇಲೆ ಹೆಚ್ಚಾಗಿದ್ದ ಕಾರಣ ಎರಡು ಮೊಟ್ಟೆ ಕೊಟ್ಟರು. ಆದರೆ ಒಂದು ಮೊಟ್ಟೆ ಕೊಡಬೇಕು ಎನ್ನುವುದೇ ಆದೇಶ. ಈ ಬಾರಿ ಅದು ಮುಂದುವರೆಯುತ್ತದೆ. ನಾನು ಆದೇಶ ಹೊರಡಿಸಿದ್ದೇನೆ. ಒಂದೊಂದು ಮೊಟ್ಟೆ ಮೊದ್ಲು ಕೊಟ್ಟು ಬಿಡಿ ಎಂದು ಆದೇಶ ಹೊರಡಿಸಿದ್ದೇನೆ.
ಹಿಂದಿನ ಸರ್ಕಾರದವರಿಗೆ ಟೈಮ್ ಕಡಿಮೆಯಿತ್ತು, ಅದಕ್ಕೆ ಎರಡು ಮೊಟ್ಟೆ ಕೊಟ್ರು. ಆದರೆ ನಿಯಮ ಇರೋದು ಒಂದು ಮೊಟ್ಟೆ ಕೊಡವುದು. ಎರಡು ಮೊಟ್ಟೆ ಕೊಡುವುದು ಒಳ್ಳೆಯದು ಎಂದು ನಾನು ಮನವಿ ಮಾಡಿದ್ದೇನೆ. ಎಂಟನೇ ತರಗತಿಯವರೆಗೆ ಮಾತ್ರ ಮೊಟ್ಟೆ ಕೊಡುವ ವ್ಯವಸ್ಥೆಯಿದೆ. ಅದನ್ನು 9-10 ತರಗತಿಗೂ ಕೊಡೋಣ ಎಂದು ಚರ್ಚೆ ಮಾಡಿದ್ದೇವೆ. ಸಿಎಂಗೂ ಈ ಬಗ್ಗೆ ಮನವಿ ಮಾಡಿದ್ದೇವೆ ಎಂದರು.
ಶಾಲೆಗಳಲ್ಲಿ ಕ್ಷೀರಭಾಗ್ಯದ ಕೊರತೆ ವಿಚಾರಕ್ಕೆ ಪ್ರತಿಕ್ರಿಯಿಸಿ, ದೂರು ಬಂದಿದೆ, ವರದಿ ತರಿಸಿ ಮಾಹಿತಿ ಕೊಡ್ತೇನೆ. ಶಾಲೆ ಆರಂಭ ಆಗಿದ್ದು, ಸಚಿವನಾಗಿದ್ದು ಎಲ್ಲವೂ ಒಟ್ಟಿಗೆ ಆಯಿತು. ಜೊತೆಗೆ ಕೌನ್ಸಿಲಿಂಗ್ ಮಾಡ್ತಾ ಇದ್ದೇವೆ. ಹಿಂದಿನ ಸರ್ಕಾರದವರು ಮಾಡಿದ್ರೆ ನಮಗೆ ಒತ್ತಡ ಆಗುತ್ತಿರಲಿಲ್ಲ. ಹಾಲಿನ ಸಮಸ್ಯೆ ಒಂದು ದಿನದಲ್ಲಿ ವರದಿ ತರಿಸುತ್ತೇನೆ ಎಂದರು.
ಪಠ್ಯಪುಸ್ತಕ ಪರಿಷ್ಕರಣೆ ಕುರಿತು ಪ್ರತಿಕ್ರಿಯಿಸಿ, ಪಠ್ಯಪುಸ್ತಕ ಪರಿಷ್ಕರಣೆ 15 ಪೇಜ್ ಮಾಡ್ತೇವೆ ಎಂದು ಭಾವಿಸಿದ್ದೇವೆ. 20 ಲಕ್ಷ ರೂಪಾಯಿ ಬಜೆಟ್ ಆಗಲಿದೆ. ಕ್ಯಾಬಿನೆಟ್ ನಲ್ಲಿ ಚರ್ಚೆ ಮಾಡಿದ್ದೇವೆ. ಹತ್ತು ದಿನಗಳಲ್ಲಿ ಪುಸ್ತಕ ಹೋಗಬೇಕು. ಒಂದು ಸಮಿತಿ ಮಾಡಿ ಕೊಡಿ ಎಂದು ಸಿಎಂ ಹೇಳಿದ್ದಾರೆ. ಸಮಿತಿ ಮಾಡಿ ಬೇರೆ ನಿಯಮ ಜಾರಿ ಮಾಡಬೇಕು ಎಂದುಕೊಂಡಿದ್ದೇವೆ. 100 ಅಂಕಗಳಿಗೆ ಪರೀಕ್ಷೆ ಬರೆಯುತ್ತಾರೆ, ಪ್ರಾಕ್ಟಿಕಲ್ ಕೊಡಬೇಕು ಎಂದುಕೊಂಡಿದ್ದೇವೆ. ಮಕ್ಕಳಿಗೆ ಪರೀಕ್ಷೆ ಬರೆಸೋದು ಫೇಲ್ ಮಾಡಲು ಅಲ್ಲ, ಅವರ ಲೆವಲ್ ಚೆಕ್ ಮಾಡಬೇಕು, ಬೆಳೆಯುವ ಅವಕಾಶ ಕೊಡಬೇಕು ಎಂದು. 12ನೇ ಕ್ಲಾಸ್‌ವರೆಗೂ ಶಿಕ್ಷಣ ನೀತಿ ಸಹಕಾರ ಆಗುವಂತೆ ಮಾಡ್ತೇವೆ ಎಂದು ಹೇಳಿದರು.
ಪಠ್ಯಪುಸ್ತಕಕ್ಕೆ ಸಮಿತಿ ರಚನೆ ಆಗಿದ್ದಂತೆ, ಮಕ್ಕಳು ಬ್ಯಾಗ್ ಹೊರೆ ಕಡಿಮೆ ಮಾಡುವ ಜವಾಬ್ದಾರಿ ತೆಗೆದುಕೊಳ್ಳುತ್ತೇವೆ. ತಜ್ಞರ ಸಮಿತಿ ಜತೆ ಮಾತಾಡಿ ತೀರ್ಮಾನ ಮಾಡ್ತೇವೆ. ರಾಷ್ಟ್ರೀಯ ಶಿಕ್ಷಣ ನೀತಿಯನ್ನು ನಾವು ವಿರೋಧ ಮಾಡ್ತಾ ಬಂದಿದ್ದೇವೆ. ಮಕ್ಕಳಿಗೆ ಅನುಕೂಲ ಆಗುವಂತೆ ಎಸ್‌ಇಪಿ ಮಾಡೋಣ ಎಂದುಕೊಂಡಿದ್ದೇವೆ. ಈ ಕೆಲಸವನ್ನು ತಜ್ಞರಿಗೆ ನಾವು ಬಿಡುತ್ತೇವೆ ಎಂದಿದ್ದಾರೆ.
ಇದನ್ನೂ ಓದಿ: Textbook Revision: ಪಠ್ಯ ಪರಿಷ್ಕರಣೆಗೆ ಲಾಬಿ; ದೇವನೂರ ಮಹಾದೇವ ಪಾಠ ಸೇರಿಸಲು ಎಸ್‌ಎಫ್‌ಐ ಪಟ್ಟು