Site icon Vistara News

Elephant attack: ಹುಣಸೂರಿನಲ್ಲಿ ಕಾಡಾನೆ ದಾಳಿಗೆ ರೈತ ಬಲಿ

Farmer killed in wild elephant attack in Hunsur

ಮೈಸೂರು: ಮೈಸೂರಿನಲ್ಲಿ ಮಾನವ ಕಾಡು ಪ್ರಾಣಿ ಸಂಘರ್ಷ ಮುಂದುವರಿದೆ. ಹುಣಸೂರು ತಾಲೂಕಿನ ಮುದಗನೂರು ಗ್ರಾಮದಲ್ಲಿ ಕಾಡಾನೆಯೊಂದು ದಾಳಿ (Elephant attack) ನಡೆಸಿದ್ದು, ರೈತರೊಬ್ಬರು ಬಲಿಯಾಗಿದ್ದಾರೆ.

ಚಲುವಯ್ಯ (65) ಮೃತ ರೈತ ಎಂದು ಗುರುತಿಸಲಾಗಿದೆ. ಜಮೀನಿನಲ್ಲಿ ರಾಗಿ ಕಟಾವು ಮಾಡುತ್ತಿದ್ದಾಗ ಕಾಡಾನೆ ದಾಳಿ ಮಾಡಿದೆ ಎಂದು ಹೇಳಲಾಗಿದೆ. ಕಾಡಾನೆ ದಾಳಿಯಿಂದ ಸ್ಥಳದಲ್ಲೇ ರೈತ ಚಲುವಯ್ಯ ಮೃತಪಟ್ಟಿದ್ದಾರೆ.

ನಿರಂತರ ಕಾಡು ಪ್ರಾಣಿ ಹಾವಳಿಯಿಂದ ರೈತರಲ್ಲಿ ಆತಂಕ ಹೆಚ್ಚಾಗಿದೆ. ಶಾಶ್ವತ ಪರಿಹಾರಕ್ಕಾಗಿ ಗ್ರಾಮಸ್ಥರು, ರೈತರ ಒತ್ತಾಯ ಮಾಡಿದ್ದಾರೆ. ಕಾಡಾನೆಗಳ ಸಹಿತ ಕಾಡು ಪ್ರಾಣಿಗಳ ಹಾವಳಿಯಿಂದ ಮನೆಯಿಂದ ಹೊರಗೆ ಬರಲು ಭಯವಾಗುತ್ತಿದೆ. ಅರಣ್ಯ ಇಲಾಖೆ ಈ ಬಗ್ಗೆ ಸೂಕ್ತ ಕ್ರಮ ಕೈಗೊಂಡು ನಮ್ಮೆಲ್ಲರ ರಕ್ಷಣೆಗೆ ಬರಬೇಕು.

ಜೀವ ಹೋದ ಮೇಲೆ ಬಂದು ಏನು ಹೇಳಿದರೂ, ಪರಿಹಾರ ಕೊಟ್ಟರೂ ಹೋದ ಜೀವ ಮರಳಿ ಬಾರದು. ಹೀಗಾಗಿ ಪ್ರಾಣಿಗಳ ದಾಳಿಯಿಂದ ರಕ್ಷಣೆ ನೀಡಲು ಶಾಶ್ವತ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ. ಸ್ಥಳಕ್ಕೆ ಅರಣ್ಯ ಇಲಾಖೆ ಅಧಿಕಾರಿಗಳು, ಸಿಬ್ಬಂದಿ ದೌಡಾಯಿಸಿದ್ದಾರೆ.

