ಧಾರವಾಡ: ತಾಲೂಕಿನ ಮಾದನಬಾವಿ ಗ್ರಾಮದಲ್ಲಿ ಮನೆ ಹಾನಿ ಪರಿಹಾರ ಕಡಿಮೆ ಬಂದ ಹಿನ್ನೆಲೆಯಲ್ಲಿ ನೇಣು ಹಾಕಿಕೊಂಡು ರೈತರೊಬ್ಬರು ಆತ್ಮಹತ್ಯೆ (Suicide) ಮಾಡಿಕೊಂಡಿದ್ದಾರೆ.
ಭೀಮಪ್ಪ ಪಾಟೀಲ್ (74) ಆತ್ಮಹತ್ಯೆಗೆ ಶರಣಾದ ರೈತ. ಇವರ ಮನೆ ಕುಸಿದಾಗ ಮೊದಲಿಗೆ ಪರಿಹಾರ ಹಣ ನೀಡಲು ರೈತನ ಹೆಸರನ್ನು ಜಿಲ್ಲಾಡಳಿತ ಬಿ ಕೆಟಗರಿಗೆ ಹಾಕಿತ್ತು. ಆದರೆ, ಮತ್ತೆ ನೋಡಲ್ ಅಧಿಕಾರಿ ಸ್ಥಳಪರಿಶೀಲನೆ ನಡೆಸಿ ಸಿ ಕೆಟಗರಿಗೆ ಸೇರ್ಪಡೆ ಮಾಡಿದ್ದರು. ಇದರಿಂದ ಮನನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಪರಿಹಾರ ಧನ ಕಡಿಮೆ ನೀಡಿದ್ದರಿಂದ ರೈತ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಆರೋಪಿಸಿ ಧಾರವಾಡ ಜಿಲ್ಲಾ ಆಸ್ಪತ್ರೆ ಶವಾಗಾರ ಬಳಿ ಗ್ರಾಮಸ್ಥರು ಪ್ರತಿಭಟನೆ ನಡೆಸಿ, ತಹಸೀಲ್ದಾರ್ ಸಂತೋಷ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ | Cracker Car | ಕಾರಿನ ಮೇಲೆ ಪಟಾಕಿ ಹಚ್ಚಿಕೊಂಡು ಪೇಟೆ ಸವಾರಿ, ಮಣಿಪಾಲದ ಸೆಲೂನ್ ಉದ್ಯೋಗಿ ಅರೆಸ್ಟ್