Site icon Vistara News

Congress Guarantee: ಫ್ರೀ ಕರೆಂಟ್‌ ನನಗೂ ಸಿಗುತ್ತಾ? ಅರ್ಜಿ ಸಲ್ಲಿಕೆ ಹೇಗೆ? ಬಾಡಿಗೆದಾರರಿಗೂ ಇದೆಯೆ?: ನಿಮ್ಮ 26 ಪ್ರಶ್ನೆಗಳಿಗೆ ಇಲ್ಲಿದೆ ಉತ್ತರ

faq about congress guarantee free electricity scheme

#image_title

ಬೆಂಗಳೂರು: ಮಾಸಿಕ 200 ಯುನಿಟ್‌ ಉಚಿತ ವಿದ್ಯುತ್‌ ಯೋಜನೆಗೆ ಚಾಲನೆ ನೀಡಲು ಈಗಾಗಲೆ ಕರ್ನಾಟಕ ಸರ್ಕಾರ ಆರಂಭಿಸಿದೆ. ಈ ನಡುವೆ ಸರ್ಕಾರ ಹೊರಡಿಸಿದ ಆದೇಶದ ನಂತರ ಮತ್ತಷ್ಟು ಗೊಂದಲಗಳು ಏರ್ಪಟ್ಟಿವೆ. ಈ ಕುರಿತು ಸಚಿವರು ಸಾಕಷ್ಟು ಸ್ಪಷ್ಟನೆ ನೀಡಿದರೂ ಗೊಂದಲಗಳು ಉಳಿದಿವೆ. ಸಾಮಾನ್ಯವಾಗಿ ಜನರಲ್ಲಿ ಕೇಳಿಬರುವ 26 ಪ್ರಶ್ನೆಗಳಿಗೆ ರಾಜ್ಯ ಸರ್ಕಾರ ಉತ್ತರ ನೀಡಿದೆ.

  1. ನಾನು ಈ ಯೋಜನೆಗೆ ಅರ್ಹನೇ?
    ಉತ್ತರ: ಕರ್ನಾಟಕ ರಾಜ್ಯದ ಎಲ್ಲ ಗೃಹಬಳಕೆ ವಿದ್ಯುತ್‌ ಬಳಕೆ ಗ್ರಾಹಕರು ಈ ಯೋಜನೆಗೆ ಅರ್ಹರು.
  2. ಈ ಯೋಜನೆ ಏನು?
    ಉತ್ತರ: “ಗೃಹ ಜ್ಯೋತಿ”ಯು ಸರ್ಕಾರದ ಪ್ರಮುಖ ಕಾರ್ಯಕ್ರಮವಾಗಿದೆ. ಗೃಹಬಳಕೆ ವಿದ್ಯುತ್‌ ಬಳಕೆಗಾರರಿಗೆ 200 ಯುನಿಟ್‌ವರೆಗೆ ಉಚಿತ ವಿದ್ಯುತ್‌ ನೀಡುವ ಯೋಜನೆ ಇದು.
  3. ಈ ಯೋಜನೆಯನ್ನು ಪಡೆಯಲು ನಾನು ಏನು ಮಾಡಬೇಕು?
    ಉತ್ತರ: ಸೇವಾ ಸಿಂದು ವೆಬ್‌ಸೈಟ್‌ನಲ್ಲಿ ನೋಂದಾಯಿಸಿಕೊಳ್ಳಬೇಕು (ಡೆಸ್ಕ್‌ಟಾಪ್/ಲ್ಯಾಪ್‌ಟಾಪ್/ಸ್ಮಾರ್ಟ್ ಫೋನ್ ಮೂಲಕ). ಶೀಘ್ರದಲ್ಲೆ ಅದರ ಲಿಂಕ್ ಅನ್ನು ಹಂಚಿಕೊಳ್ಳಲಾಗುತ್ತದೆ. ನೋಂದಣಿ ಜೂನ್-15 ರಿಂದ ಪ್ರಾರಂಭವಾಗುತ್ತದೆ
  4. ಈ ಯೋಜನೆಯನ್ನು ಯಾವಾಗಿನಿಂದ ಜಾರಿಗೆ ತರಲಾಗುತ್ತದೆ?
    ಉತ್ತರ: ಯೋಜನೆಯು 2023ರ ಆಗಸ್ಟ್‌ 1ರ ನಂತರದಮೀಟರ್ ಓದುವ ದಿನಾಂಕದಿಂದ ಅನ್ವಯಿಸುತ್ತದೆ.(ಜುಲೈ-2023ರ ವಿದ್ಯುತ್‌ ಬಳಕೆಗಾಗಿ)
  5. ಈ ಯೋಜನೆಗೆ ನಾನು ಎಲ್ಲಿ ಅರ್ಜಿ ಸಲ್ಲಿಸಬೇಕು?
