Site icon Vistara News

Fire Accident: ವಿಜಯಪುರದಲ್ಲಿ ಗುಡಿಸಲಿಗೆ ತಗುಲಿದ ಆಕಸ್ಮಿಕ ಬೆಂಕಿ; ವೃದ್ಧ ದಂಪತಿ ಸಜೀವ ದಹನ

Fire breaks out in hut in Vijayapura, Elderly couple burnt alive

Fire breaks out in hut in Vijayapura, Elderly couple burnt alive

ವಿಜಯಪುರ/ಹುಬ್ಬಳ್ಳಿ: ವಿಜಯಪುರ ಜಿಲ್ಲೆಯ ಚಡಚಣ ಪಟ್ಟಣದ ಹೊರವಲಯದಲ್ಲಿ ಗುಡಿಸಲಿನಲ್ಲಿ ವಾಸವಿದ್ದ ವೃದ್ಧ ದಂಪತಿ ಸಜೀವ (Fire Accident) ದಹನವಾಗಿದ್ದಾರೆ. ಗುಡಿಸಲಿನಲ್ಲಿ ಆಕಸ್ಮಿಕವಾಗಿ ಬೆಂಕಿ ಅವಘಡ ಸಂಭವಿಸಿದ್ದು, ಕರೀಮಸಾಬ ಇಮಾಮಸಾಬ ಟಪಾಲ (85), ಸಾಜನಬಿ ಕರೀಮಸಾಬ ಟಪಾಲ (75) ಮಲಗಿದ್ದಲ್ಲೇ ಸುಟ್ಟು ಕರಕಲು ಆಗಿದ್ದಾರೆ.

Fire Accident

ಗುಡಿಸಲಿನಲ್ಲಿ ಮಲಗಿದ ವೇಳೆ ಚಿಮಣಿಯಿಂದ ಬೆಂಕಿ ತಗುಲಿದ್ದು, ಕ್ಷಣಾರ್ಧದಲ್ಲಿಯೇ ಗುಡಿಸಲಿಗೆ ಆವರಿಸಿದೆ. ಇದರಿಂದ ಗುಡಿಸಲು ಸುಟ್ಟು ಭಸ್ಮ ಆಗಿದ್ದು, ಇಬ್ಬರು ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. ಇತ್ತ ಸಂಬಂಧಿಕರ ಆಕ್ರಂದನ ಮುಗಿಲು ಮುಟ್ಟಿದ್ದು, ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಚಡಚಣ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ನೃಪತುಂಗ ಬೆಟ್ಟಕ್ಕೆ ಬೆಂಕಿ ಹಾಕಿದ ಕಿಡಿಗೇಡಿಗಳು

ಹುಬ್ಬಳ್ಳಿಯ ನೃಪತುಂಗ ಬೆಟ್ಟಕ್ಕೆ ಕೆಲ ಕಿಡಿಗೇಡಿಗಳು ಬೆಂಕಿ ಹಚ್ಚಿದ್ದು, ಇದರಿಂದಾಗಿ ಅಪಾರ ಪ್ರಮಾಣದ ಗಿಡಗಳು ನಾಶವಾಗಿವೆ. ಕಿಡಿಗೇಡಿಗಳನ್ನು ಪತ್ತೆ ಹಚ್ಚಿ ಕಾನೂನು ಕ್ರಮ ಕೈಗೊಳ್ಳುವಂತೆ ಪರಿಸರ ಪ್ರೇಮಿಗಳು ಆಗ್ರಹಿಸಿದ್ದಾರೆ. ಬೆಟ್ಟದಲ್ಲಿ ಸಾವಿರಾರು ಶ್ರೀಗಂಧ, ಹಣ್ಣಿನ ಗಿಡಗಳನ್ನು ಸ್ಥಳೀಯರು ನೆಟ್ಟಿದ್ದರು.

ಇದನ್ನೂ ಓದಿ: Road accident: ಕೊಪ್ಪಳದಲ್ಲಿ ಟ್ರ್ಯಾಕ್ಟರ್‌-ಕಾರು ನಡುವೆ ಅಪಘಾತಕ್ಕೆ ಮಗು ಬಲಿ; ಮುಂಡರಗಿಯಲ್ಲಿ ಪೊಲೀಸ್‌ ಪೇದೆ ಸಾವು

ನೃಪತುಂಗ ಬೆಟ್ಟದಲ್ಲಿ ಅರಣ್ಯೀಕರಣ ಮಾಡಲು ಹಲವರು ಶ್ರಮಪಡುತ್ತಿದ್ದರೆ, ರಾತ್ರಿ ಸಮಯ ಬೆಂಕಿ ಹಚ್ಚಿ ಮರಗಳನ್ನು ಸುಟ್ಟು ಹಾಕಿದ್ದಾರೆ ಎಂದು ಕಿಡಿಕಾರಿದ್ದಾರೆ. ಅರಣ್ಯ ಇಲಾಖೆಯೇ ನೃಪತುಂಗ ಬೆಟ್ಟವನ್ನು ನಿರ್ವಹಣೆ ಮಾಡುತ್ತಿದೆ. ಒಣಹುಲ್ಲು, ಕಸ ಸುಡುವ ನೆಪದಲ್ಲಿ ಅರಣ್ಯ ಇಲಾಖೆ ಸಿಬ್ಬಂದಿ ಬೆಟ್ಟಕ್ಕೆ ಬೆಂಕಿ ಹಚ್ಚಿರಬಹುದೆಂದು ಪರಿಸರ ಪ್ರೇಮಿಗಳು ಆರೋಪಿಸಿದ್ದಾರೆ.

ಕರ್ನಾಟಕದ ಸುದ್ದಿಗಾಗಿ ಈ ಲಿಂಕ್‌ ಕ್ಲಿಕ್‌ ಮಾಡಿ

Exit mobile version