Elephant Death: ಕೇರಳಕ್ಕೆ ನುಗ್ಗಿ ದಾಂಧಲೆ ಮಾಡಿದ್ದ ಗಜರಾಜ ಬಂಡೀಪುರದ ಆನೆ ಶಿಬಿರದಲ್ಲಿ ಸಾವು

ಚಾಮರಾಜನಗರ: ಕೇರಳಕ್ಕೆ ನುಗ್ಗಿ ದಾಂಧಲೆ ಮಾಡಿ ಸೆರೆ ಸಿಕ್ಕಿದ್ದ ಆನೆ ಬಂಡೀಪುರದ ರಾಮಾಪುರ ಆನೆ ಶಿಬಿರದಲ್ಲಿ (Ramapura Elephant Camp in Bandipur) ಮೃತಪಟ್ಟಿದೆ. ಇದಕ್ಕೆ ಪರಿಸರವಾದಿಗಳು ತೀವ್ರ ಬೇಸರವನ್ನು ಹೊರಹಾಕಿದ್ದಾರೆ. ಆನೆ ಸಾವಿಗೆ (Elephant Death) ಅರಣ್ಯ ಇಲಾಖೆ ಅಧಿಕಾರಿಗಳು, ಸಿಬ್ಬಂದಿಯ ನಿರ್ಲಕ್ಷ್ಯವೇ ಕಾರಣ ಎಂದು ಆರೋಪಿಸಿದ್ದಾರೆ.

ಮೈಸೂರು ಜಿಲ್ಲೆ ಸರಗೂರು ತಾಲೂಕಿನ ವ್ಯಾಪ್ತಿಯಲ್ಲಿರುವ ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದಲ್ಲಿನ ರಾಮಾಪುರ ಆನೆ ಶಿಬಿರದಲ್ಲಿ ಮೃತಪಟ್ಟಿದೆ. ಹಾಸನದ ಬೇಲೂರು ಸಮೀಪ ಸೆರೆ ಹಿಡಿದು ಬಂಡೀಪುರ ಅರಣ್ಯಕ್ಕೆ ಈ ಆನೆಯನ್ನು ಬಿಡಲಾಗಿತ್ತು. ಕೊನೆಗೆ ಅದೇ ಆನೆಯನ್ನು ಪುನಃ ಬಂಡೀಪುರದ ರಾಮಾಪುರ ಅನೆ ಶಿಬಿರಕ್ಕೆ ಕರೆತಂದು ಬಿಡಲಾಗಿತ್ತು. ಇದೀಗ ಆನೆ ಸವಾಗಿದ್ದು, ಆನೆ ಸಾವಿಗೆ ನಿಖರ ಕಾರಣ ತಿಳಿದು ಬಂದಿಲ್ಲ.

Elephant Death in Bandipur camp

ಇದನ್ನೂ ಓದಿ: Unidentified body: DNA ಪರೀಕ್ಷೆಗಾಗಿ 4 ವರ್ಷದ ಹಿಂದೆ ಹೂತಿದ್ದ ಶವ ಹೊರಕ್ಕೆ! ಸತ್ತ ಮಹಿಳೆ ಯಾರು?

ಅರಣ್ಯಾಧಿಕಾರಿಗಳ ನಿರ್ಲಕ್ಷ್ಯ ಆರೋಪ

ಆನೆ ಸಾವಿಗೆ ಪರಿಸರವಾದಿ ಜೋಷೆಫ್ ಹುವರ್‌ ಅವರು ಬೇಸರ ವ್ಯಕ್ತಪಡಿಸಿದ್ದಾರೆ. ಅರಣ್ಯ ಅಧಿಕಾರಿಗಳ ನಿರ್ಲಕ್ಷ್ಯದಿಂದ ಆನೆ ಮೃತಪಟ್ಟಿದೆ ಎಂದು ಆರೋಪಿಸಿದ್ದಾರೆ.