    ಉತ್ತರ: ಸೇವಾ ಸಿಂದು ವೆಬ್‌ಸೈಟ್‌ನಲ್ಲಿ ಯೋಜನೆಗೆ ಅರ್ಜಿ ಸಲ್ಲಿಸಬೇಕು. ಈ ಕುರಿತ ಲಿಂಕ್‌ ಶೀಘ್ರದಲ್ಲೇ ಹಂಚಿಕೊಳ್ಳಲಾಗುವುದು. ಜೂನ್‌ 15ರಿಂದ ನೋಂದಣಿ ಪ್ರಾರಂಭವಾಗುತ್ತದೆ.
  6. ನಾನು ಈ ಯೋಜನೆಗೆ ಆಫ್‌ಲೈನ್‌ನಲ್ಲಿಯೂ ಅರ್ಜಿ ಸಲ್ಲಿಸಬಹುದೇ?
    ಉತ್ತರ: ಹೌದು. ನಾಗರಿಕರು ಅಸಿಸ್ಟೆಡ್ ಮೋಡ್ ಮೂಲಕ ಅರ್ಜಿ ಸಲ್ಲಿಸಬಹುದು. ಗ್ರಾಮ ಒನ್, ಕರ್ನಾಟಕ ಒನ್, ಬೆಂಗಳೂರು ಒನ್ ಕೇಂದ್ರಗಳಲ್ಲಿ ಲಭ್ಯವಿದೆ
  7. ಈ ಯೋಜನೆಯ ಅಡಿಯಲ್ಲಿ ಅರ್ಜಿ ಸಲ್ಲಿಸಲು ಯಾವ ಎಲ್ಲಾ ದಾಖಲೆಗಳ ಅಗತ್ಯವಿದೆ?
    ಉತ್ತರ: ಆಧಾರ್, ಯಾವುದೇ ತಿಂಗಳ ವಿದ್ಯುತ್ ಬಿಲ್‌ನಲ್ಲಿ ನಮೂದಾಗಿರುವ ವಿದ್ಯುತ್‌ ಗ್ರಾಹಕ ID/ಖಾತೆ IDಯ ವಿವರಗಳು. ನೀವು ಬಾಡಿಗೆದಾರರಾಗಿದ್ದರೆ ಬಾಡಿಗೆ ಅಥವಾ ಲೀಜ್‌ ಕರಾರುಪತ್ರವನ್ನು ನೀಡಬೇಕು ಅಥವಾ ಸ್ಥಳದ ವಿಳಾಸ ದೃಢೀಕರಣಕ್ಕಾಗಿ ಮತದಾರರ ಗುರುತಿನ ಚೀಟಿ ನೀಡಬಹುದು.
  8. ಅರ್ಜಿ ಸಲ್ಲಿಸುವಾಗ ನಾನು ಯಾವುದೇ ಶುಲ್ಕವನ್ನು ಪಾವತಿಸಬೇಕೇ?
    ಉತ್ತರ: ಸೇವಾ ಸಿಂಧು ವೆಬ್‌ಸೈಟ್‌ನಲ್ಲಿ ನೋಂದಾಯಿಸುವಾಗ ಯಾವುದೇ ಶುಲ್ಕವನ್ನು ಪಾವತಿಸಬೇಕಾಗಿಲ್ಲ.
  9. ನಾನು ಜೂನ್ ತಿಂಗಳ ವಿದ್ಯುತ್ ಬಿಲ್ ಅನ್ನು ಪಾವತಿಸಬೇಕೇ?
    ಉತ್ತರ: ಯೋಜನೆಯು 2023ರ ಆಗಸ್ಟ್‌ 1ರ ನಂತರದಮೀಟರ್ ಓದುವ ದಿನಾಂಕದಿಂದ ಅನ್ವಯಿಸುತ್ತದೆ.(ಜುಲೈ-2023ರ ವಿದ್ಯುತ್‌ ಬಳಕೆಗಾಗಿ)
  10. ನಾನು ಒಂದಕ್ಕಿಂತ ಹೆಚ್ಚು ವಿದ್ಯುತ್ ಮೀಟರ್‌ಗಳನ್ನು ಪಡೆದುಕೊಂಡಿದ್ದೇನೆ, ನಾನು ಎಲ್ಲದಕ್ಕೂ ಅರ್ಹನಾಗಿದ್ದೇನೆಯೇ?
