Site icon Vistara News

Farmers problem : ಸೇವಂತಿಗೆ ಹೂವಿನ ದರ ಕುಸಿತ ಹಿನ್ನೆಲೆ; ಟ್ರ್ಯಾಕ್ಟರ್‌ ಓಡಿಸಿ ಬೆಳೆಯನ್ನೇ ನಾಶ ಮಾಡಿದ ಹತಾಶ ರೈತ

Sevanthige price down

ಮಂಡ್ಯ: ರೈತರ ಬದುಕು ಎಷ್ಟು ಅನಿಶ್ಚಿತ (Life is uncertain for farmers) ಎನ್ನುವುದಕ್ಕೆ ನಮ್ಮ ಮುಂದೆ ಹಲವು ಉದಾಹರಣೆಗಳು ಎದ್ದು ನಿಲ್ಲುತ್ತವೆ. ಮೊನ್ನೆ ಮೊನ್ನೆಯಷ್ಟೆ ಒಂದು ಕೆಜಿ ಟೊಮ್ಯಾಟೊವನ್ನು 200 ರೂಪಾಯಿಗೆ (Tomato price) ಮಾರಿದ ರೈತ ಎನ್ನುವ ಸುದ್ದಿಯನ್ನು (Farmers problem) ಓದಿರುತ್ತೇವೆ. ಆದರೆ, ಈಗ. ಎರಡು ರೂಪಾಯಿಗೂ ಕೇಳುವವರಿಲ್ಲ! ಹಲವು ತರಕಾರಿ, ಹೂವು, ಹಣ್ಣುಗಳ ಕಥೆ ಇಷ್ಟೇ

ಈಗ ಸೇವಂತಿಗೆ ಹೂವಿನ (Sevanthige flower) ಸರದಿ. ಒಮ್ಮೊಮ್ಮೆ ಕೇಜಿಗೆ 200 ರೂ.ವರೆಗೆ ಏರುವ ಸೇವಂತಿಗೆ ಈಗ 20 ರೂ.ಗೆ ಕೊಟ್ಟರೂ ಬೇಡ. ಅಷ್ಟು ಇಳಿದಿದೆ ದರ. ಒಂದು ಕೆಜಿ ಸೇವಂತಿಗೆಯನ್ನು ಬೆಳೆಯಲು ರೈತರು ಎಷ್ಟು ಕಷ್ಟಪಟ್ಟಿರುತ್ತಾರೆ ಎನ್ನುವುದು ಅವರಿಗೇ ಗೊತ್ತು. ಹೊಲ ಹದ ಮಾಡಿ, ಬೀಜ ಹಾಕಿ, ಬೆಳೆದು, ಬರುವ ಕ್ರಿಮಿಕೀಟಗಳನ್ನು ನಿಯಂತ್ರಿಸಿ, ನೀರುಣಿಸಿ ಕೊನೆಗೆ ಹೂವು ಬೆಳೆದಾಗ ಬೆಲೆ ಇಲ್ಲ ಎಂದರೆ ಎಂಥವರ ಹೃದಯವೂ ಚೂರಾಗುವುದು ನಿಶ್ಚಿತವೇ. ಈ ದರ ಈಗ ಎಷ್ಟು ಕಡಿಮೆಯಾಗಿದೆ ಎಂದು ರೈತರ (Sevanthige grower) ಕೈಯಿಂದ ಐದು-ಹತ್ತು ರೂ.ಗೂ ಖರೀದಿಸುವವರಿಲ್ಲ.

