ತುಮಕೂರು: ಆ ಕುಟುಂಬದವರು ಮನೆ ಮಗನ ಮದುವೆಯ ಸಂಭ್ರಮದಲ್ಲಿತ್ತು. ಕೆಲವೇ ದಿನಗಳಲ್ಲಿ ಆತ ಹಸೆಮಣೆ ಏರಬೇಕಿತ್ತು. ಆದರೆ ದುಡುಕಿನ ನಿರ್ಧಾರಕ್ಕೆ ಮಸಣ ಸೇರಿದ್ದಾನೆ. ಸ್ನಾನ ಮಾಡುವಾಗ ನಿಶ್ಚಿತಾರ್ಥದ ಉಂಗುರ (Engagement Ring) ಕಳೆದು ಹೋಗಿದ್ದಕ್ಕೆ ಮನನೊಂದ ಮದುಮಗ ವಿಷ ಸೇವಿಸಿ (Consume poison) ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ.
ತುಮಕೂರು ನಗರದ ದೇವರಾಯಪಟ್ಟಣದಲ್ಲಿ ಈ ಘಟನೆ ನಡೆದಿದ್ದು, ಕಮಲೇಶ್ (36) ಮೃತ ದುರ್ದೈವಿ. ಕಮಲೇಶ್ಗೆ ಕಳೆದ ಮೂರು ತಿಂಗಳ ಹಿಂದೆ ಬೆಂಗಳೂರು ಮೂಲದ ಯುವತಿಯೊಂದಿಗೆ ವಿವಾಹ ನಿಶ್ಚಯವಾಗಿತ್ತು. ಕಳೆದ ನ.17ರಂದು ಸ್ನಾನ ಮಾಡಿ ಹೊರ ಬಂದಾಗ ಕೈಯಲ್ಲಿದ್ದ ನಿಶ್ಚಿತಾರ್ಥದ ಉಂಗುರ ಕಳೆದು ಹೋಗಿತ್ತು.
ಇಡೀ ಮನೆ ಪೂರ್ತಿ ಹುಡುಕಾಡಿದರೂ ಉಂಗುರ ಮಾತ್ರ ಸಿಕ್ಕಿರಲಿಲ್ಲ. ಇದರಿಂದ ಆತಂಕಕ್ಕೆ ಒಳಗಾದ ಕಮಲೇಶ್ ಈ ವಿಚಾರವನ್ನು ಮನೆಯವರಿಗೆ ಹೇಳಲು ಹೆದರಿದ್ದಾನೆ. ಕಡೆಗೆ ಸಾವುವೊಂದೇ ದಾರಿ ಎಂದು ತಿಳಿದು ವಿಷ ಸೇವಿಸಿದ್ದಾನೆ. ತೀವ್ರ ಅಸ್ವಸ್ಥಗೊಂಡಿದ್ದ ಕಮಲೇಶ್ನನ್ನು ಜಿಲ್ಲಾಸ್ಪತ್ರೆಗೆ ದಾಖಲು ಮಾಡಲಾಗಿದೆ. ಆದರೆ ಚಿಕಿತ್ಸೆ ಫಲಿಕಾರಿಯಾಗದೆ ಮೃತಪಟ್ಟಿದ್ದಾನೆ. ಕ್ಯಾತಸಂದ್ರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ: Murder Case : ಕೊಲೆ ಮಾಡಿಸಿದ ಅಪಘಾತ! ಮೂಲ ಹುಡುಕಿದಾಗ ಸಿಕ್ಕಿಬಿದ್ದ ಮಹಾ ಕಳ್ಳ..
ಆಟವಾಡುತ್ತಿದ್ದಾಗ ಕಳಚಿಬಿದ್ದ ಗೇಟ್; 3 ವರ್ಷದ ಮಗು ಸಾವು
ಉಡುಪಿ: ಗೆಸ್ಟ್ ಹೌಸ್ ಒಂದರ ಗೇಟ್ (Guest house gate) ಕಳಚಿಬಿದ್ದು ಆಲ್ಲೇ ಆಟವಾಡುತ್ತಿದ್ದ ಮಗು ದಾರುಣವಾಗಿ ಪ್ರಾಣ ಕಳೆದುಕೊಂಡ ಘಟನೆ ಉಡುಪಿ ಬಳಿ (Udupi News) ನಡೆದಿದೆ. ಕೋಟತಟ್ಟು ಗ್ರಾಮ ಪಂಚಾಯತ್ ವ್ಯಾಪ್ತಿಯ ಪಡುಕರೆಯಲ್ಲಿ ಘಟನೆ ನಡೆದಿದ್ದು ಸುಧೀರ್ ಮೊಗವೀರ ಅವರ ಪುತ್ರ ಸುಶಾಂತ್ (3) ಮೃತಪಟ್ಟ ಮಗು (Child death).
