Site icon Vistara News

Electricuted: ಕಸ ಎಸೆಯಲು ಹೋದ ಬಾಲಕ ಶಾಕ್‌ನಿಂದ ಸಾವು; ತಂತಿಗೆ ವಿದ್ಯುತ್‌ ಹರಿಸಿ ಕ್ರೌರ್ಯ ಮೆರೆದನೇ ಮಾಲೀಕ?

Boy died of electricution

ಬಾಗಲಕೋಟೆ: ಕಸ ಎಸೆಯಲು ಹೋದ ಬಾಲಕನೊಬ್ಬ ವಿದ್ಯುತ್‌ ಶಾಕ್‌ನಿಂದ (Electricuted) ಮೃತಪಟ್ಟ ದಾರುಣ ಘಟನೆ ಬಾಗಲಕೋಟೆಯಲ್ಲಿ (Bagalakote News) ನಡೆದಿದೆ. ರಾಕೇಶ್ ಕೊರವರ ಎಂಬ 12 ವರ್ಷದ ಬಾಲಕ ಮೃತಪಟ್ಟವನು. ಕಸ ಎಸೆಯುವ ಜಾಗಕ್ಕೆ ಯಾರೂ ಹೋಗದಂತೆ ಕಟ್ಟಿದ ವಿದ್ಯುತ್‌ ತಂತಿಯೇ (power connected to wire) ಬಾಲಕನಿಗೆ ಮುಳುವಾಗಿದೆ. ಹಾಗಿದ್ದರೆ ಈ ವಿದ್ಯುತ್‌ ತಂತಿಯಲ್ಲಿ ವಿದ್ಯುತ್‌ ಪ್ರವಹಿಸುವಂತೆ ಮಾಡಿ ಕ್ರೌರ್ಯ ಮೆರೆಯಲಾಗಿತ್ತೇ ಎಂಬ ಪ್ರಶ್ನೆ ಎದುರಾಗಿದೆ.

ಬಾಗಲಕೋಟೆಯ ರೇಲ್ವೆ ನಿಲ್ದಾಣ ಬಡಾವಣೆಯ ನಾಲಬಂದ್‌ ಫಂಕ್ಷನ್ ಹಾಲ್ ಬಳಿ ಘಟನೆ ನಡೆದಿದೆ. ಇಲ್ಲಿನ ಕುಟುಂಬವೊಂದರ ಬಾಲಕನಾಗಿರುವ ರಾಕೇಶ್‌ ರಾತ್ರಿಯ ಹೊತ್ತು ಕಸ ಎಸೆಯಲೆಂದು ಹೋಗಿದ್ದ. ಆಗ ಕಸ ಎಸೆಯುವ ಸ್ಥಳಕ್ಕೆ ಹೋಗುವ ದಾರಿಯಲ್ಲಿ ಒಂದು ತಂತಿ ಇತ್ತು. ಇದನ್ನು ಆತ ಸ್ಪರ್ಶಿಸುತ್ತಿದ್ದಂತೆಯೇ ವಿದ್ಯುತ್‌ ಆಘಾತಕ್ಕೆ ಒಳಗಾಗಿ ಅಲ್ಲೇ ಬಿದ್ದು ಒದ್ದಾಡಿದ್ದಾನೆ. ಕೂಡಲೇ ಆತನನ್ನು ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಆತ ಬದುಕುಳಿಯಲಿಲ್ಲ.

ವಿದ್ಯುತ್ ಕಂಬ ಹಾಗೂ ಕಬ್ಬಿಣದ ಗ್ರಿಲ್‌ಗೆ ಕಟ್ಟಿದ್ದ ತಂತಿ ಸ್ಪರ್ಶಿಸಿದ್ದರಿಂದ ಸಾವು ಸಂಭವಿಸಿದೆ. ತಂತಿ ವಿದ್ಯುತ ಕಂಬಕ್ಕೆ ಕಟ್ಟಿದ್ದರಿಂದ ತಂತಿಯಲ್ಲಿ ವಿದ್ಯುತ್‌ ಪ್ರವಹಿಸಿದೆ ಎನ್ನಲಾಗಿದೆ.

ಈ ನಡುವೆ ನಾಲಬಂದ್ ಫಂಕ್ಷನ್ ಮಾಲೀಕನೇ ಈ ಸಾವಿಗೆ ಹೊಣೆ ಎಂದು ಮೃತನ ಕುಟುಂಬಸ್ಥರು ಹಾಗೂ ಸ್ಥಳೀಯರು ಆರೋಪಿಸಿದ್ದಾರೆ.

