Site icon Vistara News

Election Results 2024: ಟಾರ್ಗೆಟ್ 20 ರೀಚ್ ಆಗಲು ವಿಫಲ; ಎಐಸಿಸಿಯಿಂದ ಪರಾಮರ್ಶೆ ಸಮಿತಿ, ಸಚಿವರ ಮೇಲೆ ತೂಗುಗತ್ತಿ!

Election Results 2024

ಬೆಂಗಳೂರು: ರಾಜ್ಯದ ಲೋಕಸಭಾ ಚುನಾವಣೆಯಲ್ಲಿ (Lok sabha Election 2024) ಟಾರ್ಗೆಟ್ 20 ರೀಚ್ ಆಗದೆ ಪಕ್ಷಕ್ಕೆ ಹಿನ್ನಡೆ ಆಗಿರುವುದನ್ನು ಕಾಂಗ್ರೆಸ್‌ ಹೈಕಮಾಂಡ್ ಗಂಭೀರವಾಗಿ ತೆಗೆದುಕೊಂಡಿದೆ. ಗ್ಯಾರಂಟಿ ಕೊಟ್ಟರೂ ನಿರೀಕ್ಷಿತ ಗುರಿ ಮುಟ್ಟಲು ವಿಫಲವಾದ ಹಿನ್ನೆಲೆಯಲ್ಲಿ ಪರಾಮರ್ಶೆ ಸಮಿತಿ ರಚನೆಗೆ ಎಐಸಿಸಿ ನಿರ್ಧಾರ ಮಾಡಿದೆ. ಸಮಿತಿಯು ಎಐಸಿಸಿ ಹಾಗೂ ರಾಜ್ಯದ ಹಿರಿಯ ನಾಯಕರನ್ನು ಒಳಗೊಳ್ಳಲಿದ್ದು, ಪ್ರತಿ ವಿಧಾನಸಭಾವಾರು ಮತ ಪ್ರಮಾಣ ಕಲೆ ಹಾಕಲು ಪ್ಲ್ಯಾನ್ ಮಾಡಲಾಗಿದೆ. ಚುನಾವಣೆಯಲ್ಲಿ (Election Results 2024) ಯಾಕೆ ಲೀಡ್ ಕಡಿಮೆ ಆಯಿತು ಎಂಬ ಮಾಹಿತಿ ಸಂಗ್ರಹಿಸಿ ಎಐಸಿಸಿಗೆ ಸಮಿತಿಯು ವರದಿ ಸಲ್ಲಿಕೆ ಮಾಡಲಿದೆ.

ಎಐಸಿಸಿಯಿಂದ ಪರಾಮರ್ಶೆ ಸಮಿತಿ ರಚನೆ‌ ಬೆನ್ನಲ್ಲೇ ಲೀಡ್ ಕಡಿಮೆ ಆಗಿರುವ ಕ್ಷೇತ್ರಗಳ ಸಚಿವರಿಗೆ ಢವ ಢವ ಶುರುವಾಗಿದೆ. ಪರಾಮರ್ಶೆ ಬಳಿಕ ಸಚಿವ ಸ್ಥಾನಕ್ಕೆ ಕುತ್ತು ಬರುವ ಆತಂಕ ಎದುರಾಗಿದೆ. ಹೀಗಾಗಿ ಆತಂಕದಿಂದ ಕೆಲ ಸಚಿವರು ಒಂದಷ್ಟು ಸೇಫ್ ಗೇಮ್ ಪ್ಲ್ಯಾನ್ ಮಾಡಿದ್ದಾರೆ.

ಇದನ್ನೂ ಓದಿ | Congress Guarantee: ಗ್ಯಾರಂಟಿ ನಿಲ್ಲಿಸುವ ಮಾತು ಬೇಡ: ಕೈ ನಾಯಕರಿಗೆ ಎಚ್.ಎಂ ರೇವಣ್ಣ ಎಚ್ಚರಿಕೆ

ಸಚಿವರ ಸೇಫ್ ಗೇಮ್ ಪ್ಲ್ಯಾನ್ ಏನು?

