ಬೆಂಗಳೂರು: ಸುಮಾರು ಆರು ವರ್ಷಗಳ ಬಳಿಕ ಮಾಜಿ ಪ್ರಧಾನಿ ದೇವೇಗೌಡರ ನಿವಾಸಕ್ಕೆ ವಿಪಕ್ಷ ನಾಯಕ, ಮಾಜಿ ಸಿಎಂ ಸಿದ್ದರಾಮಯ್ಯ ಭೇಟಿ ನೀಡಿ ಯೋಗಕ್ಷೇಮ ವಿಚಾರಿಸಿದರು.
ಹಲವು ಬಾರಿ ದೇವೆಗೌಡರ ಜತೆ ಸಿದ್ದರಾಮಯ್ಯ ವೇದಿಕೆ ಹಂಚಿಕೊಂಡಿದ್ದಾರೆ. ಆದರೆ, ಆರು ವರ್ಷಗಳಿಂದ ದೇವೇಗೌಡ ಮನೆಗೆ ಸಿದ್ದರಾಮಯ್ಯ ಭೇಟಿ ನೀಡಿರಲಿಲ್ಲ. ಈಗ ಗುರು-ಶಿಷ್ಯರ ಸಮಾಗಮವಾಗಿದ್ದು, ದೇವೇಗೌಡರ ಆರೋಗ್ಯವನ್ನು ಸಿದ್ದರಾಮಯ್ಯ ವಿಚಾರಿಸಿದರು.
ಇದನ್ನೂ ಓದಿ | FDA ನೇಮಕಾತಿಗೆ ಡೀಲ್: ಮೈಸೂರಿನ ಟ್ರಾಫಿಕ್ ಇನ್ಸ್‌ಪೆಕ್ಟರ್ ಅಶ್ವಿನಿ ಅನಂತಪೂರ ಸಸ್ಪೆಂಡ್
ದೇವೆಗೌಡರ ಭೇಟಿ ಬಳಿಕ ಮಾತನಾಡಿದ ಸಿದ್ದರಾಮಯ್ಯ, ನಾನು ಸಿಎಂ ಆಗಿದ್ದಾಗ 2016ರಲ್ಲಿ ದೇವೇಗೌಡರ ನಿವಾಸಕ್ಕೆ ಬಂದಿದ್ದೆ. ದೇವೆಗೌಡರ ಆರೋಗ್ಯ ಚೆನ್ನಾಗಿಲ್ಲ ಎಂದು ತಿಳಿಯಿತು. ಹೀಗಾಗಿ ಅವರ ಆರೋಗ್ಯ ವಿಚಾರಿಸಿಕೊಂಡು ಹೋಗೋಣ ಎಂದು ಬಂದಿದ್ದೆ. ಸ್ವಲ್ಪ ಮಂಡಿ, ಕಾಲು ನೋವು ಇದೆ. ವಾಕರ್ ಸಹಾಯದಿಂದ ಓಡಾಡುತ್ತಿದ್ದೇನೆ ಎಂದು ಗೌಡರು ಹೇಳಿರುವುದಾಗಿ ತಿಳಿಸಿದರು.
ದೇವೇಗೌಡರಿಗೆ ಸ್ಮರಣ ಶಕ್ತಿ ಚೆನ್ನಾಗಿದೆ. ನಾವಿಬ್ಬರೂ ಗುರು – ಶಿಷ್ಯರು ಎನ್ನುವುದಕ್ಕಿಂತ ಅವರು ದೇಶದ ಹಿರಿಯ ರಾಜಕಾರಣಿ. ಪಕ್ಷವೇ ಬೇರೆ, ಮನುಷ್ಯತ್ವವೇ ಬೇರೆ. ಹೀಗಾಗಿ ಮನುಷ್ಯತ್ವದಿಂದ ನಾನು ಅವರನ್ನು ಭೇಟಿಯಾಗಿದ್ದೇನೆ. ರಾಜಕೀಯದ ಬಗ್ಗೆ ಯಾವುದೇ ಚರ್ಚೆ ಮಾಡಲಿಲ್ಲ ಎಂದು ತಿಳಿಸಿದರು. ಈ ವೇಳೆ ಶಾಸಕ ಜಮೀರ್ ಅಹ್ಮದ್ ಕೂಡ ಇದ್ದರು.
ಇದನ್ನೂ ಓದಿ | ಶಿವಕುಮಾರ್ English ಡೈಲಾಗ್ ಪುನರುಚ್ಚರಿಸಿದ ಸಿದ್ದರಾಮಯ್ಯ: ಮೈಸೂರಿನ ಮಾತು ವಿಧಾನಸಭೆಗೆ ಬಂತು!