Site icon Vistara News

Suraj Revanna: ಸೂರಜ್ ರೇವಣ್ಣ ವಿರುದ್ಧ ದಾಖಲಾಗಿದ್ದ ಚುನಾವಣಾ ತಕರಾರು ಅರ್ಜಿ ವಜಾ

Suraj Revanna

ಬೆಂಗಳೂರು: ಹಾಸನ ವಿಧಾನ ಪರಿಷತ್‌ ಸದಸ್ಯ ಸೂರಜ್ ರೇವಣ್ಣ (Suraj Revanna) ಅವರ ವಿರುದ್ಧ ದಾಖಲಾಗಿದ್ದ ಚುನಾವಣಾ ತಕರಾರು ಅರ್ಜಿಯನ್ನು ಹೈಕೋರ್ಟ್‌ ವಜಾಗೊಳಿಸಿದೆ. ದೇವರಾಜೇಗೌಡ ಮತ್ತು ಇತರರು ಸಲ್ಲಿಸಿದ್ದ ಚುನಾವಣಾ ತಕರಾರು ಅರ್ಜಿಯನ್ನು ಉಚ್ಚ ನ್ಯಾಯಾಲಯದ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರ ಪೀಠ ಸುದೀರ್ಘ ವಿಚಾರಣೆ ನಡೆಸಿ ಮೊಕದ್ದಮೆಯನ್ನು ಬುಧವಾರ ವಜಾಗೊಳಿಸಿದೆ.

ಸೂರಜ್ ರೇವಣ್ಣ ಅವರು ನಾಮಪತ್ರ ಸಲ್ಲಿಸುವಾಗ ಸುಳ್ಳು ದಾಖಲೆಯನ್ನು ನೀಡಿದ್ದು, ಇವರ ನಾಮಪತ್ರವನ್ನು ತಿರಸ್ಕರಿಸಬೇಕು ಎಂದು ವಕೀಲ ದೇವರಾಜೇಗೌಡ ಮತ್ತು ಇತರರು ಹೈಕೋರ್ಟ್‌ಗೆ ಚುನಾವಣಾ ತಕರಾರು ಅರ್ಜಿ ಸಲ್ಲಿಸಿದ್ದರು. ಚುನಾವಣಾ ಅಧಿಕಾರಿಗಳ ಬಳಿ ನಾಮಪತ್ರದ ನಕಲನ್ನು ತೆಗೆದುಕೊಂಡು ಅದನ್ನು ಪರೀಕ್ಷಿಸಲಾಗಿದೆ. ಅದರಲ್ಲಿ ಸುಳ್ಳು ಅರ್ಜಿಯನ್ನು ನೀಡಿರುವುದು ಬಹಿರಂಗವಾಗಿದೆ. ಅವರು ನಾಮಪತ್ರ ಸಲ್ಲಿಸುವಾಗ ಗಂಭೀರ ವಿಷಯಗಳನ್ನು ಮುಚ್ಚಿಟ್ಟಿದ್ದಾರೆ. ಮದುವೆಯ ಬಗ್ಗೆ ಸತ್ಯವನ್ನು ಮುಚ್ಚಿಟ್ಟಿದ್ದಾರೆ ಎಂದು ದೇವರಾಜೇಗೌಡ ಆರೋಪಿಸಿದ್ದರು.

