Site icon Vistara News

‌ದಸರಾ ಹಬ್ಬದ ಖುಷಿಗೆ ವಿದ್ಯುತ್ ದರ ಏರಿಕೆಯ ಶಾಕ್‌

ವಿದ್ಯುತ್ ದರ

ಬೆಂಗಳೂರು: ದಸರಾ ಹಬ್ಬದ ಖುಷಿಯ ಸಂದರ್ಭದಲ್ಲಿಯೇ ಇಂಧನ ಇಲಾಖೆ ಗ್ರಾಹಕರಿಗೆ ಬೆಲೆ ಏರಿಕೆಯ ಶಾಕ್‌ ನೀಡಿದೆ. ಇಂಧನ ಹೊಂದಾಣಿಕೆಯ ಶುಲ್ಕವನ್ನು ಅಕ್ಟೋಬರ್‌ 1ರಿಂದ ಅನ್ವಯವಾಗುವಂತೆ ಮುಂದಿನ 6 ತಿಂಗಳ ಅವಧಿಗೆ ಪರಿಷ್ಕರಿಸಿ ಕರ್ನಾಟಕ ವಿದ್ಯುಚ್ಛಕ್ತಿ ನಿಯಂತ್ರಣ ಆಯೋಗ(ಕೆಇಆರ್‌ಸಿ) ಆದೇಶ ಹೊರಡಿಸಿದೆ.

ಈ ಆದೇಶದಿಂದ ರಾಜ್ಯದಲ್ಲಿ ವಿದ್ಯುತ್‌ ದರ ಏರಿಕೆಯಾಗಲಿದ್ದು, ಗ್ರಾಹಕರಿಗೆ ಮತ್ತಷ್ಟು ಹೊರೆಯಾಗಿದೆ. ಪ್ರತಿ ಯೂನಿಟ್‌ಗೆ ಬೆಸ್ಕಾಂ ವ್ಯಾಪ್ತಿಯಲ್ಲಿ 43 ಪೈಸೆ, ಮೆಸ್ಕಾಂ 24 ಪೈಸೆ, ಸೆಸ್ಕ್‌ 34 ಪೈಸೆ, ಹೆಸ್ಕಾಂ 35 ಪೈಸೆ ಹಾಗೂ ಜೆಸ್ಕಾಂ ವ್ಯಾಪ್ತಿಯಲ್ಲಿ 35 ಪೈಸೆಯಷ್ಟು ಹೆಚ್ಚಳ ಮಾಡಲಾಗಿದೆ.

ಇದನ್ನು ಓದಿ | Poster Politics | ಇಂಡಿಯನ್‌ ಮನಿ ಸಿಇಒ ಸುಧೀರ್ ವಿಡಿಯೊ ಎಡಿಟ್‌ ಮಾಡಿದ ಕಾಂಗ್ರೆಸ್‌, ದೂರು ದಾಖಲು

Exit mobile version