Site icon Vistara News

Electric scooter : ಎಲೆಕ್ಟ್ರಿಕ್‌ ಬೈಕ್‌ ಬ್ಯಾಟರಿ ಸ್ಫೋಟಕ್ಕೆ ಹೊತ್ತಿ ಉರಿದ ಮನೆ!

Electric bike battery explodes house gutted in fire

ಹುಬ್ಬಳ್ಳಿ/ಹಾವೇರಿ: ಎಲೆಕ್ಟ್ರಿಕ್ ಬೈಕ್ ಬ್ಯಾಟರಿ ಸ್ಫೋಟಗೊಂಡು (Electric scooter) ಮನೆಯೊಂದು ಬೆಂಕಿಗೆ (Fire Accident) ಆಹುತಿಯಾಗಿದೆ. ಧಾರವಾಡದ ಕಲಘಟಗಿ ತಾಲೂಕಿನ ಬಿ.ಗುಡಿಹಾಳ ಗ್ರಾಮದಲ್ಲಿ ಘಟನೆ ನಡೆದಿದೆ.

ಎಲೆಕ್ಟ್ರಿಕ್‌ ಬೈಕ್‌ ಬ್ಯಾಟರಿಯನ್ನು ಚಾರ್ಜಿಂಗ್‌ಗೆ ಹಾಕಲಾಗಿತ್ತು. ಈ ವೇಳೆ ಬ್ಯಾಟರಿ ಸ್ಫೋಟಗೊಂಡು ಬೈಕ್‌ ಹೊತ್ತಿ ಉರಿದಿದೆ. ಈ ವೇಳೆ ಬೆಂಕಿ ಕಿಡಿ ಮನೆಗೆ ಆವರಿಸಿ ಕ್ಷಣಾರ್ಧದಲ್ಲಿ ಹೊತ್ತಿಕೊಂಡಿದೆ. ಬಸಯ್ಯ ಹಿರೇಮಠ್ ಎಂಬುವವರ ಮನೆಯಲ್ಲಿ ಈ ಅವಘಡ ಸಂಭವಿಸಿದೆ.

ಬೆಂಕಿ ಕಾಣಿಸಿಕೊಳ್ಳುವಾಗಲೇ ಕುಟುಂಬಸ್ಥರು ಹೊರಗೆ ಓಡಿ ಹೋಗಿದ್ದಾರೆ. ಅದೃಷ್ಟವಶಾತ್ ಅಪಾಯದಿಂದ ಪಾರಾಗಿದ್ದಾರೆ. ಸ್ಥಳಕ್ಕೆ ತಹಸೀಲ್ದಾರ್ ಹಾಗೂ ಕಲಘಟಗಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಅಗ್ನಿಶಾಮಕ ದಳ ಸಿಬ್ಬಂದಿ ಬೆಂಕಿಯನ್ನು ನಂದಿಸಿದ್ದಾರೆ.

ಇದನ್ನೂ ಓದಿ: Murder Case : ಬೆತ್ತಲೆಗೊಳಿಸಿ ಇಟ್ಟಿಗೆ ಕಲ್ಲಿನಿಂದ ಹೊಡೆದು ವ್ಯಕ್ತಿಯ ಬರ್ಬರ ಹತ್ಯೆ!

ಹಾವೇರಿಯಲ್ಲೂ ಸುಟ್ಟು ಕರಕಲಾದ ಎಲೆಕ್ಟ್ರಿಕ್‌ ಸ್ಕೂಟರ್‌

ಇತ್ತ ಹಾವೇರಿಯ ವಿದ್ಯಾನಗರ ಬಡಾವಣೆಯಲ್ಲೂ ಚಾರ್ಜಿಂಗ್ ಹಾಕಿದ್ದ ವೇಳೆ ಇಲೆಕ್ಟ್ರಿಕ್ ಸ್ಕೂಟಿರ್‌ ಧಗ ಧಗನೆ ಹೊತ್ತಿ ಉರಿದಿದೆ. ನಿವೃತ್ತ ಶಿಕ್ಷಕ ಗಿರೀಶ ಪಾಟೀಲ ಮನೆಯ ಮುಂದೆ ಸ್ಕೂಟರ್‌ ಸುಟ್ಟು ಕರಕಲಾಗಿದೆ. ಎಲೆಕ್ಟ್ರಿಕ್‌ ಸ್ಕೂಟರ್‌ ಚಾರ್ಜಿಂಗ್‌ಗಾಗಿಯೇ ಪ್ಲಗ್ ಮಾಡಿಸಿದ್ದರು. ರಾತ್ರಿ ಚಾರ್ಜಿಂಗ್ ಹಾಕಿ ಮನೆಯೊಳಗೆ ಕುಳಿತಿದ್ದರು. ಚಾರ್ಜಿಂಗ್ ಹಾಕಿದ ಒಂದು ಗಂಟೆ ಬಳಿಕ ದಟ್ಟ ಹೊಗೆಯೊಂದಿಗೆ ಬೆಂಕಿ ಕಾಣಿಸಿಕೊಂಡಿದೆ. ಕ್ಷಣಾರ್ಧದಲ್ಲೇ ಸುಟ್ಟು ಹೋಗಿದೆ.