ಮದುವೆ ವಿಷಯವಾಗಿ ಯಾವುದೇ ಸಂಬಂಧವಿಲ್ಲ ಎಂದು ಸೂರಜ್ ರೇವಣ್ಣ ಅವರು ಅರ್ಜಿಯಲ್ಲಿ ನಮೂದಿಸಿದ್ದಾರೆ. ಒಂದು ವೇಳೆ ಮದುವೆ ಆಗಿದ್ದರೆ ಆಗಿದೆ ಎಂದು, ಆಗಿಲ್ಲವಾಗಿದ್ದರೆ ಆಗಿಲ್ಲ ಎಂದು ಬರೆಯಬೇಕಿತ್ತು. ಅವರು ಮದುವೆ ಆಗಿರುವುದು ಎಲ್ಲರಿಗೂ ಗೊತ್ತಿರುವ ಸಂಗತಿ. ಪತ್ನಿಯ ಚರ, ಸ್ಥಿರ ಆಸ್ತಿಗಳ ಬಗ್ಗೆ ದಾಖಲಿಸಬೇಕಿತ್ತು. ಹೀಗಾಗಿ ಸೂರಜ್ ರೇವಣ್ಣ ಅವರ ನಾಮಪತ್ರ ತಿರಸ್ಕಾರ ಮಾಡಬೇಕು ಎಂದು ಒತ್ತಾಯಿಸಿದ್ದರು. ಆದರೆ, ಇದೀಗ ಈ ಚುನಾವಣಾ ತಕಾರರು ಅರ್ಜಿಯನ್ನು ಹೈಕೋರ್ಟ್‌ ವಜಾಗೊಳಿಸಿದೆ.

ಇದನ್ನೂ ಓದಿ | Jagdeep Dhankhar: 20 ವರ್ಷಗಳಿಂದ ಅವಮಾನ ಎದುರಿಸುತ್ತಿದ್ದೇನೆ; ನೋವು ತೋಡಿಕೊಂಡ ಮೋದಿ

ಆಸ್ತಿಗಾಗಿ ಕಿಡ್ನ್ಯಾಪ್‌ ಆರೋಪ; ಭವಾನಿ ರೇವಣ್ಣ, ಪ್ರಜ್ವಲ್‌ ರೇವಣ್ಣ ವಿರುದ್ಧ ದೂರು

Kartik Prajwal revanna

ಬೆಂಗಳೂರು/ ಹಾಸನ: ದೇವೇಗೌಡರ ಫ್ಯಾಮಿಲಿ ಅಂದರೆ ನ್ಯಾಯ ಮತ್ತು ನಿಯತ್ತಿಗೆ ದೊಡ್ಡ ಹೆಸರು. ಆದರೆ, ಇದೀಗ ಅದೇ ಕುಟುಂಬದ ಎಚ್‌.ಡಿ. ರೇವಣ್ಣ‌ (HD Revanna), ಅವರ ಪತ್ನಿ ಭವಾನಿ ರೇವಣ್ಣ (Bhavani Revanna) ಹಾಗೂ ಸಂಸದ ಪ್ರಜ್ವಲ್‌ ರೇವಣ್ಣ (MP Prajwal Revanna) ಅವರ ಮೇಲೆ ಗಂಭೀರ ಆರೋಪವೊಂದು ಕೇಳಿಬಂದಿದೆ. ಅದೇನೆಂದರೆ, 14 ವರ್ಷಗಳ ಕಾಲ ಪ್ರಜ್ವಲ್‌ ರೇವಣ್ಣ ಅವರ ಜತೆಗೆ ಕಾರು ಚಾಲಕರಾಗಿದ್ದ ಕಾರ್ತಿಕ್‌ (Car Driver Karthik) ಎಂಬವರಿಗೆ ಸೇರಿದ 13 ಎಕರೆ ಜಾಗವನ್ನು ಈ ಕುಟುಂಬ ನುಂಗಿ ಹಾಕಿದೆ. ಪೊಲೀಸರಿಗೆ ದೂರು ನೀಡಿದರೂ ಸ್ಪಂದಿಸ‌ದಂತೆ ಕುಟುಂಬ ಒತ್ತಡ ಹಾಕುತ್ತಿದೆ.