ಕೇರಳ ನುಗ್ಗಿ ದಾಂಧಲೆ ಮಾಡಿದ್ದ ಆನೆ

ಹಾಸನದಲ್ಲಿ ಸೆರೆ ಹಿಡಿದು ರೇಡಿಯೋ ಕಾಲರ್ ಅಳವಡಿಸಿ ಬಂಡೀಪುರಕ್ಕೆ ಅರಣ್ಯಕ್ಕೆ ಈ ಆನೆಯನ್ನು ಬಿಡಲಾಗಿತ್ತು. ಆದರೆ, ಈ ಆನೆಯು ಪಕ್ಕದ ಕೇರಳದ ವಯನಾಡು ವ್ಯಾಪ್ತಿಯ ಮಾನಂದವಾಡಿ ಪಟ್ಟಣದ ಜನನಿಬಿಡ ಪ್ರದೇಶಕ್ಕೆ ಈ ನುಗ್ಗಿತ್ತು. ಆಗ ಕೇರಳದ ಅರಣ್ಯ ಇಲಾಖೆ ಸಿಬ್ಬಂದಿ ಆನೆ ಸೆರೆ ಕಾರ್ಯಾಚರಣೆಯನ್ನು ಪ್ರಾರಂಭ ಮಾಡಿದರು. ಈ ಆನೆಯನ್ನು ಹಿಂಬಾಲಿಸಿಕೊಂಡು ಬಂದರು. ಕ್ಷಿಪ್ರ ಕಾರ್ಯಾಚರಣೆ ನಡೆಸಿ ಆನೆಗೆ ಡಾಟಿಂಗ್ ಮಾಡಿ ಸೆರೆ ಹಿಡಿದಿದ್ದರು.

ಬಳಿಕ ಬಂಡೀಪುರದ ರಾಮಾಪುರ ಆನೆ ಶಿಬಿರಕ್ಕೆ ಲಾರಿಯಲ್ಲಿ ಕರೆತಂದಿದ್ದ ಕೇರಳದ ಅರಣ್ಯ ಸಿಬ್ಬಂದಿ ಅಲ್ಲಿಯೇ ಬಿಟ್ಟಿದ್ದರು. ಶುಕ್ರವಾರ ರಾತ್ರಿ ಲಾರಿ ನಿಲ್ಲಿಸುತ್ತಿದ್ದಂತೆ ಕುಸಿದು ಬಿದ್ದು ಆನೆ ಮೃತಪಟ್ಟಿದೆ ಎಂದು ಅರಣ್ಯ ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಈ ಆನೆಗೆ ತಣ್ಣೀರ್ ಕೊಂಬನ್ ಎಂದು ಕರೆಯಲಾಗುತ್ತಿತ್ತು ಎನ್ನಲಾಗಿದೆ.

ಇದನ್ನೂ ಓದಿ: Karnataka Weather: ಫೆಬ್ರವರಿ ಮೊದಲ ವಾರ ಚಳಿ ಹೇಗೆ? ಹವಾಮಾನ ತಜ್ಞರು ಹೇಳೋದೇನು?

ಇಂದು ಮರಣೋತ್ತರ ಪರೀಕ್ಷೆ

ಶನಿವಾರ ಮರಣೋತ್ತರ ಪರೀಕ್ಷೆಯನ್ನು ನಡೆಸಲಾಗುತ್ತಿದ್ದು, ಪರೀಕ್ಷೆ ಬಳಿಕ ಆನೆ ಸಾವಿಗೆ ನಿಖರ ಕಾರಣ ಗೊತ್ತಾಗಲಿದೆ. ಅರಿವಳಿಕೆ ಮದ್ದು ನೀಡಿದ್ದು ಹೆಚ್ಚಾಗಿದೆಯೇ? ಅಥವಾ ಬೇರೆ ಯಾವುದಾದರೂ ಕಾರಣಕ್ಕೆ ಆನೆ ಮೃತಪಟ್ಟಿದೆಯೇ ಎಂಬುದು ಪೋಸ್ಟ್‌ ಮಾರ್ಟಮ್‌ ರಿಪೋರ್ಟ್‌ ಬಂದ ಬಳಿಕವೇ ಗೊತ್ತಾಗಬೇಕಿದೆ.

Exit mobile version