ಬೆಂಗೂರು: ರಾಜಧಾನಿಯಲ್ಲಿ ರಾಜ ಕಾಲುವೆಗಳ ಒತ್ತುವರಿಯಿಂದಾಗಿ ಪ್ರವಾಹ ಉಂಟಾಗುತ್ತಿದೆ ಎಂಬ ಕಾರಣಕ್ಕಾಗಿ ನಡೆಯುತ್ತಿರುವ ಒತ್ತುವರಿ ತೆರವು ಕಾರ್ಯಾಚರಣೆ ಅರೆಬರೆಯಾಗಿ ನಡೆಯುತ್ತಿರುವ ಬಗ್ಗೆ ಹೈಕೋರ್ಟ್ ಅಸಮಾಧಾನ ವ್ಯಕ್ತಪಡಿಸಿದೆ.
ʻʻರಾಜಕಾಲುವೆ ಒತ್ತುವರಿಗೆ ಸಂಬಂಧಿಸಿ 2021ರ ಸೆಪ್ಟೆಂಬರ್ ನಲ್ಲೇ ಸಿಎಜಿ ವರದಿ ನೀಡಿದ್ದರೂ ಕ್ರಮ ಕೈಗೊಂಡಿಲ್ಲ ಯಾಕೆ? ಬಿಬಿಎಂಪಿ ನಡೆ ತೃಪ್ತಿಕರವಾಗಿಲ್ಲ. ಅದನ್ನು ಸರಿಯಾಗಿ ಜಾರಿಗೊಳಿಸಿʼʼ ಎಂದ ಹೈಕೋರ್ಟ್ ವಿಭಾಗೀಯ ಪೀಠ ಬಿಬಿಎಂಪಿಗೆ ನಿರ್ದೇಶನ ನೀಡಿತು.
ಒತ್ತುವರಿ ಕುರಿತ ಸಿಎಜಿ ವರದಿ ಜಾರಿಗೆ ಮೂರು ಅಧಿಕಾರಿಗಳ ಸಮಿತಿ ರಚಿಸಲು ಸಮಿತಿ ಸೂಚನೆ ನೀಡಿತು. ಈ ಸಮಿತಿ ಸಿಎಜಿ ವರದಿ ಜಾರಿ ಬಗ್ಗೆ ನಿಗಾ ವಹಿಸಬೇಕು ಮತ್ತು 15 ದಿನಗಳಿಗೊಮ್ಮೆ ಹೈಕೋರ್ಟ್‌ಗೆ ವರದಿ ಸಲ್ಲಿಸಲು ಸೂಚಿಸಿತು.
2626 ರಾಜಕಾಲುವೆ ಒತ್ತುವರಿಗಳ ಪೈಕಿ 2024ನ್ನು ತೆರವುಗೊಳಿಸಲಾಗಿದೆ. 602 ಒತ್ತುವರಿ ತೆರವು ಬಾಕಿಯಿರುವುದಾಗಿ ಬಿಬಿಎಂಪಿ ಹೈಕೋರ್ಟ್ ಮುಂದೆ ಹೇಳಿದೆ. ಆದರೆ, ಹೈಕೋರ್ಟ್‌ಗೆ ಇದು ಅಷ್ಟೇನೂ ಸಮಾಧಾನ ತಂದಿಲ್ಲ. ʻʻಎಲ್ಲ ಒತ್ತುವರಿ ತೆರವುಗೊಳಿಸಿ 15 ದಿನಕ್ಕೊಮ್ಮೆ ವರದಿ ಸಲ್ಲಿಸಬೇಕು. ಹೈಕೋರ್ಟ್ ಆದೇಶ ಪಾಲಿಸದಿದ್ದರೆ ಗಂಭೀರವಾಗಿ ಪರಿಗಣಿಸಲಾಗುವುದುʼʼ ಎಂದು ಹೈಕೋರ್ಟ್ ಸೂಚಿಸಿತು.
ಬೇರೆ ಸಂಸ್ಥೆಗಳು ಈ ಬಗ್ಗೆ ಪ್ರತ್ಯೇಕ ವಿಚಾರಣೆ ನಡೆಸದಂತೆ ಸೂಚನೆ ನೀಡಿದ ಹೈಕೋರ್ಟ್ ವಿಚಾರಣೆಯನ್ನು ಸೆಪ್ಟೆಂಬರ್ 30ಕ್ಕೆ ಮುಂದೂಡಿತು.
ಇದನ್ನೂ ಓದಿ | 7 ದಿನಗಳ ಗಡುವು ಪೂರ್ಣ, ತೆರವಾಗದ ರೈನ್‌ಬೋ ಲೇಔಟ್ ಒತ್ತುವರಿ