Site icon Vistara News

ವಿಸ್ತಾರ ನ್ಯೂಸ್‌ ಕಚೇರಿಗೆ ಖ್ಯಾತ ನಿರ್ದೇಶಕ ಗಿರೀಶ್‌ ಕಾಸರವಳ್ಳಿ ಭೇಟಿ

kasaravalli

ಬೆಂಗಳೂರು: ರಾಷ್ಟ್ರ-ಅಂತಾರಾಷ್ಟ್ರೀಯ ಮಟ್ಟದ ಹಲವಾರು ಪ್ರತಿಷ್ಠಿತ ಪ್ರಶಸ್ತಿಗಳಿಗೆ ಪಾತ್ರರಾಗಿರುವ ಹಿರಿಯ ಚಿತ್ರ ನಿರ್ದೇಶಕ ಗಿರೀಶ್‌ ಕಾಸರವಳ್ಳಿ ಅವರು ವಿಸ್ತಾರ ನ್ಯೂಸ್‌ ಕಚೇರಿಗೆ ಸೋಮವಾರ ಭೇಟಿ ನೀಡಿ ಶುಭ ಹಾರೈಸಿದರು.

ವಿಸ್ತಾರ ನ್ಯೂಸ್‌ ವೆಬ್‌ಸೈಟ್‌ನ ವೈವಿಧ್ಯಮಯ ಸುದ್ದಿ, ಉಪಯುಕ್ತ ಮಾಹಿತಿ, ಮನರಂಜನೆ ಇತ್ಯಾದಿಗಳ ಬಗ್ಗೆ ಅವರು ಮೆಚ್ಚುಗೆ ವ್ಯಕ್ತಪಡಿಸಿದರು. ಹಣಕಾಸು, ಆರೋಗ್ಯ, ಅಧ್ಯಾತ್ಮ ಮತ್ತು ಸಿನಿಮಾ ಕುರಿತ ವಿಸ್ತಾರ ಯುಟ್ಯೂಬ್‌ ಚಾನೆಲ್‌ಗಳ ಬಗ್ಗೆ ಕಾಸರವಳ್ಳಿ ಅವರು ಮಾಹಿತಿ ಪಡೆದರು. ಸಂಗೀತ ಮತ್ತು ಮನರಂಜನಾ ಚಾನೆಲ್‌ಗಳನ್ನು ವಿಸ್ತಾರ ಮೀಡಿಯಾ ಸದ್ಯದಲ್ಲೇ ಆರಂಭಿಸಲಿರುವ ಬಗ್ಗೆ ಕಾಸರವಳ್ಳಿ ಅವರು ಸಂತಸ ವ್ಯಕ್ತಪಡಿಸಿದರು.

ವಿಸ್ತಾರ ಮೀಡಿಯಾದ ಕಾರ್ಯ ಯೋಜನೆ ಮತ್ತು ಸಂಸ್ಥೆ ಅಳವಡಿಸಿಕೊಂಡಿರುವ ಅತ್ಯಾಧುನಿಕ ತಂತ್ರಜ್ಞಾನಗಳ ಬಗ್ಗೆ ಸಿಇಒ, ಪ್ರಧಾನ ಸಂಪಾದಕ ಹರಿಪ್ರಕಾಶ್‌ ಕೋಣೆಮನೆ ಮತ್ತು ಚೇರ್ಮನ್‌, ಎಂಡಿ ಎಚ್‌. ವಿ ಧರ್ಮೇಶ್‌ ಅವರು ಕಾಸರವಳ್ಳಿ ಅವರಿಗೆ ವಿವರಿಸಿದರು. ವಿಸ್ತಾರ ನ್ಯೂಸ್‌ ಕಾರ್ಯ ನಿರ್ವಾಹಕ ಸಂಪಾದಕ ಶರತ್‌ ಎಂ. ಎಸ್‌, ಲೇಖಕಿ, ವಿಸ್ತಾರ ನ್ಯೂಸ್‌ ಅಂಕಣಕಾರ್ತಿ ಕುಸುಮಾ ಆಯರಹಳ್ಳಿ ಜತೆಗಿದ್ದರು.

ಖ್ಯಾತ ನಿರ್ದೇಶಕ ಗಿರೀಶ್‌ ಕಾಸರವಳ್ಳಿ ಜತೆ ವಿಸ್ತಾರ ನ್ಯೂಸ್‌ ತಂಡ.

ಇದನ್ನೂ ಓದಿ | ವಿಸ್ತಾರ ನ್ಯೂಸ್‌ ಚಾನೆಲ್‌ ಉದ್ಘಾಟನೆ: ತುಮಕೂರು ಮಠದ ಶ್ರೀ ವೀರೇಶಾನಂದ ಸರಸ್ವತೀ ಸ್ವಾಮೀಜಿಗಳಿಗೆ ಆಹ್ವಾನ

Exit mobile version