ಕಾರ್ತಿಕ್‌ ಮತ್ತು ಅವರ ಪತ್ನಿಯನ್ನು ಕಿಡ್ನಾಪ್‌ ಮಾಡಿ ಕೋಟ್ಯಾಂತರ ರೂಪಾಯಿ ಮೌಲ್ಯದ ಆಸ್ತಿ ಕಬಳಿಕೆ ಮಾಡಿದ ಗಂಭೀರ ಆರೋಪ ಇದಾಗಿದೆ. ಹೊಳೆನರಸೀಪುರ ತಾಲ್ಲೂಕಿನ ಕಡವಿನಕೋಟೆ ಗ್ರಾಮದ ನಿವಾಸಿ ಈ ಕಾರ್ತಿಕ್ ಕಳೆದ 14 ವರ್ಷಗಳಿಂದ ಸಂಸದ ಪ್ರಜ್ವಲ್ ರೇವಣ್ಣರ ಕಾರಿನ ಚಾಲಕನಾಗಿ ಕೆಲ್ಸ ಮಾಡ್ತಿದ್ದರಂತೆ.

ಕಾರ್ತಿಕ್‌ ಅವರು ಫೌಲ್ಟ್ರಿ ಫಾರಂ, ಕೃಷಿ ಜಮೀನು ಸೇರಿದಂತೆ ಒಳ್ಳೆಯ ಆದಾಯ ಹೊಂದಿದ್ದಾರೆ. ಕಾರ್ತಿಕ್‌ ಅವರು ಕಳೆದ ವರ್ಷ 13 ಎಕರೆ ಕೃಷಿ ಭೂಮಿ ಖರೀದಿಸಿದ್ದರು. ಆ ಭೂಮಿಯಲ್ಲಿ ಪೂಜೆ ಏರ್ಪಡಿಸಿದಾಗ ಸ್ವತಃ ಭವಾನಿ ರೇವಣ್ಣ‌ ಮತ್ತು ಪ್ರಜ್ವಲ್‌ ರೇವಣ್ಣ ಅವರು ಆಗಮಿಸಿದ್ದರು. ಈ ವೇಳೆ ಕಾರ್ತಿಕ್ ಅವರ ಕೃಷಿ ಭೂಮಿಯನ್ನು ಕಂಡು ಅವಕ್ಕಾದ ಅವರಿಬ್ಬರೂ ತಮ್ಮ ಜತೆಗೆ ಕೆಲಸಕ್ಕಿದ್ದವನು ಇಷ್ಟು ಜಮೀನು ಖರೀದಿ ಮಾಡಿದ್ದರ ಬಗ್ಗೆ ಅಸೂಯೆಪಟ್ಟಿದ್ದರು ಎನ್ನಲಾಗಿದೆ.

ಕಾರ್ತಿಕ್‌

ಇದನ್ನೂ ಓದಿ | COVID Subvariant JN1: ಆರೋಗ್ಯ ಕಾರ್ಯಕರ್ತರಿಗೆ ಮಾಸ್ಕ್‌ ಕಡ್ಡಾಯ; ಮತ್ತೇನಿದೆ ಕೊರೊನಾ ನಿರ್ಬಂಧ?

ಅದಾದ ಬಳಿಕ ಇಷ್ಟು ಜಾಗವನ್ನು ನೀನು ಖರೀದಿ ಮಾಡಿದ್ದು ನಮ್ಮ ಹಣದಿಂದಲೇ. ಹಾಗಾಗಿ ಅದನ್ನು ನಮಗೆ ಬರೆದುಕೊಟ್ಬಿಡು ಅನ್ನೋ ಬೇಡಿಕೆ ಇಟ್ಟಿದ್ದರಂತೆ. ಆದರೆ, ಅದಕ್ಕೆ ಕಾರ್ತಿಕ್ ವಿರೋಧ ವ್ಯಕ್ತಪಡಿಸಿದ್ದರು. ಹೀಗಾಗಿ ಹೇಗಾದರೂ ಮಾಡಿ ಕೋಟಿ ಕೋಟಿ ಬೆಲೆಯ ಆಸ್ತಿ ಕಬಳಿಕೆ ಮಾಡ್ಬೇಕು ಅಂತ ಕಿರುಕುಳ ನೀಡೋದಕ್ಕೆ ಶುರು ಮಾಡಿದರು ಎಂದು ಕಾರ್ತಿಕ್‌ ದೂರಿದ್ದಾರೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version