Site icon Vistara News

Karnataka Election 2023: ಪ್ರಿಯಾಂಕ್‌ ಖರ್ಗೆಯನ್ನು ಜಿರಳೆ ಎಂದ ಈಶ್ವರಪ್ಪ; ರಾಜ್ಯ ಜನರ ಕ್ಷಮೆ ಕೇಳಲು ಆಗ್ರಹ

Eshwarappa compares Priyank Kharge to a cockroach Karnataka Election 2023 updates

ಬೀದರ್: ಕೆಪಿಸಿಸಿ ಮಾಧ್ಯಮ ಸಂವಹನ ವಿಭಾಗದ ಮುಖ್ಯಸ್ಥ ಪ್ರಿಯಾಂಕ್ ಖರ್ಗೆ (Priyank Kharge) ಅವರನ್ನು ಶುಕ್ರವಾರವಷ್ಟೇ ತಿಗಣೆಗೆ ಹೋಲಿಸಿದ್ದ ಮಾಜಿ ಸಚಿವ ಕೆ.ಎಸ್.‌ ಈಶ್ವರಪ್ಪ (KS Eshwarappa) ಅವರು, ಈಗ ಪ್ರಿಯಾಂಕ್‌ ಒಂದು ಜಿರಳೆ ಎಂದು ಜರಿದಿದ್ದಾರೆ. ಇನ್ನೂ ಅವನಿಗೆ ಮೀಸೆ ಕೂಡಾ ಬಂದಿಲ್ಲ. ಇವನು ನಮ್ಮ ಪ್ರಧಾನಿ ನರೇಂದ್ರ ಮೋದಿ (PM Narendra Modi) ಅವರನ್ನು ನಾಲಾಯಕ್ ಎನ್ನುತ್ತಾನೆ ಎಂದು ಏಕವಚನದಲ್ಲಿಯೇ ವಾಗ್ದಾಳಿ ನಡೆಸಿದ್ದಾರೆ. ವಿಧಾನಸಭಾ ಚುನಾವಣೆ (Karnataka Election 2023) ಹಿನ್ನೆಲೆಯಲ್ಲಿ ನಾಯಕರ ವಾಕ್ಸಮರ ತಾರಕಕ್ಕೇರಿದೆ.

ಬೀದರ್‌ನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಕೆ.ಎಸ್. ಈಶ್ವರಪ್ಪ ಹೇಳಿಕೆ, ಪ್ರಧಾನಿ ನರೇಂದ್ರ ಮೋದಿಗೆ ಪ್ರಿಯಾಂಕ್ ಖರ್ಗೆ ನಾಲಾಯಕ್ ಎಂದು ಹೇಳಲು ಎಷ್ಟು ಧೈರ್ಯ ಎಂದು ಪ್ರಶ್ನೆ ಮಾಡಿದ್ದಾರೆ.

ಇದನ್ನೂ ಓದಿ: Karnataka Election 2023: ಮೇ 10ಕ್ಕೆ ಹಾಕಿ ಮತ; ಬೆಣ್ಣೆ ದೋಸೆ, ಮೈಸೂರ್ ಪಾಕ್ ಪೂರ್ತಿ ಉಚಿತ, ಸಿನಿಮಾ ಟಿಕೆಟ್ಟೂ ಖಚಿತ

ಪ್ರಿಯಾಂಕ್‌ ಖರ್ಗೆ ಎಷ್ಟರಮಟ್ಟಿಗೆ ಅಯೋಗ್ಯ ಇರಬೇಕು‌‌‌‌‌‌. ನರೇಂದ್ರ ಮೋದಿ ಎಲ್ಲಿ? ಪ್ರಿಯಾಂಕ್ ಖರ್ಗೆ ಎಲ್ಲಿ? ರಾಜ್ಯದ ಜನರ ಮುಂದೆ ಪ್ರಿಯಾಂಕ್‌ ಕ್ಷಮೆ ಕೇಳಬೇಕು. ಇಲ್ಲವಾದರೆ ಈ ಚುನಾವಣೆಯಲ್ಲಿ ಜನರು ಪ್ರಿಯಾಂಕ್‌ ಖರ್ಗೆಯ ಠೇವಣಿಯನ್ನು ಕಳೆಯುತ್ತಾರೆ ಎಂದು ಕಿಡಿಕಾರಿದರು.