Sevanthige destroyed

ಸೇವಂತಿಗೆಯಂಥ ಹೂವನ್ನು ಅದು ಹಾಳಾಗದಂತೆ ಕೊಯ್ದು ಜೋಪಾನ ಮಾಡಿ ಮಾರುಕಟ್ಟೆಗೆ ತಲುಪಿಸುವುದು ಕೂಡ ಒಂದು ಸಾಹಸವೇ. ಅದಕ್ಕೇ ಸಾಕಷ್ಟು ಖರ್ಚು ತಗಲುತ್ತದೆ. ಹಾಗೆ‌ ಹೂವು ಕೊಯ್ಯಲು ಖರ್ಚು ಮಾಡಿದ ಹಣವೂ ವಾಸ್ ಬರುವುದಿಲ್ಲ ಎಂಬ ಸ್ಥಿತಿಯಲ್ಲಿ ರೈತರು ಏನು ಮಾಡಬಹುದು?

ಬೆಳೆದ ಹೂವನ್ನು ಸ್ವತಃ ನಾಶ ಮಾಡಿದ ರೈತ.!

ಹೌದು ತನೇ ಪ್ರೀತಿಯಿಂದ ಬೆಳೆದ, ಅತ್ಯಂತ ಮನೋಹರವಾಗಿ ಬೆಳೆದು ನಿಂತ ಹೂವಿನ ಗದ್ದೆಯ ಬೆಳೆಯನ್ನೇ ಇಲ್ಲೊಬ್ಬ ರೈತರು ನಾಶ ಮಾಡಿದ್ದಾರೆ.

Sevanthige destroyed

ಮಂಡ್ಯ ಜಿಲ್ಲೆ ಪಾಂಡವಪುರ ತಾಲೂಕಿನ ಕಂಚನಹಳ್ಳಿ ರೈತ ಯೋಗರಾಜ್‌ ಎಂಬವರೇ ಹೀಗೆ ಬೆಳೆಯನ್ನು ನಾಶ ಮಾಡಿದವರು. ಪಾಂಡವಪುರ ಮತ್ತು ಕೆ.ಆರ್.ಪೇಟೆ ಭಾಗದಲ್ಲಿ ಹೂ ಕೃಷಿ ಮಾಡಿದ ರೈತ ಕುಟುಂಬ ಈಗ ಬೆಲೆ ಇಲ್ಲದೆ ಕಂಗಾಲಾಗಿದೆ.

ಇದನ್ನೂ ಓದಿ: Farmers Suicide: 10 ವರ್ಷದಲ್ಲಿ 7,398 ರೈತರ ಆತ್ಮಹತ್ಯೆ; ದಿನಕ್ಕಿಬ್ಬರ ಸಾವು: ಮೂರೂ ಪಕ್ಷದ ಅವಧಿಯಲ್ಲಿ ನೀಗಲಿಲ್ಲ ಅನ್ನದಾತನ ಬವಣೆ

ಸೇವಂತಿ ಹೂ ಬೆಳೆದು ಬೀದಿಗೆ ಬಿದ್ದ ಹೂವು ಬೆಳೆಗಾರ ಈ ಸೇವಂತಿ ಹೂವಿನ‌ದರ ಕುಸಿತ ಕಂಗಾಲಾಗಿ ಬೆಳೆದ ಹೂವಿನ ಬೆಳೆ ನಾಶ ಮಾಡಿದ್ದಾರೆ.

Sevanthige destroyed

ಇದು ಇವರೊಬ್ಬರ ಕಥೆಯಲ್ಲ ಹೂ ಕೀಳಿಸಿದ ಕೂಲಿಯೂ ಸಿಗದ ಕಾರಣಕ್ಕೆ ಹಲವಾರು ರೈತರು ಹೂವಿನ ಬೆಳೆ ನಾಶ ಮಾಡಿದ್ದಾರೆ. ಹೂವು ಕಿತ್ತು ಮಾರುಕಟ್ಟೆಗೆ ಹಾಕಿ ಮತ್ತಷ್ಟು ಲಾಸ್‌ ಆಗುವ ಬದಲು ಭೂಮಿಗೇ ಗೊಬ್ಬರವಾಗಲಿ ಎಂದು ಅವರು ಆಲೋಚಿಸುತ್ತಿದ್ದಾರೆ.

Exit mobile version