ಚುನಾವಣೆಯಲ್ಲಿ ಪಕ್ಷ ಯಾಕೆ ಸೋತಿದೆ ಎಂಬ ಬಗ್ಗೆ ವಿವರಣೆ ನೀಡಲು ಸಚಿವರು ಕೆಲ ಅಂಶಗಳನ್ನು ಹೈಕಮಾಂಡ್‌ ಮುಂದಿಡಲು ಚಿಂತನೆ ನಡೆಸಿದ್ದಾರೆ. ಈ ಮೂಲಕ ಹೈ ಕಮಾಂಡ್‌ ಕೋಪಕ್ಕೆ ಗುರಿಯಾಗದೇ ಸೇಫ್‌ ಆಗಲು ಪ್ಲ್ಯಾನ್‌ ಮಾಡಿದ್ದಾರೆ. ಅವುಗಳಲ್ಲಿ ಪ್ರಮುಖವಾದವುಗಳೆಂದರೆ…

ಯಾವ ಸಚಿವರ ಮೇಲೆ ಪರಾಮರ್ಶೆ ತೂಗುಗತ್ತಿ

ಬೆಂಗಳೂರು ಸೆಂಟ್ರಲ್ ಕ್ಷೇತ್ರ

ಸಚಿವ ದಿನೇಶ್ ಗುಂಡೂರಾವ್ – ಗಾಂಧಿನಗರ ಕ್ಷೇತ್ರ
ಪಿ.ಸಿ ಮೋಹನ್, ಬಿಜೆಪಿ – 74,447
ಮನ್ಸೂರ್ ಖಾನ್, ಕಾಂಗ್ರೆಸ್ – 51,123
ಬಿಜೆಪಿ ಲೀಡ್ – 23,324

ಕೋಲಾರ ಲೋಕಸಭಾ ಕ್ಷೇತ್ರ

ಸಚಿವ ಎಂಸಿ ಸುಧಾಕರ್ – ಚಿಂತಾಮಣಿ ಕ್ಷೇತ್ರ
ಕೆ.ವಿ. ಗೌತಮ್, ಕಾಂಗ್ರೆಸ್ – 82,206
ಮಲ್ಲೇಶ್ ಬಾಬು, ಜೆಡಿಎಸ್ – 89,456
ಜೆಡಿಎಸ್ ಲೀಡ್ – 7,250

ಶಿವಮೊಗ್ಗ ಲೋಕಸಭಾ ಕ್ಷೇತ್ರ

ಸಚಿವ ಮಧು ಬಂಗಾರಪ್ಪ – ಸೊರಬ ಕ್ಷೇತ್ರ
ಗೀತಾ ಶಿವರಾಜ್ ಕುಮಾರ್ – 70233
ಬಿವೈ ರಾಘವೇಂದ್ರ – 88170
ಬಿಜೆಪಿ ಲೀಡ್ – 17937

ಬೆಂಗಳೂರು ದಕ್ಷಿ‌ಣ ಲೋಕಸಭಾ ಕ್ಷೇತ್ರ

ಸಚಿವ ರಾಮಲಿಂಗಾರೆಡ್ಡಿ – ಬಿಟಿಎಂ ಲೇಔಟ್ ಕ್ಷೇತ್ರ
ತೇಜಸ್ವಿ ಸೂರ್ಯ, ಬಿಜೆಪಿ – 72,541
ಸೌಮ್ಯ ರೆಡ್ಡಿ, ಕಾಂಗ್ರೆಸ್ – 63,192
ಬಿಜೆಪಿ ಲೀಡ್ -‌ 9,349

ಧಾರವಾಡ ಲೋಕಸಭಾ ಕ್ಷೇತ್ರ

ಸಚಿವ ಸಂತೋಷ್ ಲಾಡ್ – ಕಲಘಟಗಿ ಕ್ಷೇತ್ರ
ಪ್ರಹ್ಲಾದ್ ಜೋಶಿ, ಬಿಜೆಪಿ – 96,402
ವಿನೋದ್ ಅಸೂಟಿ, ಕಾಂಗ್ರೆಸ್ – 63,665
ಬಿಜೆಪಿ ಲೀಡ್ – 32,737

ತುಮಕೂರು ಲೋಕಸಭಾ ಕ್ಷೇತ್ರ

ಸಚಿವ ಡಾ.‌ಜಿ ಪರಮೇಶ್ವರ್ – ಕೊರಟಗೆರೆ ಕ್ಷೇತ್ರ
ವಿ. ಸೋಮಣ್ಣ, ಬಿಜೆಪಿ – 93,446
ಮುದ್ದಹನುಮೇಗೌಡ – 67,905
ಬಿಜೆಪಿ ಲೀಡ್ – 25,541

