ಮಂಡ್ಯ: ಮಳೆಯ ಅಬ್ಬರಕ್ಕೆ ಶ್ರೀರಂಗಪಟ್ಟಣದಲ್ಲಿ ಐತಿಹಾಸಿಕ ಬುರುಜು ಶುಕ್ರವಾರ ರಾತ್ರಿ ಕುಸಿದಿದೆ. ಈ ಕಾವಲು ಗೋಪುರ (ಬುರುಜು) ಸರಿಯಾದ ಸಂರಕ್ಷಣೆ ಇಲ್ಲದೆ ಶಿಥಿಲಾವಸ್ಥೆಗೆ ತಲುಪಿತ್ತು. ಶ್ರೀರಂಗಪಟ್ಟಣದ ಕೋಟೆಯೊಂದರ ಬಳಿ ಈ ಬುರುಜು ನಿರ್ಮಿಸಲಾಗಿತ್ತು. ಕೊಟೆಗಿಂತಲೂ ಎತ್ತರವಾಗಿದ್ದ ಈ ಬುರುಜು ಈಗ ಮಳೆಯ ರಭಸಕ್ಕೆ ಕುಸಿದುಬಿದ್ದಿದೆ.
ಈ ಹಿಂದೆ ರಾಜರ ಕಾಲದಲ್ಲಿ ಬರುಜುಗಳ ಮೇಲೆ ನಿಂತು ಸೈನಿಕರು ಕಾವಲು ಕಾಯುತ್ತಿದ್ದರು. ಅಲ್ಲದೆ, ಇದು ಕೋಟೆ ಒಳ ಭಾಗಕ್ಕೆ ಹೊಂದಿಕೊಳ್ಳುವ ಹಾಗೆ ನಿರ್ಮಿಸಲಾಗಿತ್ತು. ಐತಿಹಾಸಿಕವಾಗಿ ಪ್ರಾಮುಖ್ಯತೆ ಹೊಂದಿರುವ ಬುರುಜನ್ನು ಸರಿಯಾಗಿ ನಿರ್ವಹಣೆ ಮಾಡಿರಲಿಲ್ಲ. ಆದ ಕಾರಣ ಇದರ ಮೇಲೆ ಗಿಡಗಂಟಿಗಳು ಬೆಳೆದಿದ್ದವು. ಮಳೆ ಬಿದ್ದಿದ್ದರಿಂದ ಮಣ್ಣು ಸಡಿಲವಾಗಿದ್ದು, ಈ ಬುರುಜುವಿನ ಒಂದು ಭಾಗ ಕುಸಿದು ಬಿದ್ದಿದೆ.
ಇದನ್ನೂ ಓದಿ: ರಾಷ್ಟ್ರಕವಿ ಕುವೆಂಪು ಮತ್ತು ನಾಡಗೀತೆಗೆ ಅವಮಾನ ಖಂಡಿಸಿ ಮಂಡ್ಯದಲ್ಲಿ ಪ್ರತಿಭಟನೆ