Site icon Vistara News

Murder Case: ಸುಪಾರಿ ಕೊಟ್ಟು ಹೆತ್ತ ಮಗನನ್ನೇ ಕೊಲೆಗೈದ ತಂದೆ; ಸುಣ್ಣದ ಡಬ್ಬಿಯಲ್ಲಿತ್ತು ಹಂತಕನ ನಂಬರ್‌!

Sangamesh marutheppa tigadi

ಬೆಳಗಾವಿ: ಹೆತ್ತಪ್ಪನೇ ಸುಪಾರಿ ಕೊಟ್ಟು ಮಗನನ್ನು ಕೊಲೆ ಮಾಡಿಸಿರುವ ಘಟನೆ ಜಿಲ್ಲೆಯ ಬೈಲಹೊಂಗಲ ತಾಲೂಕಿನ ಕುಟರನಟ್ಟಿಯಲ್ಲಿ ನಡೆದಿದೆ. ಕುಡಿದು ಮನೆಯಲ್ಲಿ ಗಲಾಟೆ ಮಾಡುತ್ತಿದ್ದ ಹಿನ್ನೆಲೆಯಲ್ಲಿ ಹೆತ್ತ ಮಗನನ್ನೇ ತಂದೆ ಕೊಲೆ ಮಾಡಿಸಿದ್ದು, ಪ್ರಕರಣದಲ್ಲಿ (Murder Case) ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.

ಸಂಗಮೇಶ ಮಾರುತೆಪ್ಪ ತಿಗಡಿ (38) ಕೊಲೆಯಾದ ವ್ಯಕ್ತಿ. ಮಾರುತೆಪ್ಪ ತಿಗಡಿ ಮಗನ ಕೊಲೆಗೆ ಸುಫಾರಿ ಕೊಟ್ಟ ಅಪ್ಪ. ಕಳೆದ ಕೆಲವು ವರ್ಷಗಳಿಂದ ಕುಡಿದು ಮನೆಯಲ್ಲಿ ಸಂಗಮೇಶ ಗಲಾಟೆ ಮಾಡುತ್ತಿದ್ದ. ಹೀಗಾಗಿ ಮಗನ ನಡೆಯಿಂದ ಬೇಸತ್ತು ಹೋಗಿದ್ದ ತಂದೆ ಮಾರುತೆಪ್ಪ, ಸಂಗಮೇಶ ಕೊಲ್ಲಲೆಂದು ಮನೆಕೆಲಸ ಮಾಡಿಕೊಂಡಿದ್ದ ಮಂಜುನಾಥ್‌ಗೆ ಸುಪಾರಿ ಕೊಟ್ಟಿದ್ದ.

ಆರೋಪಿಗಳಾದ ಮಂಜುನಾಥ ಮತ್ತು ಅಡಿವೆಪ್ಪ ಬೋಳೆತ್ತಿನ್

ಸಂಗಮೇಶನಿಗೆ ಮಂಜುನಾಥ ಹಾಗೂ ಆತನ ಸ್ನೇಹಿತ ಅಡಿವೆಪ್ಪ ಬೋಳೆತ್ತಿನ್ ಕಂಠಪೂರ್ತಿ ಕುಡಿಸಿ ಕೊಲೆ ಮಾಡಿ ಶವ ಬಿಸಾಡಿದ್ದರು. ಆದರೆ, ಮೃತನ ಜೇಬಲ್ಲಿದ್ದ ಸುಣ್ಣದ ಡಬ್ಬಿಯಲ್ಲಿ ಕೊಲೆ ಮಾಡಿದ ಹಂತಕನ ನಂಬರ್ ಇತ್ತು. ಇದು ಕೊಲೆ ಆರೋಪಿ ಯಾರು ಎಂದು ತಿಳಿಯಲು ಪೊಲೀಸರಿಗೆ ನೆರವಾಗಿದೆ.

ಕೊಲೆಯಾದ ಸಂಗಮೇಶ ಬೈಲಹೊಂಗಲ ಹಾಗೂ ಬೆಳಗಾವಿಯಲ್ಲಿ ಈರುಳ್ಳಿ ವ್ಯಾಪಾರ ಮಾಡಿಕೊಂಡಿದ್ದ. ಆದರೆ, ಬಂದ ಹಣದಲ್ಲಿ ನಿತ್ಯ ಮದ್ಯಪಾನ ಮಾಡುವುದೇ ಕಾಯಕ ಮಾಡಿಕೊಂಡಿದ್ದ. ಕುಡಿದು ಮನೆಯಲ್ಲಿ ನಿತ್ಯ ಗಲಾಟೆ ಮಾಡುತ್ತಿದ್ದ ಎಂದು ತಂದೆಯೇ ಸುಪಾರಿ ಕೊಟ್ಟು ಮಗನ ಕೊಲೆ ಮಾಡಿಸಿದ್ದಾನೆ.

