ಬಾಗಲಕೋಟೆ: ಸಣ್ಣಪುಟ್ಟ ವ್ಯಾಪಾರಸ್ಥರಿಗೆ ಫೋನ್ ಮಾಡಿ ವಂಚಿಸುತ್ತಿದ್ದ, ಪೊಲೀಸರಿಗೆ ಆವಾಜ್ ಹಾಕುತ್ತಿದ್ದ ನಕಲಿ ಸಿಬಿಐ, ಡಿಸಿಪಿಯನ್ನು (Fake CBI Officer) ಪೊಲೀಸರು ಬಂಧಿಸಿರುವ ಘಟನೆ ಜಿಲ್ಲೆಯಲ್ಲಿ ನಡೆದಿದೆ. ಪೊಲೀಸರಿಗೆ ಆರೋಪಿ ಆವಾಜ್ ಹಾಕಿರುವ ಆಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಜಿಲ್ಲೆಯ ರಬಕವಿ ಬನಹಟ್ಟಿ ತಾಲೂಕಿನ ನಾವಲಗಿ ಗ್ರಾಮದ ನಿವಾಸಿ ಅಪ್ಪು ಬಸಯ್ಯ ಹಿರೇಮಠ ಆರೋಪಿ. ಪೊಲೀಸ್ ಇಲಾಖೆಗೆ ಸರ್ಕಾರ ಪೂರೈಸಿದ 948080 ಸರಣಿಯ ನಂಬರ್ ಮಾದರಿಯಲ್ಲೇ 9480802997 ಸಿಮ್ ಖರೀದಿಸಿದ್ದ ಆರೋಪಿ, ಹಲವು ಜಿಲ್ಲೆಗಳಲ್ಲಿ ಅನೇಕ ಮಂದಿಗೆ ಪೋನ್ ಮಾಡಿ ವಂಚನೆ ಮಾಡಿದ್ದಾನೆ. ಈ ಬಗ್ಗೆ ಶಿವಮೊಗ್ಗ, ಬೆಳಗಾವಿ, ಜಮಖಂಡಿಯಲ್ಲಿ ಕೇಸ್ ದಾಖಲಾಗಿದ್ದವು. ಆದಲೂ ಅರೆಸ್ಟ್ ಆಗಿ ಜಾಮೀನಿನ ಮೇಲೆ ಬಿಡುಗಡೆ ಆಗಿದ್ದ ಅಪ್ಪು ಹಿರೇಮಠ., ಮತ್ತೆ ಇದೀಗ ಹಳೆ ಚಾಳಿ ಮುಂದುವರಿಸಿ ಪೊಲೀಸರ ಅತಿಥಿಯಾಗಿದ್ದಾನೆ.
ತಾನು ಸಿಬಿಐ ಅಧಿಕಾರಿ, ಡಿಸಿಪಿ ಎಂದು ಸಣ್ಣಪುಟ್ಟ ವ್ಯಾಪಾರಸ್ಥರಿಗೆ ಫೋನ್ ಮಾಡಿ, ಬೆದರಿಸಿ ವಂಚಿಸುತ್ತಿದ್ದ ಆರೋಪದಲ್ಲಿ ಆರೋಪಿ ವಿರುದ್ಧ ಬನಹಟ್ಟಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಗೆ ವಾರ್ನಿಂಗ್ ನೋಟಿಸ್ ಕೊಟ್ಟು ವಿಚಾರಣೆಗೆ ಸಹಕರಿಸುವಂತೆ ಸೂಚಿಸಿ ಕಳುಹಿಸಿದ್ದಾರೆ.
ಇದನ್ನೂ ಓದಿ | Udupi News : ಇವನೆಂಥ ಅಪ್ಪ.. ಮಗಳ ಪ್ರೀತಿಗೆ ವಿರೋಧಿಸಿ ಅಶ್ಲೀಲ ವಿಡಿಯೊ ಹರಿಬಿಟ್ಟ ನೀಚ
ಲಾಂಗ್ ಡ್ರೈವ್ ಹೋದ ಯುವಕರಿಬ್ಬರು ಹಿಟ್ ಆ್ಯಂಡ್ ರನ್‌ಗೆ ಬಲಿ; ನಿಲ್ಲದ ನಿಶಾಚರಿಗಳ ಕಾಟ
ಬೆಂಗಳೂರು ಗ್ರಾಮಾಂತರ: ತಡರಾತ್ರಿ ಹೆದ್ದಾರಿಯಲ್ಲಿ ಹಿಟ್ ಆ್ಯಂಡ್ ರನ್‌ಗೆ (Hit and run) ಇಬ್ಬರು ಯುವಕರು ಬಲಿಯಾಗಿದ್ದಾರೆ. ಬೆಂಗಳೂರು ಗ್ರಾಮಾಂತರದ ಹೊಸಕೋಟೆ ದಾಬಸ್ ಪೇಟೆ ರಾಷ್ಟ್ರೀಯ ಹೆದ್ದಾರಿಯಲ್ಲಿ ಅಪಘಾತ (Road Accident) ನಡೆದಿದೆ. ಬೆಂಗಳೂರಿನ ಕೆಂಪಾಪುರ ಮೂಲದ ಸಿದ್ಧಾರ್ಥ್ (17) ಮತ್ತು ಹರ್ಷ (18) ಮೃತ ದುರ್ದೈವಿಗಳು.