    ಉತ್ತರ: ಇಲ್ಲ. ಪ್ರತಿ ಮನೆಗೆ ಒಂದು ಮೀಟರ್ ಮಾತ್ರ ಅರ್ಹವಾಗಿರುತ್ತದೆ.
  11. ಅರ್ಜಿ ಸಲ್ಲಿಸಿದ ನಂತರ ನಾನು ಯಾವುದೇ ಸ್ವೀಕೃತಿಯನ್ನು ಪಡೆಯುತ್ತೇನೆಯೇ?
    ಉತ್ತರ: ಸೇವಾ ಸಿಂಧುವಿನಿಂದ ಇಮೇಲ್/SMS ಮೂಲಕ ನೋಂದಾಯಿತ ಗ್ರಾಹಕರಿಗೆ ಸ್ವೀಕೃತಿ ಸಂದೇಶವನ್ನು ಕಳುಹಿಸಲಾಗುತ್ತದೆ.
  12. ನಾನು ಈಗಾಗಲೇ ಈ ಯೋಜನೆಗೆ ಅರ್ಜಿ ಸಲ್ಲಿಸಿದ್ದೇನೆ, ಪ್ರಯೋಜನ ಯಾವಾಗ ಪ್ರಾರಂಭವಾಗುತ್ತದೆ?
    ಉತ್ತರ: ಜುಲೈ-2023 ರಲ್ಲಿ ನೀಡಿದ ಬಿಲ್ ಅನ್ನು ಸಬ್ಸಿಡಿ ಇಲ್ಲದೆ ಪಾವತಿಸಬೇಕಾಗುತ್ತದೆ. ಯೋಜನೆಯು 2023ರ ಆಗಸ್ಟ್‌ 1ರ ನಂತರದಮೀಟರ್ ಓದುವ ದಿನಾಂಕದಿಂದ ಅನ್ವಯಿಸುತ್ತದೆ.(ಜುಲೈ-2023ರ ವಿದ್ಯುತ್‌ ಬಳಕೆಗಾಗಿ)
  13. ನನ್ನದು ಅಪಾರ್ಟ್ಮೆಂಟ್. ನಾನು ಈ ಯೋಜನೆಗೆ ಅರ್ಜಿ ಸಲ್ಲಿಸಬಹುದೇ?
    ಉತ್ತರ: ಹೌದು. ಪ್ರತ್ಯೇಕ ವಿದ್ಯುತ್ ಮೀಟರ್‌ಗಳು ಲಭ್ಯವಿದ್ದರೆ/ಸ್ಥಾಪಿಸಿದ್ದರೆ ಅರ್ಜಿ ಸಲ್ಲಿಸಬಹುದು.
  14. ನಾನು ಒಬ್ಬ ಬಾಡಿಗೆದಾರ; ಬಿಲ್ ಮಾಲೀಕರ ಹೆಸರಿನಲ್ಲಿದೆ, ನನಗೂ ಸಿಗುತ್ತದೆಯೇ ಲಾಭ?
    ಉತ್ತರ: ಹೌದು. ಆವರಣದ ವಿಳಾಸವನ್ನು ತೋರಿಸುವ ಒಪ್ಪಂದ ಅಥವಾ ವೋಟರ್ ಐಡಿ ಪುರಾವೆಯಾಗಿದ್ದರೆ ಹಾಗೂ ಆಧಾರ್‌ ಸಂಖೈಏ ಣೀಡಿದರೆ ಬಾಡಿಗೆ ಅಥವಾ ಲೀಜ್‌ನಲ್ಲಿರುವವರೂ ಪ್ರಯೋಜನವನ್ನು ಪಡೆಯಬಹುದು.
  15. ಬಾಡಿಗೆದಾರನಾಗಿ ನಾನು ನೋಂದಾಯಿಸಲು ಸಲ್ಲಿಸಬೇಕಾದ ಎಲ್ಲಾ ದಾಖಲೆಗಳು ಯಾವುವು?
    ಉತ್ತರ: ಬಾಡಿಗೆದಾರರು ಬಾಡಿಗೆ ಅಥವಾ ಲೀಜ್‌ ವಿಳಾಸ ಪುರಾವೆಯೊಂದಿಗೆ ನೋಂದಾಯಿಸಿಕೊಳ್ಳಬಹುದು. ಆಧಾರ್‌ ಮಾಹಿತಿಯನ್ನು ಒದಗಿಸಬೇಕು.