ಪುಟ್ಟ ಮಗು ಸುಶಾಂತ್ ಪ್ರತಿನಿತ್ಯವೂ ಮನೆಯ ಪಕ್ಕದ ಗೆಸ್ಟ್ ಹೌಸ್ ಬಳಿ ಆಟವಾಡುತ್ತಿದ್ದ. ಮಂಗಳವಾರ ಅಚಾನಕ್ ಆಗಿ ಗೆಸ್ಟ್ ಹೌಸ್ನ ಗೇಟ್ ಕಳಚಿ ಬಿದ್ದಿದ್ದು, ಆಟವಾಗುತ್ತಿದ್ದ ಮಗುವಿನ ಮೇಲೆ ಬಿದ್ದಿದೆ.
ಗಂಭೀರವಾಗಿ ಗಾಯಗೊಂಡಿದ್ದ ಮಗುವನ್ನು ತಕ್ಷಣ ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ ಅದು ಬದುಕುಳಿಯಲಿಲ್ಲ. ಗೆಸ್ಟ್ ಹೌಸ್ ನವರ ಬೇಜವಾಬ್ದಾರಿತನದ ಈ ದುರಂತ ಸಂಭವಿಸಿದೆ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕೋಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬಿಎಸ್ಎನ್ಎಲ್ ಕಚೇರಿ ಗೇಟ್ ಬಿದ್ದು ಬಾಲಕ ಮೃತ್ಯು
ವಿಜಯನಗರ ಜಿಲ್ಲೆಯ ಹರಪನಹಳ್ಳಿಯಲ್ಲಿ BSNL ಕಚೇರಿ ಗೇಟ್ ಬಿದ್ದು ಬಾಲಕನೊಬ್ಬ ದಾರುಣವಾಗಿ ಸಾವು ಕಂಡಿದ್ದ ಘಟನೆ ಇತ್ತೀಚೆಗೆ ನಡೆದಿತ್ತು. ಬಾಗಳಿ ಗ್ರಾಮದ ಎಂಟು ವರ್ಷದ ಗೌತಮ್ ಮೃತ ಬಾಲಕ. ಪೋಷಕರೊಂದಿಗೆ ಆಧಾರ್ ಕಾರ್ಡ್ ಮಾಡಿಸಲು ಬಂದಿದ್ದ ಬಾಲಕ ಗೌತಮ್ ಆಟವಾಡುತ್ತ BSNL ಕಚೇರಿಯ ಬಳಿ ನಿಂತಿದ್ದ. ಈ ವೇಳೆ ಶಿಥಿಲವಾಗಿದ್ದ ಗೇಟ್ ಕಳಚಿ ತಲೆಯ ಮೇಲೆ ಬಿದ್ದಿದೆ. ತಲೆಗೆ ತೀವ್ರ ಪೆಟ್ಟಾದುದರಿಂದ ಚಿಕಿತ್ಸೆ ಫಲಿಸದೆ ಬಾಲಕ ಮೃತಪಟ್ಟಿದ್ದಾನೆ. ಕಣ್ಣೆದುರಲ್ಲೇ ಆಟ ಆಡುತ್ತಿದ್ದ ಮಗನನ್ನು ಕಳೆದುಕೊಂಡ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಅಧಿಕಾರಿಗಳ ನಿರ್ಲಕ್ಷ್ಯ ಖಂಡಿಸಿ ಸಂಬಂಧಿಕರು ಬಿಎಸ್ಎನ್ಎಲ್ ಕಚೇರಿ ಮುಂದೆ ಧಿಕ್ಕಾರ ಕೂಗಿ ಪ್ರತಿಭಟನೆ ನಡೆಸಿದ್ದಾರೆ. ಹರಪನಹಳ್ಳಿ ಪಟ್ಟಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ. ಜತೆಗೆ ರಾಜ್ಯದ ಇನ್ನಷ್ಟು ಸುದ್ದಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