ಇವರಿಬ್ಬರು ಸ್ನೇಹಿತರ ಜತೆಗೆ ಹುಟ್ಟುಹಬ್ಬ ಆಚರಿಸಲು ತಡರಾತ್ರಿ ಕಾರಿನಲ್ಲಿ ಲಾಂಗ್ ಡ್ರೈವ್ ಮೂಲಕ ಹೈವೇಗೆ ಬಂದಿದ್ದರು. ಈ ವೇಳೆ ಹೆದ್ದಾರಿಯಲ್ಲಿ ಅಪರಿಚಿತ ವಾಹನವೊಂದು ಕಾರಿಗೆ ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ಕಾರಿನ ಹಿಂಭಾಗ ಮುಂಭಾಗ ಸಂಪೂರ್ಣ ಜಖಂಗೊಂಡಿದೆ. ಈ ವೇಳೆ ಯುವಕರಿಬ್ಬರಿಗೂ ಗುದ್ದಿದೆ.
ಹಿಟ್ ಆ್ಯಂಡ್ ರನ್ ಮಾಡಿ ಹೋದ ವಾಹನಕ್ಕಾಗಿ ಪೊಲೀಸರಿಂದ ಶೋಧ ಮುಂದುವರಿದಿದೆ. ಸೂಲಿಬೆಲೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಈ ಸಂಬಂಧ ಪ್ರಕರಣ ದಾಖಲಾಗಿದೆ. ಯುವಕರಿಬ್ಬರ ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದೆ.
ಬೆಂಗಳೂರಲ್ಲಿ ನಿಲ್ಲದ ರೋಡ್ ರೇಜ್
ರಾತ್ರಿಯಾದರೆ ನಿಶಾಚರಿಗಳ ಕಾಟ ಶುರುವಾಗುತ್ತದೆ. ಕಾರು ಅಡ್ಡಗಟ್ಟುವ ಆಗಂತುಕರು ಬೆದರಿಕೆ ಹಾಕಲು ಮುಂದಾಗುತ್ತಿದ್ದಾರೆ. ದಿನೆದಿನೇ ಬೆಂಗಳೂರು ನಗರದಲ್ಲಿ ರೋಡ್ ರೇಜ್ ಪ್ರಕರಣಗಳು ಹೆಚ್ಚುತ್ತಿದೆ. ಸದ್ಯ ಬೆಂಗಳೂರಿನ ಬೇಗೂರು ಬಳಿಯ ವೆಸ್ಟೆಂಡ್ ಹೈಟ್ಸ್ ಅಪಾರ್ಟ್ಮೆಂಟ್ ಬಳಿ ಬೈಕ್‌ನಲ್ಲಿ ಬಂದಿದ್ದ ಸವಾರರಿಬ್ಬರು ಕಾರಿಗೆ ಅಡ್ಡಲಾಗಿ ನಿಲ್ಲಿಸಿ ಚಾಲಕನ ಮೇಲೆ ಹಲ್ಲೆಗೆ ಯತ್ನಿಸಿದ್ದಾರೆ. ಕಾರು ಚಲಾಯಿಸಿದರೂ ಬಿಡದೇ ಅಡ್ಡಗಟ್ಟಿ ಹಲ್ಲೆಗೆ ಯತ್ನಿಸಿದ್ದಾರೆ. ಪ್ರಭಾತ್ ಸಾಗರ್ ಎಂಬ ಕಾರು ಚಾಲಕ ಪೊಲೀಸರಿಗೆ ಟ್ಯಾಗ್ ಮಾಡಿ ದೂರು ನೀಡಿದ್ದಾರೆ.
ಇದನ್ನೂ ಓದಿ: Murder Case : ಸಪ್ಲೇಯರ್ ಸಿಟ್ಟಿಗೆ ಬಲಿಯಾದ ಹೋಟೆಲ್ ಮಾಲೀಕ
ಗನ್ ತೋರಿಸಿ ರೀಲ್ಸ್
ಪೊಲೀಸ್ ಆಕ್ಸಸರೀಸ್ ಎಂಬ ಇನ್ಸ್ಟ್ರಾಗ್ರಾಂ ಖಾತೆಯಲ್ಲಿ ವೆಪನ್ ತೋರಿಸಿ ರೀಲ್ಸ್ ಮಾಡಿರುವ ಘಟನೆ ನಡೆದಿದೆ. ಗನ್ ಶೋ ಮಾಡಿ ರೀಲ್ಸ್ ಮಾಡಲಾಗಿದೆ. ಪೊಲೀಸ್ ಕಾರ್ ಆಕ್ಸಸರೀಸ್ ಎಂಬುದು ಪೊಲೀಸರ ಅಧಿಕೃತ ಖಾತೆಯಲ್ಲ. ಆದರೂ ಪೊಲೀಸರಿಗೆ ಸಂಬಂಧಪಟ್ಟ ವಿಚಾರಗಳನ್ನು ಆಸಾಮಿಯೊಬ್ಬ ಹಂಚಿಕೊಂಡಿದ್ದಾನೆ. ಪೊಲೀಸ್ ಭದ್ರತೆ ದೃಷ್ಟಿಯಿಂದ ಇದೊಂದು ಮಾರಕ ಹಿನ್ನೆಲೆಯಲ್ಲಿ ಪೊಲೀಸ್ ವೆಬ್‌ಗೆ ಟ್ಯಾಗ್ ಮಾಡಿದ್ದು, ಇದರ ಬಗ್ಗೆ ಕ್ರಮ ಕೈಗೊಳ್ಳಲು ಮನವಿ ಮಾಡಲಾಗಿದೆ.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