ಇದನ್ನೂ ಓದಿ | Self Harming : 3 ಕಂದಮ್ಮಗಳ ಜತೆ ಬಾವಿಗೆ ಹಾರಿದರೂ ಬದುಕುಳಿದ ತಾಯಿ; ಮಕ್ಕಳು ಮೃತ್ಯು

ಮೃತ ಸಂಗಮೇಶನ ತಂದೆ ಮಾರುತೆಪ್ಪ ಸದ್ಯ ರಕ್ತದ ಒತ್ತಡ, ಶುಗರ್ ಸಮಸ್ಯೆಯಿಂದ ಬೆಳಗಾವಿಯ ಖಾಸಗಿ ಆಸ್ಪತ್ರೆ ಸೇರಿದ್ದಾರೆ. ಪ್ರಕರಣದಲ್ಲಿ ಇಬ್ಬರು ಆರೋಪಿಗಳನ್ನು ಬಂಧಿಸಿರುವ ಮುರುಗೋಡ ಪೊಲೀಸರು, ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆ ವಿದ್ಯಾರ್ಥಿನಿ ಆತ್ಮಹತ್ಯೆ

ರಾಯಚೂರು: ದೇವದುರ್ಗದ ವಸತಿ ಶಾಲೆಯಲ್ಲಿ 10ನೇ ತರಗತಿ ಓದುತ್ತಿದ್ದ ವಿದ್ಯಾರ್ಥಿನಿಯೊಬ್ಬಳು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಬಿ.ಆರ್.ಗುಂಡಾ ಗ್ರಾಮದ ವಿದ್ಯಾರ್ಥಿನಿ ಪವಿತ್ರ(15) ಆತ್ಮಹತ್ಯೆ ಮಾಡಿಕೊಂಡವಳು.

ಆಕೆಗೂ ಓದುವುದು ಇಷ್ಟವಿರಲಿಲ್ಲ ಎನ್ನಲಾಗಿದೆ. ಶಾಲೆಗೆಂದು ಹೋದವಳು ಶಾಲೆ ತಪ್ಪಿಸಿ ಮನೆಗೆ ಬರುತ್ತಿದ್ದಳು. ಇದರಿಂದ ಬೇಸರಗೊಂಡ ಮನೆಯವರು ಆಕೆಗೆ ಬುದ್ಧಿ ಹೇಳಿದ್ದರು. ಜತೆಗೆ ಗುರುವಾರ ಆಕೆಯನ್ನು ವಸತಿ ಶಾಲೆಗೆ ಬಿಟ್ಟು ಹೋಗಿದ್ದರು. ಈ ನಡುವೆ ಆಕೆ ತರಗತಿ ಸಮಯದಲ್ಲೇ ಕೋಣೆಗೆ ಬಂದು ಫ್ಯಾನ್‌ಗೆ ವೇಲ್ ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.

ಇದನ್ನೂ ಓದಿ | Elephant Attack : ಆನೆ ದಾಳಿಗೆ ಕೃಷಿಕ ಬಲಿ; ಹಸುವನ್ನು ಹುಡುಕಿ ಹೋದಾಗ ಬೆನ್ನಟ್ಟಿದ ಗಜರಾಜ, ಕೊಡಗಿನಲ್ಲಿ ವಾರದಲ್ಲಿ 2 ಸಾವು

ಆತ್ಮಹತ್ಯೆಗೆ ಬೇರೆ ಏನಾದರೂ ಕಾರಣವಿದೆಯೇ ಎನ್ನುವುದು ಸ್ಪಷ್ಟವಾಗಿಲ್ಲ. ಪೊಲೀಸರು ಆಕೆಯ ಪೂರ್ವಾಪರಗಳನ್ನು ವಿಚಾರಿಸುತ್ತಿದ್ದಾರೆ. ಸ್ಥಳಕ್ಕೆ ಪೊಲೀಸರು ಹಾಗೂ ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ದೇವದುರ್ಗ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

Exit mobile version