Site icon Vistara News

ಮಾಜಿ ಶಾಸಕನ ಕಾರು ಡಿಕ್ಕಿಯಾಗಿ ರೈತನಿಗೆ ಗಂಭೀರ ಗಾಯ

ಮಾಜಿ ಶಾಸಕನ ಕಾರು

ಮಂಡ್ಯ: ನಾಗಮಂಗಲದ ತೊಳಲಿ ಗ್ರಾಮದ ಬಳಿ ಬಿಜೆಪಿ ಮಾಜಿ ಶಾಸಕನ ಕಾರು ಡಿಕ್ಕಿಯಾಗಿ ರೈತ ಗಾಯಗೊಂಡಿದ್ದಾನೆ. ಆದಿಚುಂಚನಗಿರಿಯಿಂದ ಮೈಸೂರು ಕಡೆಗೆ ತೆರಳುತ್ತಿದ್ದಾಗ ತುಮಕೂರು ಗ್ರಾಮಾಂತರ ಮಾಜಿ ಶಾಸಕ ಸುರೇಶ್‌ಗೌಡ ಅವರ ಕಾರು ಡಿಕ್ಕಿಯಾಗಿ ಅಪಘಾತ ಸಂಭವಿಸಿದೆ.

ಸುರೇಶ್‌ ಎಂಬ ರೈತ ಬೈಕ್‌ನಲ್ಲಿ ಹುಲ್ಲು ಹೇರಿಕೊಂಡು ದಿಢೀರನೇ ರಸ್ತೆಗೆ ಬಂದಿದ್ದರಿಂದ ಮಾಜಿ ಶಾಸಕನ ಕಾರು ಡಿಕ್ಕಿಹೊಡೆದಿದೆ. ಅಪಘಾತದಲ್ಲಿ ರೈತನ ಬೆನ್ನುಮೂಳೆ ಹಾಗೂ ಕಾಲಿಗೆ ಗಂಭೀರಗಾಯಗಳಾಗಿದೆ. ಆತನನ್ನು ಬೇರೊಂದು ಕಾರಿನಲ್ಲಿ ಮಾಜಿ ಶಾಸಕ ಆಸ್ಪತ್ರೆಗೆ ಸೇರಿಸಿದ್ದಾರೆ. ರಸ್ತೆಯಲ್ಲಿ ರೈತ ಬೈಕಿನಲ್ಲಿ ಅಡ್ಡಬಂದ ತಕ್ಷಣ ಕಾರು ಚಾಲಕ ಬ್ರೇಕ್‌ ಹಾಕಿದ. ಈ ಸಮಯದಲ್ಲಿ ಕಾರಿನ ಟಯರ್‌ಗಳನ್ನು ಬ್ಲಾಸ್ಟ್‌ ಆಗಿವೆ. ಬಿಜಿಎಸ್‌ ಆಸ್ಪತ್ರೆಯಲ್ಲಿ ರೈತನಿಗೆ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ. ನಾಗಮಂಗಲ ಗ್ರಾಮಾಂತರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಇದನ್ನೂ ಓದಿ | Accident | ಬೆಳಗಾವಿಯಲ್ಲಿ ಭೀಕರ ಅಪಘಾತ, ಕ್ರೂಸರ್‌ ಪಲ್ಟಿಯಾಗಿ 7 ಜನ ಸಾವು, ಹಲವರ ಸ್ಥಿತಿ ಗಂಭೀರ

Exit mobile version