ಸಚಿವ ಕೆ.ಎನ್ ರಾಜಣ್ಣ – ಮಧುಗಿರಿ ಕ್ಷೇತ್ರ

ವಿ. ಸೋಮಣ್ಣ, ಬಿಜೆಪಿ -77,494
ಮುದ್ದಹನುಮೇಗೌಡ – 66,692
ಬಿಜೆಪಿ ಲೀಡ್ – 12,802

ಮಂಡ್ಯ ಲೋಕಸಭಾ ಕ್ಷೇತ್ರ

ಸಚಿವ ಚೆಲುವರಾಯಸ್ವಾಮಿ – ನಾಗಮಂಗಲ ಕ್ಷೇತ್ರ
ಕುಮಾರಸ್ವಾಮಿ, ಜೆಡಿಎಸ್ -1,13,087
ಸ್ಟಾರ್ ಚಂದ್ರು, ಕಾಂಗ್ರೆಸ್ – 66,576
ಜೆಡಿಎಸ್ ಲೀಡ್ – 46,511

ಉತ್ತರ ಕನ್ನಡ ಲೋಕಸಭಾ ಕ್ಷೇತ್ರ

ಸಚಿವ ಮಂಕಾಳ ವೈದ್ಯ – ಭಟ್ಕಳ ಕ್ಷೇತ್ರ
ವಿಶ್ವೇಶ್ವರ ಹೆಗಡೆ ಕಾಗೇರಿ – 1,00,288
ಅಂಜಲಿ ನಿಂಬಾಳ್ಕರ್, ಕಾಂಗ್ರೆಸ್ – 67,885
ಬಿಜೆಪಿ ಲೀಡ್ – 32,343

ಬೆಳಗಾವಿ ಲೋಕಸಭಾ ಕ್ಷೇತ್ರ

ಸಚಿವೆ ಲಕ್ಷ್ಮೀ ಹೆಬ್ಬಾಳಕರ್ – ಬೆಳಗಾವಿ ಗ್ರಾಮೀಣ ಕ್ಷೇತ್ರ
ಜಗದೀಶ ಶೆಟ್ಟರ್ – 1,24,970
ಮೃಣಾಲ್ ಹೆಬ್ಬಾಳ್ಕರ್‌ – 74,441
ಬಿಜೆಪಿ ಲೀಡ್ – 50,529

ವಿಜಯಪುರ ಲೋಕಸಭಾ ಕ್ಷೇತ್ರ

ಸಚಿವ ಶಿವಾನಂದ ಪಾಟೀಲ್‌ – ಬಸವನ ಬಾಗೇವಾಡಿ ಕ್ಷೇತ್ರ
ರಮೇಶ ಜಿಗಜಿಣಗಿ,ಬಿಜೆಪಿ – 83916
ರಾಜು ಆಲಗೂರ, ಕಾಂಗ್ರೆಸ್ – 66363
ಬಿಜೆಪಿ ಲೀಡ್ – 17553

ಸಚಿವ ಎಂ.ಬಿ. ಪಾಟೀಲ್ – ಬಬಲೇಶ್ವರ ಕ್ಷೇತ್ರ

ರಮೇಶ ಜಿಗಜಿಣಗಿ ಬಿಜೆಪಿ – 79002
ರಾಜು ಆಲಗೂರ್ ಕಾಂಗ್ರೆಸ್ – 75651
ಬಿಜೆಪಿ ಲೀಡ್ – 3351

ಬೆಂಗಳೂರು ಉತ್ತರ ಕ್ಷೇತ್ರ

ಸಚಿವ ಕೃಷ್ಣಬೈರೇಗೌಡ – ಬ್ಯಾಟರಾಯನಪುರ ಕ್ಷೇತ್ರ
ಶೋಭ ಕರಂದ್ಲಾಜೆ, ಬಿಜೆಪಿ – 1,64,574
ರಾಜೀವ್ ಗೌಡ, ಕಾಂಗ್ರೆಸ್ – 1,29,523
ಬಿಜೆಪಿ ಲೀಡ್ – 35,051

ಚಿತ್ರದುರ್ಗ ಲೋಕಸಭಾ ಕ್ಷೇತ್ರ

ಸಚಿವ ಡಿ. ಸುಧಾಕರ್ – ಹಿರಿಯೂರು‌ ಕ್ಷೇತ್ರ
ಗೋವಿಂದ ಕಾರಜೋಳ, ಬಿಜೆಪಿ – 88,794
ಬಿಎನ್ ಚಂದ್ರಪ್ಪ, ಕಾಂಗ್ರೆಸ್- 82,597
ಬಿಜೆಪಿ ಲೀಡ್ – 6197

Exit mobile version