Site icon Vistara News

Festival tragedy : ಗೋಲಕೇರಿ ಜಾತ್ರೆಯಲ್ಲಿ ರಥದ ಮೇಲಿಂದ ಬಿದ್ದು ಸಾವು, ಇನ್ನೊಂದು ಕಡೆ ಚಕ್ರಕ್ಕೆ ಸಿಲುಕಿದ ಕಾಲು

Temple festival

#image_title

ವಿಜಯಪುರ: ವಿಜಯಪುರ ಜಿಲ್ಲೆಯ ಎರಡು ಕಡೆ ರಥೋತ್ಸವದ ವೇಳೆ ಸಂಭವಿಸಿದ ದುರಂತದಲ್ಲಿ ಒಬ್ಬರು ಮೃತಪಟ್ಟರೆ ಇನ್ನೊಬ್ಬರು ಗಾಯಗೊಂಡಿದ್ದಾರೆ.

ರಥದಿಂದ ಬಿದ್ದು ಮೃತ್ಯು

ಸಿಂದಗಿ ತಾಲೂಕಿನ ಗೋಲಗೇರಿ ಗ್ರಾಮದಲ್ಲಿ ನಡೆಯುತ್ತಿದ್ದ ಗೊಲ್ಲಾಳೇಶ್ವರ ರಥೋತ್ಸವದ ವೇಳೆ ನಡೆದ ಅವಘಡದಲ್ಲಿ ವ್ಯಕ್ತಿಯೊಬ್ಬ ಸಾವನ್ನಪ್ಪಿದ್ದಾರೆ. ಮೃತರನ್ನು ಸಾಹೇಬ ಪಟೇಲ ಖಾಜಾಪಟೇಲ ಕಾಚಾಪೂರ(55) ಎಂದು ಗುರುತಿಸಲಾಗಿದೆ.

ಮೃತ ವ್ಯಕ್ತಿಯನ್ನು ಊರ ಜನರು ಮುದುಕಪ್ಪ ಅಂತಲೇ ಕರೆಯುತ್ತಿದ್ದರು. ತನ್ನ 18ನೇ ವಯಸ್ಸಿನಿಂದಲೂ ತೇರಿನ ಕಳಶ ಮತ್ತು ಕೊಡೆಯನ್ನು ಕಟ್ಟುತ್ತಿದ್ದ ಇವರು ಈ ವರ್ಷ ಸಹ ರಥೋತ್ಸವಕ್ಕೂ ಮುನ್ನ ಇದೇ ಕೆಲಸದಲ್ಲಿ ನಿರತನಾಗಿದ್ದರು. ಈ ವೇಳೆ ಕೈಯಲ್ಲಿದ್ದ ಹಗ್ಗ ಕೊಸರಿದ ಕಾರಣ ರಥದ ತುದಿಯಿಂದ ಕೆಳಗೆ ಬಿದ್ದಿದ್ದಾರೆ.

ಕೆಳಗೆ ಬೀಳುವ ವೇಳೆ ರಥವು ಬಡಿದು ರಥೋತ್ಸವದಲ್ಲಿ ಪಾಲ್ಗೊಂಡಿದ್ದ ಜನರ ಮೇಲೆ ಬಿದ್ದಿದ್ದಾರೆ. ಕೂಡಲೇ ಆಸ್ಪತ್ರೆಗೆ ಸಾಗಿಸಲು ಯತ್ನಿಸಲಾಯಿತಾದರೂ ಮಾರ್ಗ ಮಧ್ಯೆ ಸಾವನ್ನಪ್ಪಿದ್ದಾರೆ ಎನ್ನಲಾಗುದೆ. ಘಟನೆಯಲ್ಲಿ ಓರ್ವ ವ್ಯಕ್ತಿಯು ಕಾಲು ಮುರಿತಕ್ಕೊಕ್ಕಳಗಾಗಿದೆ ಎನ್ನಲಾಗಿದೆ. ಘಟನೆ ಹಿನ್ನಲೆ ರಥೋತ್ಸವವನ್ನು ರದ್ದುಗೊಳಿಸಲಾಗಿದೆ.

ರಥದ ಚಕ್ರಕ್ಕೆ ಸಿಲುಕಿದ ಕಾಲು

ಮತ್ತೊಂದೆಡೆ ಮುದ್ದೇಬಿಹಾಳ ತಾಲೂಕಿನ ಬಸರಕೋಡ ಗ್ರಾಮದಲ್ಲಿ ನಡೆಯುತ್ತಿದ್ದ ರಥೋತ್ಸವ ವೇಳೆ ಅವಘಡ ಸಂಭವಿಸಿ ಒಬ್ಬರ ಕಾಲಿಗೆ ಗಂಭೀರ ಗಾಯಗಳಾಗಿವೆ. ಬಸರಕೋಡದ ಪವಾಡ ಬಸವೇಶ್ವರ ಜಾತ್ರೆ ಅಂಗವಾಗಿ ಹಮ್ಮಿಕೊಳ್ಳಲಾಗಿದ್ದ ರಥೋತ್ಸವದ ವೇಳೆ ಒಬ್ಬ ವ್ಯಕ್ತಿಯ ಕಾಲಿನ ಮೇಲೆಯೇ ಚಕ್ರ ಹರಿದಿದೆ.

ರಥದ ಚಕ್ರದಡಿ ಸಿಲುಕಿದ ವ್ಯಕ್ತಿಯನ್ನು ರಕ್ಷಿಸುತ್ತಿರುವುದು.

ವ್ಯಕ್ತಿಯ ಎರಡೂ ಕಾಲುಗಳ ಮೇಲೆ ರಥದ ಕಲ್ಲಿನ ಚಕ್ರಗಳು ಹರಿದಿದ್ದು, ಕೂಡಲೇ ಅವರ ಕಾಲುಗಳನ್ನು ಚಕ್ರದಿಂದ ತಪ್ಪಿಸಿ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಕಾಲುಗಳು ಸಂಪೂರ್ಣವಾಗಿ ಮುರಿತಕ್ಕೆ ಒಳಗಾಗಿವೆ.

ಇದನ್ನೂ ಓದಿ : Road Accident : ಬೈಕ್‌ಗೆ ಬಸ್‌ ಡಿಕ್ಕಿ; ಮಾರುಕಟ್ಟೆಗೆ ಹೂವು ತೆಗೆದುಕೊಂಡು ಹೋಗುತ್ತಿದ್ದ ರೈತ ಮೃತ್ಯು

Exit mobile version