ಡಿವೈಡರ್‌ಗೆ ಬೈಕ್‌ ಡಿಕ್ಕಿಯಾಗಿ ಸವಾರ ಸಾವು

ಡಿವೈಡರ್‌ಗೆ ಬೈಕ್ ಡಿಕ್ಕಿ ಹೊಡೆದ ಪರಿಣಾಮ ಸವಾರ ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಹಿರಿಯಡ್ಕ ನಿವಾಸಿ ಅಕ್ಷಯ್ ಭಟ್ (26) ಮೃತ ಸವಾರ. ಅಕ್ಷಯ್ ಭಟ್ ಅಡುಗೆ ವೃತ್ತಿ ಮಾಡಿಕೊಂಡಿದ್ದರು. ದೇವಸ್ಥಾನವೊಂದರಲ್ಲಿ ನವರಾತ್ರಿಯ ಪ್ರಯುಕ್ತ ಅಡುಗೆ ಕೆಲಸಕ್ಕೆ ಹೊರಟಿದ್ದರು. ಈ ವೇಳೆ ಅಪಘಾತ ಉಡುಪಿಯಲ್ಲಿ ನಡೆದಿದೆ. ಮಣಿಪಾಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸಾಮಾಜಿಕ ಕಾರ್ಯಕರ್ತರ ನೆರವಿನೊಂದಿಗೆ ಮೃತ ದೇಹವನ್ನು ರವಾನೆ ಮಾಡಲಾಗಿದೆ.

ಸಿಸಿ ಕ್ಯಾಮೆರಾದಲ್ಲಿ ಸೆರೆಯಾದ ಅಪಘಾತದ ದೃಶ್ಯ. ಗಂಭೀರ ಗಾಯಗೊಂಡಿರುವ ವೃದ್ಧೆ ನಿಂಗಜಮ್ಮ

ವೃದ್ಧೆಗೆ ಬೈಕ್‌ ಡಿಕ್ಕಿ- ಸವಾರ ಪರಾರಿ

ಪಾದಚಾರಿ ವೃದ್ಧೆಗೆ ಬೈಕ್‌ವೊಂದು ಡಿಕ್ಕಿ ಹೊಡೆದಿರುವ ಘಟನೆ ಹಾಸನ ನಗರದ ಹೊಸಲೈನ್ ರಸ್ತೆಯಲ್ಲಿ ನಡೆದಿದೆ. ನಿಂಗಜಮ್ಮ ಎಂಬುವವರು ಗಂಭೀರವಾಗಿ‌ ಗಾಯಗೊಂಡಿದ್ದಾರೆ. ಅಪಘಾತ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಡಿಕ್ಕಿ ಹೊಡೆದು ಬೈಕ್ ನಿಲ್ಲಿಸದೇ ಸವಾರ ಕಾಲ್ಕಿತ್ತಿದ್ದಾನೆ. ವಿವೇಕನಗರ ನಿವಾಸಿಯಾಗಿರುವ ನಿಂಗಜಮ್ಮ ಅವರಿಗೆ ಹಾಸನದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ತಲೆ‌ಗೆ ಬಲವಾಗಿ ಪೆಟ್ಟಾಗಿದ್ದು, ಸಾವು ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದಾರೆ. ಪೆನ್ ಷನ್ ಮೊಹೊಲ್ಲಾ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ರಾಜ್ಯದ ಇನ್ನಷ್ಟು ಸುದ್ದಿಗಾಗಿ ಈ ಲಿಂಕ್‌ ಕ್ಲಿಕ್‌ ಮಾಡಿ

Exit mobile version