Site icon Vistara News

Fertilizer Scarcity | ಕೊಪ್ಪಳದಲ್ಲಿ ಯೂರಿಯಾಕ್ಕಾಗಿ ಸಾಲು ಚಪ್ಪಲಿಗಳು; ಸಿಎಂ ಮೇಲೆ ಅನ್ನದಾತನ ಆಕ್ರೋಶ

koppala farmer protest_sandals

ಕೊಪ್ಪಳ: ಜಿಲ್ಲೆಯಲ್ಲಿ ಯೂರಿಯಾ ಗೊಬ್ಬರಕ್ಕಾಗಿ (Fertilizer Scarcity) ರೈತರ ಪರದಾಟ ಮುಂದುವರಿದಿದ್ದು, ಒಂದು ತಿಂಗಳಿನಿಂದ ಸರದಿ ಸಾಲಿನಲ್ಲಿ ನಿಲ್ಲುವುದು ತಪ್ಪುತ್ತಿಲ್ಲ. ಸೋಮವಾರ (ಆ.೧) ವಿವಿಧ ಕಾರ್ಯಕ್ರಮಗಳ ಸಲುವಾಗಿ ಜಿಲ್ಲೆಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಆಗಮಿಸಲಿರುವ ಹಿನ್ನೆಲೆಯಲ್ಲಿ ರೈತರ ಆಕ್ರೋಶ ಇನ್ನೂ ಹೆಚ್ಚಿದೆ. ನಮಗೆ ಗೊಬ್ಬರ ಕೊಡಲಾಗದೆ ಅವರು ಜಿಲ್ಲೆಗೆ ಯಾಕೆ ಬರುತ್ತಿದ್ದಾರೆ ಎಂದು ಪ್ರಶ್ನೆ ಮಾಡುತ್ತಿದ್ದಾರೆ.

ಸೊಸೈಟಿ ಮುಂದೆ ಯೂರಿಯಾ ಗೊಬ್ಬರಕ್ಕಾಗಿ ಕಾಯುತ್ತಿರುವ ರೈತರು ಸರ್ಕಾರದ ವಿರುದ್ಧ ಘೋಷಣೆ ಕೂಗಿದರು.

ಚಪ್ಪಲಿ ಸಾಲುಗಳು

ಟಿಎಪಿಎಂಎಸ್ ಮುಂದೆ ನೂರಾರು ರೈತರು ಸಾಲುಗಟ್ಟಿ ನಿಲ್ಲುತ್ತಿದ್ದಾರೆ. ಗಣಿ ಸಚಿವ ಹಾಲಪ್ಪ ಆಚಾರ್ ಸ್ವಗ್ರಾಮದಲ್ಲಿ ಸಹ ಸೊಸೈಟಿ ಮುಂದೆ ಯೂರಿಯಾ ಗೊಬ್ಬರಕ್ಕಾಗಿ ರೈತರು ಸರತಿ ಸಾಲಿನಲ್ಲಿ ನಿಂತಿದ್ದಾರೆ. ಅಲ್ಲದೆ, ಕೆಲವು ರೈತರು ತಮ್ಮ ಪಾದರಕ್ಷೆಗಳನ್ನು ಸರತಿ ಸಾಲಿನಲ್ಲಿ ಇಟ್ಟು ಪಕ್ಕದಲ್ಲಿ ಕುಳಿತ ದೃಷ್ಯವೂ ಸಾಮಾನ್ಯವಾಗಿತ್ತು.

ಬೆಳಗ್ಗೆ 10 ಗಂಟೆಗೆ ಆರಂಭವಾಗುವ ಟಿಎಪಿಎಸ್ಎಂಎಸ್ ಮುಂದೆ ಮುಂಜಾನೆ 4 ಗಂಟೆಗೆ ರೈತರು ಸರದಿಯಲ್ಲಿ ನಿಲ್ಲುತ್ತಿದ್ದಾರೆ. ಇಷ್ಟಾದರೂ ಕೆಲವರಿಗೆ ಯೂರಿಯಾ ಗೊಬ್ಬರ ಸಿಗುತ್ತಿಲ್ಲ ಎಂದು ರೈತರು ಆರೋಪಿಸುತ್ತಿದ್ದಾರೆ. ರೈತರಿಗೆ ಸಮರ್ಪಕ ಗೊಬ್ಬರ ಕೊಡಲಾಗದ ಮುಖ್ಯಮಂತ್ರಿ ಅವರು ನಮ್ಮ ಜಿಲ್ಲೆಗೆ ಯಾಕೆ ಬರುತ್ತಿದ್ದಾರೆ ಎಂದು ಸಿಎಂ ಈಗ ಯಾಕೆ ಬರುತ್ತಾರೆ ಎಂದು ರೈತರ ಆಕ್ರೋಶವನ್ನು ಹೊರಹಾಕುತ್ತಿದ್ದರು.

Exit mobile version