ಹೆಣಕ್ಕೆ ಮೊತ್ತೊಂದು ಬಾರಿ ಗುಂಡು

ಕಾಂಗ್ರೆಸ್‌ ಪ್ರಣಾಳಿಕೆಯಲ್ಲಿ ಬಜರಂಗದಳ ಬ್ಯಾನ್ ಮಾಡುವ ವಿಚಾರವನ್ನು ಪ್ರಸ್ತಾಪ ಮಾಡಿದ್ದಾರೆ. ಬಜರಂಗದಳವನ್ನು ಪಿಎಫ್ಐಗೆ ಅವರು ಹೋಲಿಕೆ ಮಾಡುತ್ತಾರೆ. ಪಿಎಫ್ಐ ರಾಷ್ಟ್ರದ್ರೋಹ ಸಂಸ್ಥೆ ಎಂದು ಬ್ಯಾನ್ ಮಾಡಿದ್ದೇವೆ. ಈಗ ಅವರೂ ಅದನ್ನು ಬ್ಯಾನ್‌ ಮಾಡುತ್ತೇವೆ ಎಂದು ಹೇಳಿಕೊಂಡಿದ್ದಾರೆ. ಹೆಣಕ್ಕೆ ಮೊತ್ತೊಂದು ಬಾರಿ ಗುಂಡು ಹೊಡೆಯುತ್ತೇವೆ ಎಂದು ಹೇಳಿಕೊಳ್ಳುತ್ತಿದ್ದಾರೆ. ಬ್ಯಾನ್ ಆಗಿರುವ ಸಂಸ್ಥೆಯನ್ನು ಯಾರಾದರೂ ಬ್ಯಾನ್ ಮಾಡುತ್ತೇವೆ ಎಂದು ಹೇಳುತ್ತಾರಾ‌‌‌‌‌‌? ಕಾಮನ್ ಸೆನ್ಸ್ ಇಲ್ಲದೆ ಇರೋ ಪಕ್ಷವೆಂದರೆ ಅದು ಕಾಂಗ್ರೆಸ್ ಆಗಿದೆ. ಬಜರಂಗದಳವನ್ನು ಬ್ಯಾನ್ ಮಾಡಿ ಅಲ್ಪಸಂಖ್ಯಾತರನ್ನು ತೃಪ್ತಿಪಡಿಸುತ್ತೇವೆ ಎಂದು ಕಾಂಗ್ರೆಸ್ ಅಂದುಕೊಂಡಿದೆ ಎಂದು ಕೆ.ಎಸ್‌. ಈಶ್ವರಪ್ಪ ಕಿಡಿಕಾರಿದರು.

ದೇಶದಲ್ಲಿ ಎಲ್ಲಿದೆ ಕಾಂಗ್ರೆಸ್? ರಾಜ್ಯದಲ್ಲಿಯೂ ಕುಂಟುತ್ತಾ ಸಾಗಿದೆ‌.‌ ವರುಣದಲ್ಲಿ ನಾವು ಸಿದ್ದರಾಮಯ್ಯ ಅವರನ್ನು ಸೋಲಿಸುವುದಿಲ್ಲ. ಅವರೇ ಅಲ್ಲಿ ಸೋಲುವ ತೀರ್ಮಾನ ಮಾಡಿದ್ದಾರೆ. ಯಾಕೆ ಕೋಲಾರ, ಬಾದಾಮಿ, ಚಾಮುಂಡೇಶ್ವರಿಗೆ ಹೋಗಿಲ್ಲ? ಎಲ್ಲ ಕಡೆ ಸುತ್ತಿ ಕೊನೆಗೆ ವರುಣಕ್ಕೆ ಬಂದಿದ್ದಾರೆ. ಕಾರ್ಯಕರ್ತರಿಗೆ ಬೈದ ಲೀಡರ್‌ನಲ್ಲಿ ಸಿದ್ದರಾಮಯ್ಯ ಅವರು ರಾಜ್ಯದಲ್ಲೇ ಮೊದಲಿಗರಾಗಿದ್ದಾರೆ ಎಂದು ಕೆ.ಎಸ್.‌ ಈಶ್ವರಪ್ಪ ಹೇಳಿದರು.

ಇದನ್ನೂ ಓದಿ: Mallikarjun Kharge: ಖರ್ಗೆ ಮತ್ತವರ ಹೆಂಡತಿ ಮಕ್ಕಳ ಹತ್ಯೆಗೆ ಮಣಿಕಂಠ ರಾಠೋಡ್‌ ಸಂಚು; ಆಡಿಯೊ ಬಿಟ್ಟ ಕಾಂಗ್ರೆಸ್‌

ಬಿಜೆಪಿಯಲ್ಲಿ ಒಬ್ಬ ಹಿಂದು ರಾಜ್ಯದಲ್ಲಿ ಸಿಎಂ ಆಗುತ್ತಾರೆ

ಬಿಜೆಪಿಯಲ್ಲಿ ಲಿಂಗಾಯತರೋ? ಕುರುಬರೋ? ಒಟ್ಟಿನಲ್ಲಿ ಒಬ್ಬ ಹಿಂದು ರಾಜ್ಯದಲ್ಲಿ ಸಿಎಂ ಆಗುತ್ತಾರೆ. ಬಿಜೆಪಿ ಚಿತ್ರ ನಟರನ್ನು ಪ್ರಚಾರಕ್ಕೆ ಕರೆಸುತ್ತಾರೆ ಎಂದು ಕಾಂಗ್ರೆಸ್ ಹೇಳುತ್ತಿದೆ. ವರುಣದಲ್ಲಿ ರಮ್ಯಾ, ದುನಿಯಾ ವಿಜಿ, ಶಿವರಾಜ್‌ಕುಮಾರ್ ‌ಅವರ ಬಳಿ ಏಕೆ ಪ್ರಚಾರ ಮಾಡಿಸಿದ್ದಾರೆ. ಕರ್ನಾಟಕದಲ್ಲಿ ಬಿಜೆಪಿ ಗಾಳಿ ಜೋರು ಬೀಸುತ್ತಿದೆ ಎಂದು ಮಾಜಿ ಸಚಿವ ಕೆ.ಎಸ್. ಈಶ್ವರಪ್ಪ ಹೇಳಿದರು.

Exit mobile version