Site icon Vistara News

ಮುರುಘಾಶ್ರೀ ಪ್ರಕರಣ | ಮುರುಘಾ ಮಠದ ಆಡಳಿತಾಧಿಕಾರಿ ಮಾಜಿ ಶಾಸಕ ಎಸ್‌.ಕೆ. ಬಸವರಾಜನ್‌ಗೆ ಗೇಟ್‌ಪಾಸ್‌!

ಬಸವರಾಜನ್‌

ಚಿತ್ರದುರ್ಗ: ಮುರುಘಾ ಮಠದ ಆಂತರಿಕ ತಿಕ್ಕಾಟ ಮತ್ತೊಂದು ಮಜಲು ಪಡೆದಿದ್ದು, ಆಡಳಿತಾಧಿಕಾರಿಯಾಗಿದ್ದ ಮಾಜಿ ಶಾಸಕ ಎಸ್‌.ಕೆ. ಬಸವರಾಜನ್‌ ಅವರಿಗೆ ಗೇಟ್‌ಪಾಸ್‌ (ಮುರುಘಾಶ್ರೀ ಪ್ರಕರಣ) ನೀಡಲಾಗಿದೆ. ಇದೀಗ ನೂತನ ಆಡಳಿತ ಮಂಡಳಿಯ ರಚನೆ ಮಾಡಲಾಗುತ್ತಿದೆ.

ಮುರುಘಾಮಠದ ಎಸ್‌ಜೆಎಂ ವಿದ್ಯಾಪೀಠದ ಕಾರ್ಯದರ್ಶಿಯಾಗಿ ನಿವೃತ್ತ ನ್ಯಾಯಾಧೀಶ ವಸ್ತ್ರಮಠ್ ಹಾಗೂ ಮುರುಘಾ ಶರಣರ ಆಪ್ತ ಸಹಾಯಕರಾಗಿ ಸಂಸದ ಸಿದ್ದೇಶ್ವರ್ ಪುತ್ರ ಅನಿತ್ ಕುಮಾರ್‌ ಅವರನ್ನು ಆಯ್ಕೆ ಮಾಡಲಾಗಿದೆ. ಮಠದಿಂದ ಅಧಿಕೃತ ಪ್ರಕಟಣೆಯೊಂದು ಬಾಕಿ ಇದೆ.

ಆಡಳಿತ ಸಮಿತಿ ಸಭೆಯಲ್ಲಿ ನೂತನ ಆಡಳಿತಾಧಿಕಾರಿ ನೇಮಿಸಲು‌ ಸಮ್ಮತಿ ಸಿಕ್ಕಿದ್ದು, ಮುರುಘಾ ಶರಣರು, ಎಂಎಲ್‌ಸಿ, ಆಡಳಿತ ಮಂಡಳಿ ಸದಸ್ಯ ನವೀನ್ ಭಾಗಿಯಾಗಿದ್ದಾರೆ. ಸಭೆಗೆ ಬಿಜೆಪಿ ಮುಖಂಡ ಎಸ್‌.ಲಿಂಗಮೂರ್ತಿ, ನಿವೃತ್ತ ನ್ಯಾಯಾಧೀಶ ವಸ್ತ್ರಮಠ್ ಹಾಗೂ ಸಂಸದ ಸಿದ್ದೇಶ್ವರ್ ಪುತ್ರ ಅನಿತ್ ಕುಮಾರ್ ಭಾಗಿಯಾಗಿದ್ದಾರೆ.

ಮಠದೊಂದಿಗೆ ಬಸವರಾಜನ್‌ ತಿಕ್ಕಾಟ

ಮುರುಘಾ ಶ್ರೀಗಳ ವಿರುದ್ಧ ಮಠದ ಹಾಸ್ಟೆಲ್‌ನಲ್ಲಿ ಆಶ್ರಯ ಪಡೆಯುತ್ತಿದ್ದ ಇಬ್ಬರು ವಿದ್ಯಾರ್ಥಿನಿಯರು ಮೈಸೂರಿನ ನಜರ್‌ಬಾದ್‌ ಪೊಲೀಸ್‌ ಠಾಣೆಯಲ್ಲಿ ಮುರುಘಾ ಶ್ರೀಗಳು, ಹಾಸ್ಟೆಲ್‌ ವಾರ್ಡನ್‌ ರಶ್ಮಿ ಸೇರಿದಂತೆ ಐವರ ವಿರುದ್ಧ ದೂರು ದಾಖಲಿಸಿದ್ದರು.

ಇದಕ್ಕೆ ಪ್ರತಿಯಾಗಿ ವಾರ್ಡನ್‌ ರಶ್ಮಿ ಅವರು ಮಠದ ಆಡಳಿತಾಧಿಕಾರಿ, ಮಾಜಿ ಶಾಸಕ ಎಸ್‌.ಕೆ. ಬಸವರಾಜ್‌ ವಿರುದ್ಧ ಅತ್ಯಾಚಾರ ಯತ್ನ ಮತ್ತು ಅವರ ಪತ್ನಿ, ಮಾಜಿ ಜಿಪಂ ಅಧ್ಯಕ್ಷೆ ಸೌಭಾಗ್ಯ ಅವರ ವಿರುದ್ಧ ಬ್ಲ್ಯಾಕ್‌ಮೇಲ್‌ ಪ್ರಕರಣ ದಾಖಲಿಸಿದ್ದರು. ಅಲ್ಲದೆ, ಮಠ ಹಾಗೂ ಬಸವರಾಜನ್‌ ನಡುವೆ ತಿಕ್ಕಾಟ ನಡೆಯುತ್ತಲೇ ಇತ್ತು ಎನ್ನಲಾಗಿದೆ. ಈ ಹಿನ್ನೆಲೆಯಲ್ಲಿ ಮುರುಘಾ ಸ್ವಾಮೀಜಿ ಹಾಗೂ ಆಡಳಿತ ಮಂಡಳಿ ನೇತೃತ್ವದಲ್ಲಿ ಗುರುವಾರ ಸಭೆ ನಡೆಸಿ, ಬಸವರಾಜನ್‌ ಅವರಿಗೆ ಗೇಟ್‌ ಪಾಸ್‌ ನೀಡಲಾಗಿದೆ.

ಇದನ್ನೂ ಓದಿ | ಮುರುಘಾಶ್ರೀ ಪ್ರಕರಣ | ಅತ್ಯಾಚಾರ ಯತ್ನ ಕೇಸಿನಲ್ಲಿ ಬಸವರಾಜ್‌ ದಂಪತಿಗೆ ನಿರೀಕ್ಷಣಾ ಜಾಮೀನು

Exit mobile version