  16. ನಾನು 2 ತಿಂಗಳ ಹಿಂದೆ ಮನೆಯನ್ನು ಬದಲಾಯಿಸಿದ್ದೇನೆ, ನನಗೆ ಲಾಭ ಸಿಗುತ್ತದೆಯೇ?
    ಉತ್ತರ: ಹೌದು. ಹೊಸ ಸಂಪರ್ಕಕ್ಕಾಗಿ ನೀತಿಯನ್ನು ಪ್ರಕಟಿಸಲಾಗುವುದು.
  17. ನಾನು ಅಂಗಡಿಯ ಮಾಲೀಕರಾಗಿದ್ದೇನೆ, ನನ್ನ ವಾಣಿಜ್ಯ ವಿದ್ಯುತ್‌ ಸಂಪರ್ಕಕ್ಕೆ ನಾನು ಸಹ ಅರ್ಜಿ ಸಲ್ಲಿಸಬಹುದೇ?
    ಉತ್ತರ: ಇಲ್ಲ. ಗೃಹಬಳಕೆ ಪ್ರಯೋಜನಕ್ಕಾಗಿ ಮನೆಗಳಿಗೆ ಮಾತ್ರ ಯೋಜನೆಯನ್ನು ರೂಪಿಸಲಾಗಿದೆ.
  18. ನಾನು ಎಷ್ಟು ಉಚಿತ ಯನಿಟ್ ವಿದ್ಯುತ್‌ಗೆ ಅರ್ಹನಾಗುತ್ತೇನೆ? ತಿಂಗಳಿಗೆ 200 ಯುನಿಟ್‌ವರೆಗೆ ಬಳಸಿದರೆ ನಾನು ಅರ್ಹನಾಗುತ್ತೇನೆಯೇ?
    ಉತ್ತರ: ಸರಾಸರಿ ಬಳಕೆಯ ಆಧಾರದ ಮೇಲೆ ಲಾಭವನ್ನು ಲೆಕ್ಕಹಾಕಲಾಗುತ್ತದೆ. 2022-23ಋ ಆರ್ಥಿಕ ವರ್ಷದಲ್ಲಿ ಬಳಸಿದ ಒಟ್ಟು ವಿದ್ಯುತ್‌ ಸರಾಸರಿ + 10% ಹೆಚ್ಚಳದವರೆಗೆ ಹಾಗೂ ಗರಿಷ್ಠ 200 ಯುನಿಟ್‌ವರೆಗೆ ಅನ್ವಯವಾಗುತ್ತದೆ.
  19. ನನ್ನ ಖಾತೆ ಐಡಿಯನ್ನು ನಾನು ಎಲ್ಲಿ ಹುಡುಕಬೇಕು?
    ಉತ್ತರ: ಇದು ಯಾವುದೇ ತಿಂಗಳ ವಿದ್ಯುತ್ ಬಿಲ್‌ನಲ್ಲಿ ಲಭ್ಯವಿದೆ.
  20. ಯೋಜನೆಯ ಲಾಭ ಪಡೆಯಲು ಪಡೆಯಲು ಖಾತೆ ಐಡಿಯೊಂದಿಗೆ ಆಧಾರ್ ಅನ್ನು ಲಿಂಕ್ ಮಾಡುವುದು ಕಡ್ಡಾಯವಾಗಿದೆಯೇ?
    ಉತ್ತರ: ಹೌದು. ಗ್ರಾಹಕ ಐಡಿ/ಖಾತೆಯೊಂದಿಗೆ ಆಧಾರ್ ಲಿಂಕ್ ಮಾಡುವುದು ಕಡ್ಡಾಯವಾಗಿದೆ.
  21. ನನ್ನ ಆಧಾರ್ ಕರ್ನಾಟಕದ ಹೊರಗೆ ನೋಂದಾಯಿಸಲ್ಪಟ್ಟಿದೆ? ನಾನು ಯೋಜನೆಗೆ ಅರ್ಹನಾಗುತ್ತೇನೆಯೇ?
    ಉತ್ತರ: ಹೌದು. ನೀವು ಕರ್ನಾಟಕದ ಯಾವುದೇ ವಿಳಾಸದಲ್ಲಿ ವಾಸಿಸುತ್ತಿದ್ದರೆ ಹಾಗೂ ಅದಕ್ಕೆ ದಾಖಲೆ ನೀಡಿದರೆ ಅರ್ಹರಾಗುತ್ತೀರಿ.
