Site icon Vistara News

Engineers Suspended: ಸರ್ಕಾರಿ ಐಬಿಯಲ್ಲಿ ಕುಡಿದು ಮಜಾ ಮಾಡಿದ್ದ ಐವರು ಜಿಪಂ ಎಂಜಿನಿಯರ್‌ಗಳ ಅಮಾನತು

Engineers suspended

ಬಾಗಲಕೋಟೆ: ಸರ್ಕಾರಿ ಪ್ರವಾಸಿ ಮಂದಿರದಲ್ಲಿ (ಐಬಿ) ಕುಡಿದು ಮಜಾ ಮಾಡಿದ್ದ ಐವರು ಜಿಪಂ ಎಂಜಿ‌ನಿಯರ್‌ಗಳನ್ನು ಅಮಾನತು (Engineers suspended) ಮಾಡಿ ಜಿಲ್ಲಾಧಿಕಾರಿ ಜಾನಕಿ ಕೆ.ಎಂ. ಆದೇಶ ಹೊರಡಿಸಿದ್ದಾರೆ. ನೀತಿ‌ಸಂಹಿತೆ ಇದ್ದರೂ ಸರ್ಕಾರಿ ಐಬಿಯಲ್ಲೇ ಎಣ್ಣೆ ಪಾರ್ಟಿ ಮಾಡಿದ್ದ ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಲಾಗಿದೆ.

ಜಿಪಂ ಜಮಖಂಡಿ ವಿಭಾಗದ ಎಇಇ ಎಮ್.ಎಸ್ ನಾಯಕ, ಸಹಾಯಕ ಎಂಜಿನಿಯರ್‌ಗಳಾದ ರಾಮಪ್ಪ ರಾಠೋಡ್, ಜಗದೀಶ್ ನಾಡಗೌಡ, ಗಜಾನನ ಪಾಟಿಲ್, ಎಸ್.ಆರ್‌‌.ಜಂಬಗಿ ಅಮಾನತುಗೊಂಡವರು.

ಇದನ್ನೂ ಓದಿ | Lockup Death: ಚನ್ನಗಿರಿ ಠಾಣೆ ಮೇಲೆ ಕಲ್ಲು ತೂರಾಟ ಪ್ರಕರಣ; 10 ಮಂದಿ ವಶಕ್ಕೆ

ಜಮಖಂಡಿಯ ಸರ್ಕಾರಿ ಐಬಿ ರಮಾ ನಿವಾಸದಲ್ಲಿ ಇತ್ತೀಚೆಗೆ ಜಮಖಂಡಿ ವಿಭಾಗದ ಜಿಪಂ ಎಂಜಿನಿಯರ್‌ಗಳು ಗುತ್ತಿಗೆದಾರರೊಂದಿಗೆ ಸೇರಿ ಹಾಡಹಗಲೇ ಎಣ್ಣೆ ಪಾರ್ಟಿ ಮಾಡಿದ್ದರು. ಇದರ ವಿಡಿಯೊ ವೈರಲ್ ಆಗಿತ್ತು. ಹೀಗಾಗಿ ಅಧಿಕಾರಿಗಳ ವಿರುದ್ಧ ಜಿಲ್ಲಾಧಿಕಾರಿ ಕ್ರಮ ಕೈಗೊಂಡಿದ್ದಾರೆ.

ಜಾಸ್ತಿ `ಇಂಟೆಲಿಜೆಂಟ್‌’ ಆಗ್ಬೇಡಿ! ಊರವರ ಮುಂದೆ ಪೊಲೀಸ್‌ ಎಂದು ಬಿಲ್ಡಪ್‌ ಕೊಟ್ಟವ ಈಗ ಲಾಕಪ್‌ ಒಳಗೆ!

Fake Intelligence Bureau officer arrested

ಬಾಗಲಕೋಟೆ: ಊರಲ್ಲಿ ಗೌರವ ಸಿಗಬೇಕು, ನನ್ನ ನೋಡಿದರೆ ಒಂದು ಹವಾ ಇರಬೇಕೆಂದು ಯುವಕನೊರ್ವ ನಕಲಿ ಅಧಿಕಾರಿ ವೇಷ ಹಾಕಿ ಸಿಕ್ಕಿಬಿದ್ದಿದ್ದಾನೆ. ಸಂಗಮೇಶ್ ಲಕ್ಕಪ್ಪಗೋಳ (19) ಎಂಬಾತ ಇಂಟಲಿಜೆನ್ಸ್‌ ಬ್ಯೂರೋ (Fake Intelligence Officer) ಅಧಿಕಾರಿ ವೇಷ ಧರಿಸಿದವನು. ಬಾಗಲಕೋಟೆ ಜಿಲ್ಲೆಯ ರಬಕವಿ ಬನಹಟ್ಟಿ ತಾಲೂಕಿನ ಹಿಪ್ಪರಗಿಯಲ್ಲಿ ಘಟನೆ ನಡೆದಿದೆ.

ಇಂಟಲಿಜೆನ್ಸ್ ಬ್ಯೂರೋದ ನಕಲಿ ಐಡಿ ಕಾರ್ಡ್, ಕ್ಯಾಪ್ ಹೊಂದಿದ್ದ ಸಂಗಮೇಶ್‌ ಬೈಕ್ ಮೇಲೂ ಐಬಿ ಲೋಗೋ ಹಾಕಿಕೊಂಡಿದ್ದ.‌ ಟಾಯ್ ಗನ್, ವಾಕಿಟಾಕಿ ಕೂಡಾ ಇಟ್ಟಕೊಂಡು ಪೋಸ್ ಕೊಡುತ್ತಿದ್ದ. ಸದ್ಯ ಆರೋಪಿ ಸಂಗಮೇಶನನ್ನು ಬನಹಟ್ಟಿ ಪೊಲೀಸರು ಬಂಧಿಸಿದ್ದಾರೆ.

ಇದನ್ನೂ ಓದಿ: Traffic violation : ನಗೆಪಾಟಲಾದ ಟ್ರಾಫಿಕ್‌ ಪೊಲೀಸರು; ಹೆಲ್ಮೆಟ್ ಹಾಕಿಲ್ಲವೆಂದು ಟಿಪ್ಪರ್ ಲಾರಿ ಚಾಲಕನಿಗೆ 500 ರೂ. ದಂಡ

ಹಿಪ್ಪರಗಿ ಗ್ರಾಮದ ಸಂಗಮೇಶ್ ಲಕ್ಕಪ್ಪಗೋಳ ಜತೆಗೆ ಇನ್ನೂ ಎಂಟು ಮಂದಿ ಯುವಕರು ಇದ್ದಾರೆ ಎನ್ನಲಾಗಿದೆ. ಸದ್ಯ ಸಂಗಮೇಶನನ್ನು ಬಂಧಿಸಿರುವ ಪೊಲೀಸರು ಹೆಚ್ಚಿನ ತನಿಖೆಗೊಳಪಡಿಸಿದ್ದಾರೆ. ಇಂಟಲಿಜೆನ್ಸ್‌ ಬ್ಯೂರೋ ಹೆಸರಲಿನಲ್ಲಿ ಯಾರಿಗಾದರೂ ಮೋಸ ಮಾಡಿ, ಹಣ ಪಡೆದಿದ್ದನಾ ಎಂಬ ಎಲ್ಲ ಆಯಾಮದಲ್ಲೂ ತನಿಖೆ ನಡೆಸಲಾಗುತ್ತಿದೆ.

Exit mobile version