ನಿಜಾಮುದ್ದಿನ್ ನಾಲಬಂದ್ ಎಂಬಾತನೇ ಫಂಕ್ಷನ್ ಹಾಲ್‌ ಮಾಲೀಕರಾಗಿದ್ದು, ರಾತ್ರಿಯ ಹೊತ್ತು ಹಾಲ್ ಕಡೆ ಯಾರೂ ಹೋಗದಂತೆ ಕಂಬಕ್ಕೆ ಗ್ರಿಲ್‌ಗೆ ತಂತಿ ಕಟ್ಟಿದ್ದ ಎನ್ನಲಾಗಿದೆ. ಫಂಕ್ಷನ್‌ ಹಾಲ್‌ ಮಾಲೀಕ ಕೇವಲ ತಂತಿ ಮಾತ್ರ ಕಟ್ಟಿದ್ದನೇ ಅಥವಾ ಮತ್ತೆ ಮತ್ತೆ ಆ ಕಡೆಗೆ ಬರುವವರಿಗೆ, ಕಸ ಎಸೆಯುವವರಿಗೆ ಪಾಠವಾಗಲಿ ಎಂದು ಬೇಕೆಂದೇ ತಂತಿಗೆ ವಿದ್ಯುತ್‌ ಸಂಪರ್ಕ ನೀಡಿದನೇ ಎನ್ನುವ ಬಗ್ಗೆ ತನಿಖೆ ಆಗಬೇಕು ಎನ್ನುವುದು ಸ್ಥಳೀಯರ ಆಗ್ರಹಿವಾಗಿದೆ.

ಬಾಗಲಕೋಟೆ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ: Electric Shock : ಲೈನ್‌ ದುರಸ್ತಿ ವೇಳೆ ವಿದ್ಯುತ್‌ ಪ್ರವಹಿಸಿ ಲೈನ್‌ಮ್ಯಾನ್‌ ಸಾವು

ಕೊಲ್ಲೂರು ಬಳಿ ಪಿಕಪ್‌- ಟಿಪ್ಪರ್‌ ಡಿಕ್ಕಿ: ಒಬ್ಬ ಸ್ಥಳದಲ್ಲೇ ಡೆತ್‌

ಉಡುಪಿ: ಜಿಲ್ಲೆಯ ಬೈಂದೂರು ತಾಲೂಕಿನ ಕೊಲ್ಲೂರು ಮಾಸ್ತಿಕಟ್ಟೆ ಬಳಿ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ (Road accident) ಒಬ್ಬರು ಸ್ಥಳದಲ್ಲೇ ಮೃತಪಟ್ಟಿದ್ದು, ಇನ್ನೊಬ್ಬರ ಸ್ಥಿತಿ ಗಂಭೀರವಾಗಿದೆ. ಪಿಕಪ್ ವಾಹನಕ್ಕೆ ಟಿಪ್ಪರ್ ಡಿಕ್ಕಿ (Pickup and tipper accident) ಹೊಡೆದು ಅಪಘಾತ ಸಂಭವಿಸಿದೆ.

ಮಾಸ್ತಿಕಟ್ಟೆ ಬಳಿ ಈ ಎರಡೂ ವಾಹನಗಳು ಡಿಕ್ಕಿ ಹೊಡೆದುಕೊಂಡಿದ್ದು, ಪಿಕಪ್‌ನಲ್ಲಿದ್ದ ರಾಜು ಗೌಡ (46) ಎಂಬವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಪಿಕಪ್‌ ವಾಹನದ ಚಾಲಕ ಶಿವರಾಜ್‌ ಅವರಿಗೂ ಗಂಭೀರ ಗಾಯಗಳಾಗಿದ್ದು, ಅವರನ್ನು ಕುಂದಾಪುರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಘಟನೆಗೆ ಟಿಪ್ಪರ್ ಚಾಲಕನ ಅಜಾಗರೂಕತೆಯ ಚಾಲನೆಯೇ ಅಪಘಾತಕ್ಕೆ ಕಾರಣ ಎಂದು ಪ್ರಾಥಮಿಕ ಮಾಹಿತಿ ನೀಡಲಾಗಿದೆ. ಘಟನಾ ಸ್ಥಳಕ್ಕೆ ಕೊಲ್ಲೂರು ಪೋಲಿಸರು ಭೇಟಿ ನೀಡಿದ್ದು, ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Exit mobile version