Site icon Vistara News

Dengue news | ಕೊರೊನಾ ಭೀತಿಯ ನಡುವೆ ಕಾಡುತ್ತಿದೆ ಡೆಂಗೆ ಜ್ವರ, ಕಳೆದ ವರ್ಷಕ್ಕಿಂತ ದುಪ್ಪಟ್ಟು

ಕೊರೋನಾ

ಬೆಂಗಳೂರು : ರಾಜ್ಯದಲ್ಲಿ ಕೋವಿಡ್‌ ಸೋಂಕಿತರ ಸಂಖ್ಯೆ ದಿನೇ ದಿನೆ ಏರಿಕೆಯಾಗುತ್ತಿದೆ. ಕಳೆದ 10 ದಿನದಲ್ಲಿ ಸೋಂಕಿನ ಪ್ರಮಾಣ ಮೂರು ಪಟ್ಟು ಹೆಚ್ಚಾಗಿದೆ. ಏಳು ದಿನಗಳಲ್ಲಿ‌ ಒಟ್ಟು 2,845 ಪಾಸಿಟಿವ್ ಪ್ರಕರಣಗಳು ದಾಖಲಾಗಿವೆ. ಕೊರೋನಾ ಅಬ್ಬರದ ನಡುವೆಯೇ ಡೆಂಗೆ (Dengue news) ಕೂಡ ಜಾಸ್ತಿಯಾಗುತ್ತಿದೆ. ರಾಜ್ಯ ಆರೋಗ್ಯ ಇಲಾಖೆಯ ಅಂಕಿ-ಅಂಶಗಳ ಪ್ರಕಾರ ಈ ತಿಂಗಳ 10ರವರೆಗೆ ರಾಜ್ಯದಲ್ಲಿ 1,838 ಡೆಂಗೆ ಪ್ರಕರಣಗಳು ವರದಿಯಾಗಿವೆ. ಕಳೆದ ವರ್ಷಕ್ಕೆ ಹೋಲಿಸಿದರೆ ಈ ಬಾರಿ ಡೆಂಗೆ ಪ್ರಕರಣ ಶೇಕಡಾ 50ರಷ್ಟು ಏರಿಕೆಯಾಗಿದೆ.

ಇದನ್ನೂ ಓದಿ | COVID-19 | ಕೊರೋನಾ ನಾಲ್ಕನೇ ಅಲೆಯಲ್ಲ, ಇದು ʼಬ್ಲಿಪ್‌ʼ!

ಮಳೆಯಿಂದ ಜಾಸ್ತಿಯಾದ ಡೆಂಗೆ ಪ್ರಕರಣ

ರಾಜ್ಯದಲ್ಲಿ ಈಗಾಗಲೇ ಮಳೆಗಾಲ ಶುರುವಾಗಿದೆ. ಸಾಮಾನ್ಯವಾಗಿ ಎಲ್ಲೆಡೆ ಇತರೆ ಸಾಂಕ್ರಾಮಿಕ ರೋಗದ ಜತೆಗೆ ಡೆಂಗೆ ಕೂಡ ಶುರುವಾಗಿದೆ. ಮುಂಗಾರು ಆರಂಭವಾಗುತ್ತಿದಂತೆಯೇ ಈಡಿಸ್‌ ಸೊಳ್ಳೆ, ನಿಂತ ನೀರಿನಲ್ಲಿ ಮೊಟ್ಟೆ ಇಟ್ಟು ಸಂತಾನೋತ್ಪತ್ತಿ ಆರಂಭಿಸುತ್ತದೆ. ಈ ಸೊಳ್ಳೆ ಕಚ್ಚಿದರೆ ಡೆಂಗೆ ಜ್ವರ ಕಾಣಿಸಿಕೊಳ್ಳುತ್ತದೆ.

ಮೂರು ಹಂತಗಳಲ್ಲಿ ಹರಡುವ ಡೆಂಗೆ

ಹಗಲು ಹೊತ್ತಿನಲ್ಲಿ ಕಚ್ಚುವ ಸೊಳ್ಳೆಯಿಂದ ಡೆಂಗೆ ಹರಡುತ್ತದೆ. ಸೊಳ್ಳೆಗಳು ಸಂಗ್ರಹಿಸಿಟ್ಟ ತಿಳಿ ನೀರಿನಲ್ಲಿ ಮೊಟ್ಟೆ ಇಟ್ಟು ಸಂತಾನೋತ್ಪತ್ತಿ ಮಾಡುತ್ತವೆ. ಕೆಲವೊಮ್ಮೆ ರೋಗಿಗೆ ರಕ್ತ ನೀಡುವುದು ಅನಿವಾರ್ಯವಾಗುತ್ತದೆ.

ರಾಜ್ಯಾದ್ಯಂತ ಡೆಂಗೆ ಪ್ರಕರಣ ಏರಿಕೆ

ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿಯೇ ಡೆಂಗೆ ಪ್ರಕರಣಗಳು ಅಧಿಕವಾಗಿದೆ. ಬಿಬಿಎಂಪಿ ವ್ಯಾಪ್ತಿಯಲ್ಲಿ ಇದುವರೆಗೆ 388 ಪ್ರಕರಣಗಳು ವರದಿಯಾಗಿವೆ. ಇನ್ನು ಉಡುಪಿಯಲ್ಲಿ 217 ಪ್ರಕರಣಗಳು, ಮೈಸೂರಿನಲ್ಲಿ 171 ಪ್ರಕರಣಗಳು, ಚಿತ್ರದುರ್ಗದಲ್ಲಿ 105 ಪ್ರಕರಣಗಳು, ಕೊಪ್ಪಳದಲ್ಲಿ 94 ಪ್ರಕರಣಗಳು ವರದಿಯಾಗಿವೆ.

ಸೋಂಕು ನಿಯಂತ್ರಣಕ್ಕೆ ಸರ್ಕಾರದ ಕ್ರಮ

ಡೆಂಗೆ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ರಾಜ್ಯ ಸರಕಾರ ಈಗಾಗಲೇ ಕಟ್ಟುನಿಟ್ಟಿನ ಕ್ರಮಕ್ಕೆ ಮುಂದಾಗಿದೆ. ಈಡಿಸ್‌ ಸೊಳ್ಳೆ ಸಂತಾನೋತ್ಪತ್ತಿಯನ್ನು ತಗ್ಗಿಸುವ ಜಾಗೃತಿ ಮೂಡಿಸಲು ತಯಾರಿ ಆಗುತ್ತಿದೆ. ಈ ನಿಟ್ಟಿನಲ್ಲಿ ವಹಿಸಬೇಕಾದ ಕ್ರಮಗಳ ಬಗ್ಗೆ ಆಶಾ ಕಾರ್ಯಕರ್ತೆಯರು ಮತ್ತು ಆರೋಗ್ಯ ಸಹಾಯಕರಿಂದ ಗ್ರಾಮೀಣ ಮತ್ತು ನಗರ ಪ್ರದೇಶಗಳ ಜನರಲ್ಲಿ ಪ್ರತಿನಿತ್ಯ ಜಾಗೃತಿ ಮೂಡಿಸುತ್ತಿದ್ದಾರೆ.

ಇದನ್ನೂ ಓದಿ | IPL 2022 | ಐಪಿಎಲ್‌ ಬಬಲ್‌ ಒಳಗೆ ಸೇರಿದೆ ಕೊರೋನಾ

Exit mobile version