ಕಲಬುರಗಿ, ಕರ್ನಾಟಕ: ಏನಾದರೂ ಮಾಡಿ ಬಿಜೆಪಿ ಪಕ್ಷದವರು ನನ್ನನ್ನು ಮುಗಿಸಲು ಪ್ಲ್ಯಾನ್ ಮಾಡುತ್ತಿದ್ದಾರೆ. ಬಿಜೆಪಿ ಅಭ್ಯರ್ಥಿಯೊಬ್ಬರು ಮಲ್ಲಿಕಾರ್ಜನ ಖರ್ಗೆ ಕುಟುಂಬವನ್ನು ಮುಗಿಸಬೇಕು ಬಹಿರಂಗವಾಗಿ ಹೇಳುತ್ತಿದ್ದಾರೆ. ಆ ವ್ಯಕ್ತಿಗೆ ಬಿಜೆಪಿಯ ಬೆಂಬಲವಿದೆ. ಹಾಗಾಗಿ, ಆ ವ್ಯಕ್ತಿ ಧಮ್ಕಿ ಹಾಕುತ್ತಿದ್ದಾನೆ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ (Mallikarjun Kharge) ಅವರು ಹೇಳಿದರು(Karnataka Election 2023).
ಏಕ್ ಬಾರ್ ಬಾಪ್ ಬೋಲ್ತಾ.. ಏಕ್ ಬಾರ್ ಬೇಟಾ ಬೋಲ್ತಾ ಅಂತಾ ನನ್ನ ವಿರುದ್ಧ ಪ್ಲಾನ್ ಮಾಡುತ್ತಿದ್ದಾರೆ. ನನ್ನ ಕುಟುಂಬ ಅಳಿಸಿಹೋಗಿದೆ. ಯಾರು ಇಲ್ಲ. ನಾನೊಬ್ವನೇ ಬದುಕಿದ್ದೆ. ನನ್ನನ್ನು ಮುಗಿಸಿದರೆ ನಿಮಗೆ ಅನುಕೂಲ ಆಗುತ್ತೆ ಅಂದ್ರೆ ಮುಗಿಸಿ. ನಿಮ್ಮ ಭ್ರಷ್ಟಾಚಾರ ದ ಬಗ್ಗೆ ಮಾತನಾಡಿದ್ದಕ್ಕೆ ಈ ಬೆದರಿಕೆ ಅಲ್ಲವೇ? ನನ್ನನ್ನು ಮುಗಿಸಿದರೆ ಮತ್ತೊಬ್ಬರು ನಿಮ್ಮ ಭ್ರಷ್ಟಾಚಾರದ ಬಗ್ಗೆ ಮಾತನಾಡಲು ಹುಟ್ಟುತ್ತಾರೆ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಹೇಳಿದರು.
ಕಲಬುರಗಿ ದಕ್ಷಿಣ ಅಭ್ಯರ್ಥಿ ಅಲ್ಲಮಪ್ರಭು ಪಾಟೀಲ್ ಪರ ಪ್ರಚಾರ ಮಾಡಿ, ಬಸ್ ನಿಲ್ದಾಣದ ಬಳಿಯ ಕಿಣ್ಣಿಮಾರ್ಕೇಟ್ ಮೈದಾನದಲ್ಲಿ ಆಯೋಜಿಸಲಾಗಿದ್ದ ಬೃಹತ್ ಸಮಾವೇಶದಲ್ಲಿ ಮಾತನಾಡಿದ ಎಐಸಿಸಿ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು, ಹತ್ಯೆಯ ಬೆದರಿಕೆ ಹಾಕಿರುವ ಕಮಲ ಪಕ್ಷದ ಅಭ್ಯರ್ಥಿಗೆ ಬಿಜೆಪಿಯ ಬೆಂಬಲ ಇದೆ ಎಂದು ಹೇಳಿದರು.
ಇದನ್ನೂ ಓದಿ: Karnataka Election 2023: ಪ್ರಣಾಳಿಕೆ ಸುಟ್ಟು ಜನರಿಗೆ ಅವಮಾನ ಮಾಡಿದ್ದಾರೆ ಈಶ್ವರಪ್ಪ: ಮಲ್ಲಿಕಾರ್ಜುನ ಖರ್ಗೆ ಆಕ್ರೋಶ
ಏನಾದರೂ ಮಾಡಿ ನನ್ನ ಮುಗಿಸಬೇಕು ಅಂತಾ ಬಿಜೆಪಿಯವರು ಪ್ಲಾನ್ ಮಾಡುತ್ತಿದ್ದಾರೆ. ಮಲ್ಲಿಕಾರ್ಜುನ ಖರ್ಗೆ ಕುಟುಂಬವನ್ನ ಮುಗಿಸಬೇಕು ಅಂತಾ ಬಹಿರಂಗವಾಗಿ ಹೇಳುತ್ತಿದ್ದಾನೆ. ಆ ವ್ಯಕ್ತಿಯ ಹಿಂದೆ ಬಿಜೆಪಿ ನಾಯಕರು ಬೆನ್ನೆಲುಬಾಗಿ ಇದಾರೆ ಅಂತಾ ಆ ರೀತಿ ಹೇಳಿದ್ದಾನೆ. ನನ್ನ ಹಿಂದೆ ಜನ ಇರೋವರೆಗೂ ಯಾರಿಂದಲೂ ನನಗೆ ಟಚ್ ಮಾಡೋಕೆ ಸಾಧ್ಯವಿಲ್ಲ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಹೇಳಿದರು.