ಹಾಸನ: ಬೈಕ್‌ನಲ್ಲಿ ಬಂದ ವ್ಯಕ್ತಿಯೊಬ್ಬರು (Bike rider) ಪಕ್ಕದ ಅಂಗಡಿಗೆ ಹೋಗಲೆಂದು ರಸ್ತೆ ಡಿವೈಡರ್ ದಾಟುವ ವೇಳೆ (Crossing the divider) ಕಬ್ಬಿಣದ ಡಿವೈಡರ್‌ನಲ್ಲಿ ವಿದ್ಯುತ್ ಪ್ರವಹಿಸಿ ಅದರ ಶಾಕ್‌ನಿಂದ (Electric Shock) ಸ್ಥಳದಲ್ಲೇ ಪ್ರಾಣ ಕಳೆದುಕೊಂಡಿದ್ದಾರೆ. ಹಾಸನ ಜಿಲ್ಲೆ (Hasana News) ಅರಸೀಕೆರೆ ತಾಲ್ಲೂಕಿನ ಹುಣಸೆಘಟ್ಟ ಗ್ರಾಮದ ರವಿ (45) ಮೃತ ದುರ್ದೈವಿ. ಅವರು ತಾಲೂಕಿನ ಬೇಳಗುಂಬ ಗೇಟ್ ಬಳಿಯ ರಾಷ್ಟ್ರೀಯ ಹೆದ್ದಾರಿ 206ರಲ್ಲಿ (National highway 206) ಡಿವೈಡರ್ ದಾಟುವ ವೇಳೆ ಈ ದುರಂತ ಸಂಭವಿಸಿದೆ.
ಗುರುವಾರ ರಾತ್ರಿ ರವಿ ಅವರು ತಮ್ಮ ಕರ್ತವ್ಯ ಮುಗಿಸಿ ತಮ್ಮ ಗ್ರಾಮಕ್ಕೆ ಬೈಕ್‌ನಲ್ಲಿ ತೆರಳುತ್ತಿದ್ದರು. ಈ ವೇಳೆ ಅವರಿಗೆ ಮನೆಯಲ್ಲಿ ಏನೋ ತರಲು ಹೇಳಿದ್ದು ನೆನಪಾಗಿರಬೇಕು. ಅವರು ರಸ್ತೆ ಬದಿ ಬೈಕ್ ನಿಲ್ಲಿಸಿ ಇನ್ನೊಂದು ಬದಿಯಲ್ಲಿದ್ದ ಅಂಗಡಿಗೆ ಹೋಗಲು ಮುಂದಾದರು. ಹಾಗೆ ಹೋಗಬೇಕು ಎಂದು ರಸ್ತೆ ಮಧ್ಯದಲ್ಲಿ ಹಾಕಿದ ಕಬ್ಬಿಣದ ಡಿವೈಡರ್‌ನ್ನು ದಾಟಿ ಹೋಗಬೇಕು.
ರವಿ ಅವರು ರೋಡ್ ಡಿವೈಡರ್‌ನ್ನು ಕೈಯಿಂದ ಹಿಡಿದು ಇನ್ನೇನು ಮತ್ತೊಂದು ಭಾಗಕ್ಕೆ ಹತ್ತಿಳಿಯಬೇಕು ಎನ್ನುವಷ್ಟರಲ್ಲಿ ಅವರು ವಿದ್ಯುತ್ ಶಾಕ್‌ಗೆ ಒಳಗಾಗಿ ಸ್ಥಳದಲ್ಲೇ ಬಿದ್ದು ಮೃತಪಟ್ಟರು. ಕಬ್ಬಿಣದ ಡಿವೈಡರ್‌ಗೆ ಎಲ್ಲಿಂದ ವಿದ್ಯುತ್ ಪ್ರವಹಿಸಿದೆ ಎನ್ನುವುದು ತಿಳಿದುಬಂದಿಲ್ಲ. ಡಿವೈಡರ್ ಮಧ್ಯಭಾಗದಲ್ಲಿ ಹಾಕಿರುವ ವಿದ್ಯುತ್ ಕಂಬಗಳಿಂದ ಮಿಸ್ ಕನೆಕ್ಷನ್ ಆಗಿ ವಿದ್ಯುತ್ ಪ್ರವಹಿಸಿರಬಹುದು ಎಂದು ಅಂದಾಜಿಸಲಾಗಿದೆ.
ಈ ರೀತಿ ನಿರ್ಲಕ್ಷ್ಯ ವಹಿಸಿದ ಅಧಿಕಾರಿಗಳ ವಿರುದ್ಧ ಸಾರ್ವಜನಿಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದರು. ರವಿ ಅವರ ಮೃತದೇಹವನ್ನು ಅರಸೀಕೆರೆ ಸರ್ಕಾರಿ ಆಸ್ಪತ್ರೆಗೆ ಮೃತದೇಹ ರವಾನೆ ಮಾಡಲಾಯಿತು.
ಅರಸೀಕೆರೆ ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಅಲ್ಲೇ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ Road accident: ಬೈಕ್‌ಗೆ ಲಾರಿ ಡಿಕ್ಕಿ: ಮಗಳನ್ನು ಶಾಲೆಗೆ ಕರೆದೊಯ್ಯುತ್ತಿದ್ದ ಅಪ್ಪ ಸ್ಥಳದಲ್ಲೇ ಸಾವು, ಮಗಳಿಗೂ ಗಾಯ
ಯಾದಗಿರಿ: ಅಂಗನವಾಡಿ ಕೇಂದ್ರದ ಚಾವಣಿ ಕುಸಿದು ಮಗುವಿಗೆ ಗಾಯ
ಯಾದಗಿರಿ: ಶಾಲಾ ಕಟ್ಟಡಗಳ ದುಸ್ಥಿತಿಯ ಬಗ್ಗೆ ಆಗಾಗ ದೂರುಗಳು ಕೇಳಿಬರುತ್ತಿದ್ದರೂ ಯಾರೂ ಅದನ್ನು ಗಂಭೀರವಾಗಿ ತೆಗೆದುಕೊಂಡಂತೆ ಕಾಣುತ್ತಿಲ್ಲ. ಅನೇಕ ಶಾಲೆಗಳು ಈ ಬಾರಿ ಉರುಳಿಬಿದ್ದಿದೆ. ಗೋಡೆಗಳು ಬಿದ್ದಿವೆ, ಚಾವಣಿಗಳು ಕುಸಿದಿವೆ. ಅಪಾಯಗಳೂ ಸಂಭವಿಸಿವೆ. ಗುರುವಾರ ಯಾದಗಿರಿ ಜಿಲ್ಲೆಯ ಶಹಾಪುರ ತಾಲೂಕಿನ ಮರಕಲ್ ಗ್ರಾಮದಲ್ಲೂ ಇಂಥಹುದೊಂದು ದುರ್ಘಟನೆ ನಡೆದಿದೆ.
ಇಲ್ಲಿನ ಅಂಗನವಾಡಿ ಕೇಂದ್ರದ ಚಾವಣಿ ಕುಸಿದು 10 ತಿಂಗಳ ಪುಟ್ಟ ಮಗುವಿನ ತಲೆಗೆ ಗಾಯವಾಗಿದೆ. ಆದರೆ, ಯಾರ ಪುಣ್ಯವೋ ಮಗುವಿಗೆ ಹೆಚ್ಚೇನೂ ಗಾಯವಾಗದೆ ಅಪಾಯದಿಂದ ಪಾರಾಗಿದೆ.
ಮರಕಲ್ ಗ್ರಾಮದ ಅಂಗನವಾಡಿ ಕೇಂದ್ರದಲ್ಲಿ ಇಂದ್ರಧನುಷ್ ಲಸಿಕೆ ಹಾಕುವ ಕಾರ್ಯಕ್ರಮ ನಡೆಯುತ್ತಿತ್ತು. ಇದಕ್ಕಾಗಿ 10 ತಿಂಗಳ ಮಗು ಕೀರ್ತಿ ಸೇರಿದಂತೆ ಹಲವು ಮಕ್ಕಳನ್ನು ಕರೆ ತರಲಾಗಿತ್ತು. ಪೋಷಕರು ಪುಟಾಣಿ ಮಕ್ಕಳನ್ನು ಕರೆದುಕೊಂಡು ಬಂದಿದ್ದರು.
ಈ ನಡುವೆ, ಒಮ್ಮೆಗೇ ಮೇಲ್ಚಾವಣಿ ಕುಸಿದು ತಲೆ ಮೇಲೆ ಬಿದ್ದ ಪರಿಣಾಮ 10 ತಿಂಗಳ ಮಗು ಕೀರ್ತಿ ತಲೆಗೆ ಗಾಯವಾಯಿತು. ಇತರ 6 ಮಕ್ಕಳು ಹಾಗೂ ಪೋಷಕರು ಪ್ರಾಣಾಪಾಯದಿಂದ ಪಾರಾದರು.
ಗಾಯಾಳು ಮಗು ಕೀರ್ತಿಯನ್ನು ಶಹಾಪುರ ತಾಲೂಕಾಸ್ಪತ್ರೆಗೆ ದಾಖಲು ಮಾಡಲಾಗಿದೆ. ಸ್ಥಳಕ್ಕೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಈ ಅಂಗನವಾಡಿ ಕೇಂದ್ರ ಕೇವಲ ಮೂರು ವರ್ಷದ ಹಿಂದೆ ನಿರ್ಮಾಣವಾಗಿತ್ತು. ಕಳಪೆ ಕಾಮಗಾರಿಯಿಂದಾಗಿ ಚಾವಣಿ ಕುಸಿಯುವ ಸ್ಥಿತಿಗೆ ಬಂದಿದೆ ಎಂದು ಗ್ರಾಮಸ್ಥರು ದೂರಿದ್ದಾರೆ.