  22. ನಾನು ಬಾಕಿಯನ್ನು ಹೊಂದಿದ್ದರೆ ಏನು? ನಾನು ಯೋಜನೆಗೆ ಅರ್ಹನಾಗುತ್ತೇನೆಯೇ?
    ಉತ್ತರ: ಹೌದು. ಆದರೆ, ಜೂನ್ 30ರವರೆಗಿನ ಬಾಕಿಯನ್ನು 3ರೊಳಗೆ ಪಾವತಿಸಬೇಕು. ಮೂರು ತಿಂಗಳಿಗಿಂತ ವಿಳಂಬವಾದರೆ ಸಂಪರ್ಕವನ್ನು ಕಡಿತಗೊಳಿಸಲಾಗುತ್ತದೆ.
  23. ಯೋಜನೆಗೆ ಅರ್ಜಿ ಸಲ್ಲಿಸಿದ ನಂತರ, ನಾನು ನಿಗದಿತ ಯುನಿಟ್‌ಗಿಂತ ಹೆಚ್ಚು ಬಳಕೆ ಮಾಡಿದರೆ ಬಿಲ್ ಪಾವತಿಸಬೇಕಾಗುತ್ತದೆ. ನಾನು ಈ ಬಿಲ್‌ ಮೊತ್ತವನ್ನು ಪಾವತಿಸದೆ ಬಾಕಿ ಉಳಿಸಿಕೊಂಡರೆ ನಾನು ಯೋಜನೆಯಲ್ಲಿ ಮುಂದುವರಿಯುತ್ತೇನೆಯೇ?
    ಉತ್ತರ: ಬಾಕಿ ಪಾವತಿಸದಿದ್ದರೆ ವಿದ್ಯುತ್ ಸಂಪರ್ಕ ಕಡಿತಗೊಳಿಸಲಾಗುವುದು. ಒಮ್ಮೆ ಬಾಕಿಯನ್ನು ತೀರಿಸಿದ ನಂತರ ನಂತರ ಯೋಜನೆಯ ಪ್ರಯೋಜನಗಳನ್ನು ಪಡೆಯಬಹುದು.
  24. ಬಿಲ್ ನನ್ನ ದಿವಂಗತ ತಂದೆಯ ಹೆಸರಿನಲ್ಲಿದೆ. ಇದಕ್ಕಾಗಿ ನಾನು ಹೇಗೆ ಅರ್ಜಿ ಸಲ್ಲಿಸಬಹುದು?
    ಉತ್ತರ: ಸಂಪರ್ಕವನ್ನು ನಿಮ್ಮ ಹೆಸರಿಗೆ ವರ್ಗಾಯಿಸಬೇಕು ಮತ್ತು ಅರ್ಜಿ ಸಲ್ಲಿಸಬೇಕು. ಹೆಸರಿನ ಬದಲಾವಣೆಯನ್ನು ಎಲ್ಲ ಉಪ ವಿಭಾಗಗಳಲ್ಲಿರುವ ಜನ ಸ್ನೇಹಿ ವಿದ್ಯುತ್ ಕೇಂದ್ರಗಳಲ್ಲಿ ಹಾಗೂ ಮಾಡಲಾಗುತ್ತದೆ.
  25. ನನ್ನ ಮಾಸಿಕ ಬಳಕೆಯು 200 ಯೂನಿಟ್‌ಗಳಿಗಿಂತ ಹೆಚ್ಚಿದ್ದರೆ? ನಾನು ಪೂರ್ತಿ ಬಿಲ್‌ ಪಾವತಿ ಮಾಡಬೇಕೆ?
    ಉತ್ತರ: ಹೌದು. ಆ ನಿರ್ದಿಷ್ಟ ತಿಂಗಳಿಗೆ ಮಾತ್ರ ನೀವು ಸಂಪೂರ್ಣ ಬಿಲ್‌ ಪಾವತಿಸಬೇಕಾಗುತ್ತದೆ.
  26. ನನ್ನ ಬಳಕೆಯು ಉಚಿತ ಯುನಿಟ್‌ಗಳಿಗಿಂತ ಕಡಿಮೆಯಿದ್ದರೆ ಬಿಲ್ ಮೊತ್ತ ಏನಾಗುತ್ತದೆ?
    ಉತ್ತರ: ಬಳಕೆಯು ಅರ್ಹ ಯುನಿಟ್‌ಗಳಿಗಿಂತ ಕಡಿಮೆಯಿದ್ದರೆ ನಿಮಗೆ ʼಶೂನ್ಯ ಪಾವತಿ ಬಿಲ್’ ಬರುತ್ತದೆ.
Exit mobile version