ಬಳ್ಳಾರಿ: ನಗರದಲ್ಲಿ ಖೋಟಾ ನೋಟು ಪ್ರಿಂಟ್ ಮಾಡುತ್ತಿದ್ದ ಇಬ್ಬರನ್ನು ಗಾಂಧಿನಗರ ಠಾಣೆ ಪೊಲೀಸರು ಬಂಧಿಸಿ, 100 ಮುಖಬೆಲೆಯ 77 ಖೋಟಾ ನೋಟ್‌ಗಳನ್ನು (Fake Currency) ವಶಕ್ಕೆ ಪಡೆದಿದ್ದಾರೆ. ನಗರದ ಮೋಹನ್ ಲಾಡ್ಜ್‌ನಲ್ಲಿ ಖೋಟಾ ನೋಟು ಪ್ರಿಂಟ್ ಮಾಡುತ್ತಿದ್ದಾಗ ಆರೋಪಿಗಳು ಸಿಕ್ಕಿಬಿದ್ದಿದ್ದಾರೆ.
ಬಿಸಿಲಹಳ್ಳಿಯ ಹರೀಶ್ ಮತ್ತು ಅಶೋಕ್ ಬಂಧಿತರು. ಕೆಲ ದಿನಗಳಿಂದ ಕಲರ್ ಪ್ರಿಂಟ್ ಮಷಿನ್ ಮೂಲಕ ಆರೋಪಿಗಳು ನೋಟು ಪ್ರಿಂಟ್ ಮಾಡುತ್ತಿದ್ದರು. ಖೋಟಾ ನೋಟುಗಳನ್ನು ಎಲ್ಲಿಯೂ ಚಲಾವಣೆ ಮಾಡಿಲ್ಲ ಎಂದು ತಿಳಿದುಬಂದಿದೆ. ಬಂಧಿತ ಆರೋಪಿಗಳ ಪೈಕಿ ಒಬ್ಬ ಮದ್ಯವ್ಯಸನಿಯಾಗಿದ್ದು, ಹಣದ ಅಭಾವದಿಂದಾಗಿ ಖೋಟಾ ನೋಟ್ ಪ್ರಿಂಟ್ ಮಾಡುತ್ತಿದ್ದ ಎನ್ನಲಾಗಿದೆ. ಗಾಂಧಿನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ | Self Harming: ಇಬ್ಬರು ಮಕ್ಕಳನ್ನು ಕೊಂದಿದ್ದ ತಾಯಿ ಜೈಲಲ್ಲೇ ಆತ್ಮಹತ್ಯೆ!
ಅಬಕಾರಿ ನಿಯಮ ಉಲ್ಲಂಘನೆ; ಬಾಗಲಕೋಟೆಯಲ್ಲಿ 59 ಲಕ್ಷ ಮೌಲ್ಯದ ಮದ್ಯ ಜಪ್ತಿ
ಬಾಗಲಕೋಟೆ: ಕ್ಷೇತ್ರದಲ್ಲಿ ಅಬಕಾರಿ ಇಲಾಖೆ ಅಧಿಕಾರಿಗಳ ಭರ್ಜರಿ ಕಾರ್ಯಾಚರಣೆ ನಡೆಸಿದ್ದಾರೆ. ಚುನಾವಣಾ ನೀತಿ ಸಂಹಿತೆ ಹಾಗೂ ಅಬಕಾರಿ ನಿಯಮ ಉಲ್ಲಂಘನೆ ಮಾಡಿದ್ದರಿಂದ ಲಾರಿಯಲ್ಲಿ ಸಾಗಸುತ್ತಿದ್ದ ಒಟ್ಟು 59 ಲಕ್ಷ ರೂ. ಮೌಲ್ಯದ 14,688 ಲೀಟರ್ ಮದ್ಯ ಜಪ್ತಿ ಮಾಡಲಾಗಿದೆ.
ಬಾಗಲಕೋಟೆ ಮತಕ್ಷೇತ್ರ ವ್ಯಾಪ್ತಿಯಲ್ಲಿ ಖಚಿತ ಮಾಹಿತಿ ಮೇರೆಗೆ ಅಬಕಾರಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಮದ್ಯ, ಬಿಯರ್ ಸಾಗಿಸುವ ವಾಹನಗಳಿಗೆ ಜಿ.ಪಿ.ಎಸ್ ಉಪಕರಣ ಅಳವಡಿಸದ ಕಾರಣ ಕೆ.ಎಸ್.ಬಿ.ಸಿ.ಎಲ್ ಡಿಪೋದಲ್ಲಿ ವಾಹನ ಸಮೇತ ಮದ್ಯವನ್ನು ವಶಕ್ಕೆ ಪಡೆಯಲಾಗಿದೆ. ಅದರಲ್ಲಿ 90 ಎಂ.ಎಲ್‌ನ ವಿಸ್ಕಿ ಬಾಟಲ್‌ಗಳಿರುವ 1700 ಬಾಕ್ಸ್ ಸಾಗಿಸಲಾಗುತ್ತಿತ್ತು. ಈ ಸಂಬಂಧ ಅಬಕಾರಿ ಅಧಿಕಾರಿಗಳು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಇನ್ನು ಜಮಖಂಡಿ ವಲಯ ವ್ಯಾಪ್ತಿಯಲ್ಲಿ ದ್ವಿಚಕ್ರ ವಾಹನದಲ್ಲಿ ಸಾಗಿಸುತ್ತಿದ್ದ 17.28 ಲೀಟರ್ ಮದ್ಯ ಜಪ್ತಿ ಮಾಡಲಾಗಿದೆ. ಜಮಖಂಡಿ ವ್ಯಾಪ್ತಿಯ ನಾವಲಗಿ-ಬೆಳಗಲಿ ರಸ್ತೆಯಲ್ಲಿ ಕಾರ್ಯಾಚರಣೆ ನಡೆದಿದ್ದು, 87,682 ರೂ.ಗಳ ಮೌಲ್ಯದ ಮದ್ಯ ವಶಕ್ಕೆ ಪಡೆಯಲಾಗಿದೆ.