Site icon Vistara News

Farm Act: ಮೋದಿ ಸರ್ಕಾರ ಜಾರಿ ಮಾಡಿದ್ದ ಕೃಷಿ ಕಾಯ್ದೆ ರಾಜ್ಯದಲ್ಲೂ ವಾಪಸ್‌: ʼನುಡಿದಂತೆ ನಡೆದʼ ಕಾಂಗ್ರೆಸ್‌ ಸರ್ಕಾರ!

Agriculture market AI Image

ಬೆಂಗಳೂರು: ಕಾಂಗ್ರೆಸ್‌ ಪಕ್ಷವು ಚುನಾವಣೆಗೂ ಮುನ್ನ ಅನೇಕ ಸಂದರ್ಭದಲ್ಲಿ ಹಾಗೂ ಪ್ರಣಾಳಿಕೆಯಲ್ಲಿ ತಿಳಿಸಿದಂತೆ ಕೃಷಿ ಕಾಯ್ದೆಗಳು (Farm Act) ಎಂದೇ ಪ್ರಸಿದ್ಧವಾದ ಎಪಿಎಂಸಿ ಕಾಯ್ದೆಯ ತಿದ್ದುಪಡಿಯನ್ನು ಹಿಂಪಡೆದಿದೆ. ಕೇಂದ್ರದ ನರೇಂದ್ರ ಮೋದಿ ನೇತೃಥ್ವದ ಎನ್‌ಡಿಎ ಸರ್ಕಾರ ಜಾರಿಗೆ ತಂದು ಹಿಂಡೆದ ಕಾಯ್ದೆಗಳನ್ನು ಕರ್ನಾಟಕದಲ್ಲಿ ಬಿಜೆಪಿ ಸರ್ಕಾರ ಮುಂದುವರಿಸಿತ್ತು.

ಈ ಸಂದರ್ಭದಲ್ಲಿ ಮಾತನಾಡಿದ ಮಾಜಿ ಸಚಿವ ಎಸ್. ಟಿ. ಸೋಮಶೇಖರ್, ಎಪಿಎಂಸಿ ಲಾಸ್ ಇರುವ ಸಂದರ್ಭದಲ್ಲಿ ಸರ್ಕಾರ ಸ್ಯಾಲರಿ ಕೊಡುತ್ತದೆ. ಹಿಂದೆ ಇದ್ದ ಸೆಸ್ ನಾವು ತೆಗೆದುಹಾಕಿದ್ದೆವು. ಯಾವುದೇ ಚರ್ಚೆ ಇಲ್ಲದೆ ಕಾಯ್ದೆ ಬದಲಾವಣೆ ಮಾಡುತ್ತಿದ್ದೀರ. ಸರ್ಕಾರ ಇನ್ನೂ ಆರು ತಿಂಗಳು ಇದರ ಬಗ್ಗೆ ಸ್ಟಡಿ ಮಾಡಬೇಕಿತ್ತು. ರೈತ ಮುಖಂಡರ‌ಸಭೆ ಮಾಡಬೇಕಿತ್ತು. ಏಕಾಏಕಿ ತಿದ್ದುಪಡಿ ತಂದಿದ್ದೀರ. ಇದು ರೈತ ವಿರೋಧಿ ಸರ್ಕಾರ ಎಂದರು.

ಸೋಮಶೇಖರ್ ವಿರುದ್ಧ ಕಾಂಗ್ರೆಸ್ ಶಾಸಕರ ಆಕ್ರೋಶ ವ್ಯಕ್ತಪಡಿಸಿದ್ದರಿಂದ ಸದನದಲ್ಲಿ ಗದ್ದಲ ಉಂಟಾಯಿತು. ಕಾಂಗ್ರೆಸ್-ಬಿಜೆಪಿ ಶಾಸಕರು ಏಕ ವಚನದಲ್ಲಿ ಬೈದಾಡಿಕೊಂಡರು.

ಕಾಂಗ್ರೆಸ್‌ ಶಾಸಕ ಶಿವಲಿಂಗೇಗೌಡ ಮಾತನಾಡಿ, ಮಾರುಕಟ್ಟೆ ಹೊರಗೆ ಮಾರಿದರೆ ಸೆಸ್ ಇಲ್ಲ, ಮಾರುಕಟ್ಟೆ ಒಳಗೆ ಖರೀದಿ ಮಾಡಿದರೆ ಸೆಸ್‌ ಹಾಕುತ್ತಾರೆ. ಹೊರಗಡೆ ಖರೀದಿ ಮಾಡಲಿ ಅಂತ ಈ ಕಾನೂನು ತಂದರು. ಎಪಿಎಂಸಿಗೆ ಮಾಲು ಬರದಿದ್ದರೆ ರೈತರಿಗೆ ಸಾಲ ಕೊಡುವವರು ಯಾರು? ಇದನ್ನ ನಾವು ಅರ್ಥ ಮಾಡಿಕೊಳ್ಳಬೇಕು. ಈ ಕಾನೂನಿಂದ ಎಪಿಎಂಸಿ ಕಾಯಿದೆ ದುರ್ಬಲಗೊಳಿಸುವ ಹುನ್ನಾರ ಇತ್ತು. ಆವರ್ತ ನಿಧಿ ಸಂಗ್ರಹ ಮಾಡಿ. ಇದು ರೈತನ ಭವಿಷ್ಯ ರೂಪಿಸಲು ಅಗತ್ಯವಾಗಿದೆ ಎಂದು ಸರ್ಕಾರಕ್ಕೆ ಮನವಿ ಮಾಡಿದರು.

ಇದನ್ನೂ ಓದಿ: Farm Bills: ಮೋದಿ ಸರ್ಕಾರದ 3 ಕೃಷಿ ಕಾಯ್ದೆ ವಾಪಸ್‌: ಇವುಗಳಿಂದ ದಲ್ಲಾಳಿಗಳಿಗೇ ಲಾಭ ಎಂದ ರಾಜ್ಯ ಸರ್ಕಾರ

ಪ್ರತಿಪಕ್ಷಗಳ ಗದ್ದಲದ ನಡುವೆಯೇ ಎಪಿಎಂಸಿ ನಿಯಂತ್ರಣ ಮತ್ತು ಅಭಿವೃದ್ಧಿ ತಿದ್ದುಪಡಿ ವಿಧೇಯಕಕ್ಕೆ ಅಂಗೀಕಾರ ನೀಡಲಾಯಿತು. ಜೆಡಿಎಸ್ ಹಾಗೂ ಬಿಜೆಪಿ ಸದಸ್ಯರು ಇದನ್ನು ವಿರೋಧಿಸಿ ಸಭಾಧ್ಯಕ್ಷರ ಎದುರು ತೆರಳಿ ಪ್ರತಿಭಟಿಸಿದರು. ಅಲ್ಲೇ ಧರಣಿ ಮುಂದುವರಿಸಿದ್ದರಿಂದ ಸದನವನ್ನ ಹತ್ತು ನಿಮಿಷಗಳ ಕಾಲ ಮುಂದೂಡಿಕೆ ಮಾಡಲಾಯಿತು.

Exit mobile version