ಮಂಗಳೂರು: ಬಹುಜನ ಚಳವಳಿ ನಾಯಕ ಪಿ. ಡೀಕಯ್ಯ ಅವರ ದಫನ್‌ಗೊಂಡ ಮೃತದೇಹವನ್ನು ಪೊಲೀಸರು ಹೊರ ತೆಗೆದಿದ್ದು, ಮರಣೋತ್ತರ ಪರೀಕ್ಷೆ ಮಾಡಿಸಲು ಕಳುಹಿಸಿದ್ದಾರೆ.
ದ.ಕ. ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಪದ್ಮುಂಜ ಗ್ರಾಮದ ಡೀಕಯ್ಯ ಅವರು ಶುಕ್ರವಾರ (ಜು.8) ಮನೆಯಲ್ಲಿ ಬಿದ್ದು ಮೆದುಳಿನ ರಕ್ತಸ್ರಾವದಿಂದ ಮೃತಪಟ್ಟಿದ್ದರು ಎನ್ನಲಾಗಿದೆ. ಬೆಳ್ತಂಗಡಿಯಲ್ಲಿ ಸಾರ್ವಜನಿಕ ದರ್ಶನದ ಬಳಿಕ ಪದ್ಮುಂಜದಲ್ಲಿ ದಫನ್ ಮಾಡಲಾಗಿತ್ತು.
ದಫನ್ ಆದ ವಾರದ ಬಳಿಕ ಮೃತರ ಸಾವಿನ ಬಗ್ಗೆ ಅನುಮಾನ ಬಂದ ಹಿನ್ನೆಲೆಯಲ್ಲಿ ಡೀಕಯ್ಯ ಅಕ್ಕನ ಗಂಡ ಪದ್ಮನಾಭ ಎಂಬುವರಿಂದ ಬೆಳ್ತಂಗಡಿ ಠಾಣೆಗೆ ದೂರು ನೀಡಿದ್ದರು. ಹೀಗಾಗಿ ಬೆಳ್ತಂಗಡಿ ತಹಸೀಲ್ದಾರ್ ಸಮ್ಮುಖದಲ್ಲಿ ಪೊಲೀಸರು ಮೃತದೇಹವನ್ನು ಹೊರಗೆ ತೆಗೆದಿದ್ದಾರೆ. ಮರಣೋತ್ತರ ಪರೀಕ್ಷೆ ವರದಿ ಬಳಿಕ ಸಾವಿಗೆ ನೈಜ ಕಾರಣ ತಿಳಿದುಬರಲಿದೆ.